KPSC ಬ್ರೇಕಿಂಗ್ ನ್ಯೂಸ್: ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ

KPSC ಬ್ರೇಕಿಂಗ್ ನ್ಯೂಸ್: ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ
Published by Yallamma G
03 ಜುಲೈ 2026 KPSC
ಕರ್ನಾಟಕ ಲೋಕಸೇವಾ ಆಯೋಗವು (KPSC) ಪೌರಾಡಳಿತ ನಿರ್ದೇಶನಾಲಯದಲ್ಲಿನ ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು (Provisional Selection List) ದಿನಾಂಕ 02-07-2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. 2024ರ ಮಾರ್ಚ್ ತಿಂಗಳಿನಲ್ಲಿ ಹೊರಡಿಸಲಾಗಿದ್ದ ಅಧಿಕೃತ ಉದ್ಯೋಗ ಅಧಿಸೂಚನೆಗೆ ಸಂಬಂಧಿಸಿದಂತೆ, ಹೈದರಾಬಾದ್ ಕರ್ನಾಟಕ (HK) ವಲಯದ ಅಭ್ಯರ್ಥಿಗಳಿಗೆ ಈ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ.  

ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು 2022ರ ತಿದ್ದುಪಡಿ ನಿಯಮಗಳನ್ವಯ ಈ ಪಟ್ಟಿಗಳನ್ನು ಸಿದ್ಧಪಡಿಸಲಾಗಿದ್ದು, KPSCVaani ಓದುಗರಿಗಾಗಿ ಹುದ್ದೆವಾರು ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.

ಇದನ್ನು ಓದಿ : ಗುಡ್ ನ್ಯೂಸ್! IBPS ನಿಂದ 7460 PO ಮತ್ತು SO ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿಗ್ರಿ ಆದವರಿಗೆ ಭರ್ಜರಿ ಅವಕಾಶ, ಮಿಸ್ ಮಾಡ್ಕೋಬೇಡಿ!

ಪ್ರಕಟಗೊಂಡಿರುವ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗಳ ವಿವರ
ಪೌರಾಡಳಿತ ನಿರ್ದೇಶನಾಲಯ (ಮಹಾನಗರ ಪಾಲಿಕೆ - ನಗರ/ಸ್ಥಳೀಯ ಸಂಸ್ಥೆ & BBMP ಹೊರತುಪಡಿಸಿ) ನೇಮಕಾತಿ ಪ್ರಾಧಿಕಾರ / ಇಲಾಖೆಯಿಂದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗಳ ವಿವಾರ ಈ ಕೆಳಗಿನಂತಿದೆ.
  • ಕಿರಿಯ ಆರೋಗ್ಯ ನಿರೀಕ್ಷಕರು (Junior Health Inspector) : 11 ಹುದ್ದೆಗಳು (ಹೈ.ಕ)
  • ಕಿರಿಯ ಆರೋಗ್ಯ ನಿರೀಕ್ಷಕರು (Junior Health Inspector) : 28 ಹುದ್ದೆಗಳು (ಹೈ.ಕ)  
  • ಸಹಾಯಕ ನೀರು ಸರಬರಾಜು ಆಪರೇಟರ್ (Asst. Water Supply Operator) : 05 ಹುದ್ದೆಗಳು (ಹೈ.ಕ)
  • ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್) (Junior Engineer Electrical) : 01 ಹುದ್ದೆ (ಹೈ.ಕ)
  • ಕಿರಿಯ ಇಂಜಿನಿಯರ್ (ಸಿವಿಲ್) (Junior Engineer Civil) : 08 ಹುದ್ದೆಗಳು (ಹೈ.ಕ)
  • ಕಿರಿಯ ಇಂಜಿನಿಯರ್ (ಸಿವಿಲ್) (Junior Engineer Civil) : 07 ಹುದ್ದೆಗಳು (ಹೈ.ಕ)
ತಾತ್ಕಾಲಿಕ ಆಯ್ಕೆ ಪಟ್ಟಿ/PROVISIONAL SELECT LISTS ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು ಮತ್ತು ಮಾಹಿತಿಗಳು 
  • ಮೂಲ ಅಧಿಸೂಚನೆ ಸಂಖ್ಯೆ ಹಾಗೂ ದಿನಾಂಕ: ಸಂಖ್ಯೆ: ಪಿ.ಎಸ್.ಸಿ 504 ಆರ್.ಟಿ.ಬಿ-2/2023-24/3495, ದಿನಾಂಕ: 15-03-2024.  
  • ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾದ ದಿನಾಂಕ: 02-07-2026.  
  • ಆಕ್ಷೇಪಣೆ ಸಲ್ಲಿಸಲು ಇರುವ ಕಾಲಾವಕಾಶ: ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ ದಿನಾಂಕದಿಂದ 07 ದಿನಗಳ ಒಳಗಾಗಿ ಲಿಖಿತವಾಗಿ ಸಲ್ಲಿಸಬೇಕು. 
ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ?
ಪ್ರಕಟಿಸಲಾಗಿರುವ ಈ ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಏನಾದರೂ ಲಿಖಿತ ಆಕ್ಷೇಪಣೆಗಳಿದ್ದಲ್ಲಿ, ಅವರು ಪಟ್ಟಿ ಪ್ರಕಟವಾದ 07 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಗಳನ್ನು ತಲುಪಿಸಬೇಕಾಗಿರುತ್ತದೆ.  
  • ವಿಳಾಸ: ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001.  
  • ಗಮನಿಸಿ: ಕೊನೆಯ ದಿನಾಂಕದ ನಂತರ ತಲುಪುವ ಅಥವಾ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆಗಳನ್ನು ಆಯೋಗವು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. 

