KPSC ಯಿಂದ 2017-18 ಗೆಜೆಟೆಡ್ ಪ್ರೊಬೇಷನರ್ ಅಧಿಸೂಚನೆಯ ತಿದ್ದುಪಡಿ

KPSC ಯಿಂದ 2017-18 ಗೆಜೆಟೆಡ್ ಪ್ರೊಬೇಷನರ್ ಅಧಿಸೂಚನೆಯ ತಿದ್ದುಪಡಿ
Published by Basavaraj Halli
28 ಫೆಬ್ರವರಿ 2020 KPSC
ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಿದ್ದ 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಲ ಹುದ್ದೆಗಳನ್ನು ಸೇರ್ಪಡೆ ಮತ್ತು ಕೆಲವು ಹುದ್ದೆಗಳ ಕಡಿತ ಮಾಡಿ ತಿದ್ದುಪಡಿ ಅಧಿಸೂಚನೆಯನ್ನು KPSCಯು ಪ್ರಕಟಿಸಿದೆ. * ವಾಣಿಜ್ಯ ತೆರಿಗೆ ಅಧಿಕಾರಿ "ಗ್ರೂಪ್ ಬಿ" ವೃಂದದ ಹುದ್ದೆಗೆ 01 ಹುದ್ದೆಯನ್ನು ಸೇರ್ಪಡೆಯಾಗಿದೆ. * ಕಾರಾಗೃಹ ಅಧೀಕ್ಷಕರ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 07 ಹುದ್ದೆಗಳನ್ನು ಹಾಗೂ ಹೈದರಾಬಾದ್ ಕರ್ನಾಟಕಕ್ಕೆ 1 ಹುದ್ದೆ ಹೆಚ್ಚುವರಿಯಾಗಿ ಸೇರ್ಪಡಿಸಲಾಗಿದೆ. * ಪ್ರವಾಸೋದ್ಯಮ ಇಲಾಖೆಯಲ್ಲಿ 07 ಹುದ್ದೆಗಳನ್ನು ಹಿಂಪಡೆಯಲಾಗಿದೆ, ಎಂದು KPSCಯು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು KPSC ಯು ಪ್ರಕಟಿಸಿದ ತಿದ್ದುಪಡಿ ಅಧಿಸೂಚನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.