Others 15 ಅಕ್ಟೋಬರ್ 2025 11 months ago
Published by Yallamma G

KPSC ಯಿಂದ ನಗರ & ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟ

KPSC ಯಿಂದ ನಗರ & ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟ

           ಕರ್ನಾಟಕ ಲೋಕ ಸೇವಾ ಆಯೋಗದಿಂದ 22/04/2022 ರಲ್ಲಿ ಅಧಿಸೂಚಿಸಲಾದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು -50+10(ಹೈ.ಕ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.  ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ದಿನಾಂಕ:20-03-2024ರಂದು ಅಂತಿಮ ಆಯ್ಕೆಪಟ್ಟಿ ಮತ್ತು 19-03-2025ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

                       ಪ್ರಸ್ತುತ ಮಾನ್ಯ ಅಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ:2866-2870/2024ರ ಪ್ರಕರಣದಲ್ಲಿ ದಿ:09-04-2025ರಂದು ನೀಡಿರುವ ಆದೇಶದಂತೆ ಸದರಿ ಅಧಿಸೂಚನೆ ಮತ್ತು ದಿನಾಂಕ:19-03-2022ರಲ್ಲಿ ಅಧಿಸೂಚಿಸಲಾದ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ಪುರಸಭೆ/ಪಟ್ಟಣ/ಪಂಚಾಯಿತಿ) ಕಿರಿಯ ಅಭಿಯಂತರು (ಸಿವಿಲ್) 74+15(ಹೈ.ಕ) ಹುದ್ದೆಗಳ ಹೆಚ್ಚುವರಿ ಪಟ್ಟಿಯಲ್ಲಿರುವ 31 ಅಭ್ಯರ್ಥಿಗಳಿಗೆ (Common Candidates) ಸ್ವ-ಇಚ್ಛಾ ಹೇಳಿಕೆ ನೀಡಲು ಪ್ರಕಟಣೆ ಹಾಗೂ ಹಿಂಬರಹ ನೀಡಲಾಗಿತ್ತು. ಆದರೆ ಇವರುಗಳಲ್ಲಿ ಯಾವುದೇ ಅಭ್ಯರ್ಥಿ ಸ್ವ-ಇಚ್ಛಾ ಹೇಳಿಕೆ ನೀಡಿರುವುದಿಲ್ಲವಾದ್ದರಿಂದ ಇಲಾಖೆಯ ಬೇಡಿಕೆಯನುಸಾರವಾಗಿ ಸದರಿ ಹುದ್ದೆಗೆ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ನಿಯಮಾನುಸಾರ ಸಿದ್ಧಪಡಿಸಿ ಪ್ರಕಟಿಸಲಾಗಿದೆ.

ಪ್ರಮುಖ ಸೂಚನೆ: ಈ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಣೆಯ ನಂತರ, ಇಲಾಖೆಯ ಮುಂದಿನ ಕ್ರಮಗಳು ಶೀಘ್ರದಲ್ಲೇ ನಡೆಯಲಿವೆ.

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments