KPSC ನೇಮಕಾತಿ 2025: ದಾಖಲೆ ಪರಿಶೀಲನೆ ವೇಳಾಪಟ್ಟಿ ಪ್ರಕಟ – ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ

KPSC ನೇಮಕಾತಿ 2025: ದಾಖಲೆ ಪರಿಶೀಲನೆ ವೇಳಾಪಟ್ಟಿ ಪ್ರಕಟ – ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ
Published by Yallamma G
13 ಡಿಸೆಂಬರ್ 2025 KPSC

📢 KPSC ಯಿಂದ ಪ್ರಮುಖ ನೇಮಕಾತಿಗಳಿಗೆ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ!

             ಕರ್ನಾಟಕ ಲೋಕಸೇವಾ ಆಯೋಗ (KPSC)ವು ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ (Document Verification) ಕುರಿತಂತೆ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು 11-12-2025ರಂದು ಬಿಡುಗಡೆ ಮಾಡಿದೆ. ಈ ಪ್ರಕಟಣೆಯಂತೆ, ಆಯ್ಕೆಯಾದ ಅಭ್ಯರ್ಥಿಗಳಿಗೆ 17-12-2025 ರಿಂದ 23-12-2025ರ ವರೆಗೆ ಹಂತ ಹಂತವಾಗಿ ಪರಿಶೀಲನೆ ನಡೆಯಲಿದೆ.

KPSC ನಡೆಸಿದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

KPSCಯ ವಿವಿಧ ಹುದ್ದೆಗಳ ದಾಖಲೆ ಪರಿಶೀಲನೆ ನಡೆಯುವ ಸಮಯ ಮತ್ತು ದಿನಾಂಕ. 
➡️ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) 92 ಹುದ್ದೆಗಳಿಗೆ : 17-12-2025 ಮತ್ತು 18-12-2025 ಬೆಳಿಗ್ಗೆ 10.00 ಗಂಟೆ ಹಾಗೂ ಮಧ್ಯಾಹ್ನ 02.30 ಗಂಟೆಯವರೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಭೂಮಾಪನ, ಕಂದಾಯ ವ್ಯವಸ್ಥೆ, ಮತ್ತು ಭೂ ದಾಖಲೆಗಳ ಇಲಾಖೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 24 ಹುದ್ದೆಗಳಿಗೆ : 19-12-2025 ಬೆಳಿಗ್ಗೆ 10.00 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು 21 ಹುದ್ದೆಗಳಿಗೆ : 19-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು 20 ಹುದ್ದೆಗಳಿಗೆ : 20-12-2025 ಬೆಳಿಗ್ಗೆ 10.00 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಕಾರ್ಖಾನೆಗಳು, ಬಾಯರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ಕಾರ್ಖಾನೆಗಳ ಸಾಯಕ ನಿರ್ದೇಶಕರು 07 ಹುದ್ದೆಗಳಿಗೆ : 20-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಅಂತರ್ಜಲ ನಿರ್ದೇಶನಾಲಯ ದಲ್ಲಿನ ಭೂ ವಿಜ್ಞಾನಿ 10 ಹುದ್ದೆಗಳಿಗೆ : 20-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಕಾರ್ಖಾನೆಗಳು, ಬಾಯರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ಬಾಯರ್ ಗಳ ಸಹಾಯಕ ನಿರ್ದೇಶಕರು 03 ಹುದ್ದೆಗಳಿಗೆ : 20-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ. 

➡️ ಜಲ ಸಂಪನ್ಮೂಲ ಇಲಾಖೆ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) 90 ಹುದ್ದೆಗಳಿಗೆ : 22-12-2025 ಮತ್ತು 23-12-2025 ಬೆಳಿಗ್ಗೆ 10.00 ಗಂಟೆ ಹಾಗೂ ಮಧ್ಯಾಹ್ನ 02.30 ಗಂಟೆಯವರೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
  