'Not Willing' (ಸ್ವ-ಇಚ್ಛಾ ಹೇಳಿಕೆ) ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ

ಪ್ರಮುಖ ಮಾಹಿತಿ: ಪ್ರಸ್ತುತ ಪ್ರಕಟವಾಗಿರುವ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಬೇರೆ ಯಾವುದೇ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಥವಾ ಇನ್ಯಾವುದೇ ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ (Not Willing), ಪಟ್ಟಿ ಪ್ರಕಟವಾದ 7 ದಿನಗಳ ಒಳಗಾಗಿ ಪೂರಕ ದಾಖಲೆಗಳೊಂದಿಗೆ ಆಯೋಗದ ಕಚೇರಿಗೆ ಖುದ್ದಾಗಿ ಹಾಜರಾಗಿ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆವಾರು ಶೈಕ್ಷಣಿಕ ಅರ್ಹತೆಯ ವಿವರಗಳು:
  • ಕಿರಿಯ ಆರೋಗ್ಯ ನಿರೀಕ್ಷಕರು: ಆಯ್ಕೆಯಾದ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ 'Diploma In Sanitary Health Inspector' ಅಥವಾ 'Diploma In Health Inspector' ವಿದ್ಯಾರ್ಹತೆ ಹೊಂದಿದ್ದಾರೆ.  
  • ಸಹಾಯಕ ನೀರು ಸರಬರಾಜು ಆಪರೇಟರ್: ಈ ಹುದ್ದೆಗೆ 'ITI Fitter' ಅಥವಾ 'ITI Electrical' ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಪರಿಗಣಿಸಲಾಗಿದೆ.  
  • ಕಿರಿಯ ಇಂಜಿನಿಯರ್ (ಸಿವಿಲ್ / ಎಲೆಕ್ಟ್ರಿಕಲ್): ಸಂಬಂಧಪಟ್ಟ ವಿಷಯಗಳಲ್ಲಿ 'Diploma In Civil Engineering' ಅಥವಾ 'Diploma In Electrical & Electronics Engineering' ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ. 
  • ಗಮನಿಸಿ: ಕಿರಿಯ ಇಂಜಿನಿಯರ್ ಎಲೆಕ್ಟ್ರಿಕಲ್ ಹುದ್ದೆಯ ಆಯ್ಕೆಯು ಇಲಾಖೆಯಿಂದ ಸ್ವೀಕೃತವಾಗುವ ವಿದ್ಯಾರ್ಹತೆಯ ಸ್ಪಷ್ಟೀಕರಣದ ಷರತ್ತಿಗೆ ಒಳಪಟ್ಟಿರುತ್ತದೆ.  
ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಮ್ಮ ಫಲಿತಾಂಶದ ಸಂಪೂರ್ಣ ಪಿಡಿಎಫ್ ಪರಿಶೀಲಿಸಲು KPSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ KPSCVaani ಕಡೆಯಿಂದ ಅಭಿನಂದನೆಗಳು! ಉದ್ಯೋಗ ಆಕಾಂಕ್ಷಿ ಸ್ನೇಹಿತರೊಂದಿಗೆ ಈ ಪ್ರಮುಖ ಸುದ್ದಿಯನ್ನು ತಪ್ಪದೆ ಶೇರ್ ಮಾಡಿ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.