KPSC 12 ಸೆಪ್ಟೆಂಬರ್ 2025 1 year ago
Published by Yallamma G

KPSCಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ದಾಖಲಾತಿ ಪರಿಶೀಲನಾ ವೇಳಾ ಪಟ್ಟಿ ಇದೀಗ ಪ್ರಕಟ

KPSCಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ದಾಖಲಾತಿ ಪರಿಶೀಲನಾ ವೇಳಾ ಪಟ್ಟಿ ಇದೀಗ ಪ್ರಕಟ

               ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 15-03-2024 ರಂದು ಅಧಿಸೂಚಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಉಳಿಕೆ ಮೂಲ ವೃಂದದ 150 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 

             ಈ ಹುದ್ದೆಗಳಿಗೆ ಸಂಬಂಧಿಸಿದಂತೆ KPSC ಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಉಳಿಕೆ ಮೂಲ ವೃಂದದ 150 ಹುದ್ದೆಗಳ ದಾಖಲೆಗಳ ಪರಿಶೀಲನೆಗೆ 1:3 ಅನುಪಾತದಲ್ಲಿ ಅರ್ಹತೆಪಡೆದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು KPSC ವೆಬ್ ಸೆಟ್ ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.  

                           ಇದೀಗ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಉಳಿಕೆ ಮೂಲ ವೃಂದದ 150 ಹುದ್ದೆಗಳ ದಾಖಲೆಗಳ ಪರಿಶೀಲನೆಯ ವೇಲಾ ಪಟ್ಟಿಯನ್ನು ಇದೀಗ ಪ್ರಕಟಿಸಿದೆ. 

ದಾಖಲೆಗಳ ಪರಿಶೀಲನೆಯ ವಿವರ : 
ದಿನಾಂಕ : 24, 25 ಮತ್ತು 26 2025 

ಸ್ಥಳ : ಆಯೋಗದ ಕೇಂದ್ರ ಕಚೇರಿ ಬೆಂಗಳೂರು.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.