ಈಗಾಗಲೇ ಅಧಿಸೂಚಿದ KEA & KPSC ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
KPSC ದಾಖಲೆ ಪರಿಶೀಲನೆಗೆ ಬೇಕಾದ ಅಗತ್ಯ ದಾಖಲೆಗಳು
1️⃣ ಕಡ್ಡಾಯ ದಾಖಲೆಗಳು (Mandatory Documents)
👉 ಎಲ್ಲಾ ದಾಖಲೆಗಳ ಮೂಲ ಪ್ರತಿಗಳು (Original) ಹಾಗೂ 2–3 ಜೆರಾಕ್ಸ್ ಪ್ರತಿಗಳು ತರಬೇಕು.
KPSC ಕಾಲ್ ಲೆಟರ್ / ದಾಖಲೆ ಪರಿಶೀಲನೆ ಸೂಚನೆ ಪತ್ರ
ಆನ್‌ಲೈನ್ ಅರ್ಜಿ ಪ್ರತಿಯನ್ನು (Application Printout)
SSLC / 10ನೇ ತರಗತಿ ಅಂಕಪಟ್ಟಿ
ಜನ್ಮ ದಿನಾಂಕ ದೃಢೀಕರಣಕ್ಕಾಗಿ
PUC / ಡಿಪ್ಲೊಮಾ / ಡಿಗ್ರಿ ಅಂಕಪಟ್ಟಿಗಳು
ಅರ್ಹತಾ ಪದವಿ ಪ್ರಮಾಣ ಪತ್ರ (Degree Certificate / Provisional Certificate)

2️⃣ ಗುರುತಿನ ದಾಖಲೆಗಳು (Identity Proof) : ಕೆಳಗಿನವುಗಳಲ್ಲಿ ಯಾವುದಾದರೂ ಒಂದು:
ಆಧಾರ್ ಕಾರ್ಡ್
ವೋಟರ್ ಐಡಿ
ಪಾಸ್‌ಪೋರ್ಟ್
ಡ್ರೈವಿಂಗ್ ಲೈಸೆನ್ಸ್

3️⃣ ವರ್ಗ/ಮೀಸಲು ಸಂಬಂಧಿತ ದಾಖಲೆಗಳು : (ಅರ್ಜಿ ಸಲ್ಲಿಸುವಾಗ ಮೀಸಲು ಕೇಳಿದ್ದಲ್ಲಿ ಮಾತ್ರ)
ಜಾತಿ ಪ್ರಮಾಣ ಪತ್ರ (Caste Certificate)
SC / ST / Cat-I / 2A / 2B / 3A / 3B
ಮಾನ್ಯ ಅವಧಿಯಲ್ಲಿರುವುದು ಕಡ್ಡಾಯ
ಆದಾಯ ಪ್ರಮಾಣ ಪತ್ರ (Income Certificate)
ಶುಲ್ಕ ವಿನಾಯಿತಿ / ಮೀಸಲುಗಾಗಿ
ಕನ್ನಡ ಮಾಧ್ಯಮ ಪ್ರಮಾಣ ಪತ್ರ (Kannada Medium Certificate) – ಅನ್ವಯಿಸಿದರೆ
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ (Rural Certificate) – ಅನ್ವಯಿಸಿದರೆ

4️⃣ ವಿಶೇಷ ವರ್ಗದ ದಾಖಲೆಗಳು (If Applicable)
ವಿಕಲಚೇತನ ಪ್ರಮಾಣ ಪತ್ರ (PwD Certificate) – ಸರ್ಕಾರದ ಮಾನ್ಯ ಆಸ್ಪತ್ರೆಯಿಂದ
ಹಳೆಯ ಸೈನಿಕ ಪ್ರಮಾಣ ಪತ್ರ (Ex-Serviceman Certificate)
ವಿಧವಾ ಪ್ರಮಾಣ ಪತ್ರ (Widow Certificate) – ಮಹಿಳಾ ಅಭ್ಯರ್ಥಿಗಳಿಗೆ
ಕ್ರೀಡಾ ಕೋಟಾ ಪ್ರಮಾಣ ಪತ್ರ – ಮಾನ್ಯ ಸಂಸ್ಥೆಯಿಂದ

5️⃣ ಅನುಭವ ಸಂಬಂಧಿತ ದಾಖಲೆಗಳು : (ಅನುಭವ ಕಡ್ಡಾಯವಾಗಿರುವ ಹುದ್ದೆಗಳಿಗಾಗಿ)
ಅನುಭವ ಪ್ರಮಾಣ ಪತ್ರ (Experience Certificate)
ನೇಮಕಾತಿ ಆದೇಶ / ಸೇವಾ ಪ್ರಮಾಣ ಪತ್ರ (Appointment Order)

