KPSC Big Update 2026: 150 PDO, 400 ಪಶುವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳ ಫೈನಲ್ ಸೆಲೆಕ್ಷನ್ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ!

KPSC Big Update 2026: 150 PDO, 400 ಪಶುವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳ ಫೈನಲ್ ಸೆಲೆಕ್ಷನ್ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ!
Published by Yallamma G
15 ಜುಲೈ 2026 KPSC
PDO ಮತ್ತು ಪಶುವೈದ್ಯಾಧಿಕಾರಿ ಹುದ್ದೆಗಳ ರಿಸಲ್ಟ್‌ಗಾಗಿ ಕಾಯುತ್ತಿದ್ದೀರಾ? ಆಯೋಗದಿಂದ ಬಂತು ಭರ್ಜರಿ ಅಪ್‌ಡೇಟ್

KPSCVaani ಓದುಗರಿಗೆ ಹಾಗೂ ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ! ಕರ್ನಾಟಕ ಲೋಕಸೇವಾ ಆಯೋಗವು (KPSC) ನಡೆಸಿದ ವಿವಿಧ ಇಲಾಖೆಗಳ ಪ್ರಮುಖ ನೇಮಕಾತಿ ಪರೀಕ್ಷೆಗಳ ಅಂತಿಮ ಆಯ್ಕೆಪಟ್ಟಿ (Final Select List) ಪ್ರಕಟಣೆಗೆ ವೇದಿಕೆ ಸಿದ್ಧವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ PDO, ಪಶುಸಂಗೋಪನೆ ಇಲಾಖೆಯ ಪಶುವೈದ್ಯಾಧಿಕಾರಿ ಹಾಗೂ ಗ್ರಂಥಪಾಲಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಗಳು ಸಿದ್ಧಗೊಂಡಿವೆ. ಈ ಪಟ್ಟಿಗಳನ್ನು ಆಯೋಗದ ಅಂತಿಮ ಅನುಮೋದನೆಗಾಗಿ ಜುಲೈ 2026 ರ ಮೊದಲ ವಾರದಲ್ಲಿಯೇ ಸಲ್ಲಿಸಲಾಗಿದ್ದು, ಯಾವುದೇ ಕ್ಷಣದಲ್ಲಾದರೂ KPSC ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಆಯೋಗದ ಅನುಮೋದನೆಗೆ ಸಲ್ಲಿಕೆಯಾದ ಅಂತಿಮ ಆಯ್ಕೆಪಟ್ಟಿಗಳ ಸಂಪೂರ್ಣ ವಿವರ

1. ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳು
  • ರಾಜ್ಯದಾದ್ಯಂತ ತೀವ್ರ ಪೈಪೋಟಿಯಿಂದ ಕೂಡಿದ್ದ PDO ನೇಮಕಾತಿಯ ಅಂತಿಮ ಘಟ್ಟ ಸಮೀಪಿಸಿದೆ.
  • ಇಲಾಖೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.  
  • ಹುದ್ದೆಗಳ ಸಂಖ್ಯೆ: 150 ಉಳಿಕೆ ಮೂಲ ವೃಂದದ (Non-HK) ಹುದ್ದೆಗಳು.  
  • ಅಧಿಸೂಚನೆ ದಿನಾಂಕ: 15-03-2024.  
  • ಪ್ರಸ್ತುತ ಹಂತ: ಅಂತಿಮ ಆಯ್ಕೆಪಟ್ಟಿಯನ್ನು (Final Select List) ಆಯೋಗದ ಅನುಮೋದನೆಗಾಗಿ 09-07-2026 ರಂದು ಸಲ್ಲಿಸಲಾಗಿದೆ.  

2. ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗಳು

  • ಪಶುವೈದ್ಯಕೀಯ ಪದವೀಧರರು ಕಾತುರದಿಂದ ಕಾಯುತ್ತಿದ್ದ ಬೃಹತ್ ನೇಮಕಾತಿಯ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ.
  • ಇಲಾಖೆ: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.  
  • ಹುದ್ದೆಗಳ ಸಂಖ್ಯೆ: ಒಟ್ಟು 400 ಹುದ್ದೆಗಳು [342 ಸಾಮಾನ್ಯ + 58 ಬ್ಯಾಕ್ಲಾಗ್ ಹುದ್ದೆಗಳು] (ಉಳಿಕೆ ಮೂಲ ವೃಂದ).  
  • ಅಧಿಸೂಚನೆ ದಿನಾಂಕ: 29-07-2024.  
3. ಗ್ರಂಥಪಾಲಕ (Librarian) ಹುದ್ದೆಗಳು
  • ಇಲಾಖೆ: ಸಾರ್ವಜನಿಕ ಗ್ರಂಥಾಲಯ ಇಲಾಖೆ.  
  • ಹುದ್ದೆಗಳ ಸಂಖ್ಯೆ: 03 ಕಲ್ಯಾಣ ಕರ್ನಾಟಕ (HK) ವೃಂದದ ಹುದ್ದೆಗಳು.  
  • ಅಧಿಸೂಚನೆ ದಿನಾಂಕ: 15-03-2024.  
  • ಪ್ರಸ್ತುತ ಹಂತ: ಈ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಸಹ ಆಯೋಗದ ಅನುಮೋದನೆಗೆ 09-07-2026 ರಂದು ಸಲ್ಲಿಸಲಾಗಿದೆ. ಪ್ರಸ್ತುತ ಹಂತ: ಈ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು ಆಯೋಗದ ಒಪ್ಪಿಗೆಗಾಗಿ 03-07-2026 ರಂದು ಮಂಡಿಸಲಾಗಿದೆ. 
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ನೋಟದಲ್ಲಿ: KPSC ಗೆ ಸಲ್ಲಿಕೆಯಾದ ಪಟ್ಟಿಗಳ ವಿವರ


KPSCVaani ವಿಶೇಷ ಸೂಚನೆ: ಈ ಮೇಲಿನ ಎಲ್ಲಾ ಹುದ್ದೆಗಳ ಫೈನಲ್ ಸೆಲೆಕ್ಷನ್ ಲಿಸ್ಟ್ ಸಿದ್ಧಗೊಂಡು ಕೇವಲ ಆಯೋಗದ ಅಂತಿಮ ಮುದ್ರೆಗಾಗಿ ಕಾಯುತ್ತಿವೆ. ಆಯೋಗವು ಈ ಪಟ್ಟಿಗಳನ್ನು ಪರಿಶೀಲಿಸಿ ಅನುಮೋದಿಸಿದ ತಕ್ಷಣವೇ KPSC ಯ ಅಧಿಕೃತ ಜಾಲತಾಣದಲ್ಲಿ ಪ್ರಕಟಗೊಳ್ಳಲಿವೆ.

ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ನಿರೀಕ್ಷಿಸಬಹುದು. ಅಂತಿಮ ಆಯ್ಕೆಪಟ್ಟಿಯ ಅಧಿಕೃತ PDF ಬಿಡುಗಡೆಯಾದ ತಕ್ಷಣವೇ, ಅತಿ ವೇಗವಾಗಿ ನಿಮ್ಮ KPSCVaani ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗುವುದು. ನಿರಂತರ ಉದ್ಯೋಗ ಮಾಹಿತಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ!
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.