KPSC 29 ಅಕ್ಟೋಬರ್ 2021 4 years ago
Published by Basavaraj Halli

ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 30/07/2021ರ ಅಧಿಸೂಚನೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 30/07/2021ರ ಅಧಿಸೂಚನೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 30/07/2021ರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿನಾಂಕ 27 ನವೆಂಬರ್ 2021 ರಿಂದ 29 ನವೆಂಬರ್ 2021ರವರೆಗೆ ನಿಗದಿಪಡಿಸಿ ವೇಳಾಪಟ್ಟಿಯನ್ನು ಇತ್ತೀಚಿಗೆ ಪ್ರಕಟಿಸಲಾಗಿತ್ತು, ಸದರಿ ದಿನಾಂಕಗಳಂದು ಇತರೆ ಪರೀಕ್ಷೆಗಳು ನಿಗದಿಯಾಗಿರುವ ಕಾರಣ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಯೋಗವು ವೇಳಾಪಟ್ಟಿಯನ್ನು ಪರಿಷ್ಕರಿಸಿ ನೂತನ ವೇಳಾಪಟ್ಟಿಯನ್ನು ಇದೀಗ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ವಿವರ ಈ ಕೆಳಗಿನಂತಿರುತ್ತದೆ : 
* ದಿನಾಂಕ 13 ಡಿಸೆಂಬರ್ 2021ರ ಸೋಮವಾರದಂದು ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಅಭಿಯಂತರರು ಹುದ್ದೆಗಳ ಪತ್ರಿಕೆ 1 ಮತ್ತು ಪತ್ರಿಕೆ 2 ಪರೀಕ್ಷೆ ನಿಗದಿಪಡಿಸಲಾಗಿದೆ 
* ದಿನಾಂಕ 14 ಡಿಸೆಂಬರ್ 2021ರ ಮಂಗಳವಾರದಂದು ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್) ಹುದ್ದೆಗಳ ಪತ್ರಿಕೆ 1 ಹಾಗೂ ಪತ್ರಿಕೆ 2 ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. 
* ಇನ್ನು ದಿನಾಂಕ 15 ಡಿಸೆಂಬರ್ 2021ರ ಬುಧವಾರದಂದು ಈ ಹುದ್ದೆಗಳ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಿಗದಿಪಡಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

KPSC ಗ್ರೂಪ್-C ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪ್ರಾಕ್ಟೀಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಇಲಾಖಾ ಪ್ರಕಟನೆಯನ್ನು ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ

Discussion & Comments (1)

Have a query or feedback about this update?

T
Tukaram More
01 ನವೆಂಬರ್ 2021, 02:12 ಅಪರಾಹ್ನ

Gulburga

Stay Updated with KPSC Vaani

Get instant notifications for exam alerts, question papers, syllabus, and results directly on your phone.