          ಕರ್ನಾಟಕ ಲೋಕಸೇವಾ ಆಯೋಗ (KPSC) ಯಲ್ಲಿ ಹೈದೆರಾಬಾದ್ ಕರ್ನಾಟಕ (Non-HK) ಭಾಗದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ 1:3 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಯ (Document Verification) ದಿನಾಂಕವನ್ನು ಇದೀಗ ಪ್ರಕಟಿಸಲಾಗಿದೆ.
ದಿನಾಂಕ: 2025ರ ಡಿಸೆಂಬರ್ 17 ರಿಂದ 23 ರವರೆಗೆ.
ಸ್ಥಳ: ಕರ್ನಾಟಕ ಲೋಕಸೇವಾ ಆಯೋಗ (KPSC), ಉದ್ಯೋಗ ಸೌಧ, ಬೆಂಗಳೂರು-560001. 

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಮಾಹಿತಿ : 
🔹 ಪರಿಶೀಲನೆ ಆರಂಭ ದಿನಾಂಕ:👉 17-12-2025
🔹 ಪರಿಶೀಲನೆ ಅಂತಿಮ ದಿನಾಂಕ:👉 23-12-2025
🔹 ಪರಿಶೀಲನೆ ಸಮಯ: ಬೆಳಿಗ್ಗೆ: 10.00 ಗಂಟೆ, ಮಧ್ಯಾಹ್ನ: 02.30 ಗಂಟೆ
🔹 ಪರಿಶೀಲನೆ ನಡೆಯುವ ದಿನಗಳು:
17-12-2025
18-12-2025
19-12-2025
20-12-2025
22-12-2025
23-12-2025
(ಅಭ್ಯರ್ಥಿಗಳ ರೋಲ್ ಸಂಖ್ಯೆ / ಬ್ಯಾಚ್ ಅನುಸಾರ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗಿದೆ)

🚨 ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು
✔ ಅಭ್ಯರ್ಥಿಗಳು ಮೂಲ ದಾಖಲೆಗಳು (Original Certificates) ಹಾಗೂ ಅವುಗಳ ಪ್ರಮಾಣಿತ ಪ್ರತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
✔ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಹಾಜರಾಗದಿದ್ದಲ್ಲಿ, ಅಭ್ಯರ್ಥಿಯ ಅರ್ಹತೆ ರದ್ದಾಗುವ ಸಾಧ್ಯತೆ ಇದೆ.
✔ ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಯಾವುದೇ ಬದಲಾವಣೆ ಅಥವಾ ಹೆಚ್ಚುವರಿ ಸೂಚನೆಗಳು KPSC ಅಧಿಕೃತ ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
✔ ಅರ್ಹತಾ ಪಟ್ಟಿಯಲ್ಲಿ (Eligibility List) 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಗಳಂದು ತಮ್ಮ ಎಲ್ಲಾ ಮೂಲ ದಾಖಲೆಗಳನ್ನು (Original Documents) ಮತ್ತು ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ (Attested Xerox Copies) KPSC ಕಛೇರಿಗೆ ಹಾಜರಾಗುವುದು ಕಡ್ಡಾಯ.

📌ಹೆಚ್ಚಿನ ಮಾಹಿತಿಗಾಗಿ :
ಅಭ್ಯರ್ಥಿಗಳು ತಮ್ಮ ದಾಖಲೆ ಪರಿಶೀಲನೆಯ ದಿನಾಂಕ ಮತ್ತು ಸಮಯದ ವಿವರಗಳನ್ನು ಖಚಿತಪಡಿಸಿಕೊಳ್ಳಲು KPSCVaani ವೆಬ್‌ಸೈಟ್‌ಗೆ (KPSC Website) ಭೇಟಿ ನೀಡುವುದು ಅತ್ಯಗತ್ಯ. ದಾಖಲೆ ಪರಿಶೀಲನೆಗೆ ಸಂಬಂಧಿಸಿದಂತೆ ಆಯೋಗವು ಪ್ರಕಟಿಸುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.

KPSCvaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.