Others 10 ಜುಲೈ 2019 7 years ago

ಹುಬ್ಬಳ್ಳಿಯಲ್ಲಿ ಸುಮಾರು 2000 ರಿಂದ 3000 ಹುದ್ದೆಗಳ ನೇಮಕಾತಿಗಾಗಿ ಬೃಹತ ಉಧ್ಯೋಗ ಮೇಳ ಆಯೋಜನೆ

ಹುಬ್ಬಳ್ಳಿಯಲ್ಲಿ ಸುಮಾರು 2000 ರಿಂದ 3000 ಹುದ್ದೆಗಳ ನೇಮಕಾತಿಗಾಗಿ ಬೃಹತ ಉಧ್ಯೋಗ ಮೇಳ ಆಯೋಜನೆ
KLE ಯಲ್ಲಿನ ಐಬಿಎಂಆರ್(IBMR) ಕಾಲೇಜು ಹಾಗೂ ಆಕ್ಸಪರ್ಡ್ ಪಾಲಿಟೆಕ್ನಿಕ್ನ ಕಾಲೇಜು ಸಹಯೋಗದಲ್ಲಿ ಜುಲೈ 11 ರಂದು ಪ್ರಗತಿ-2019 ಉದ್ಯೋಗ ಮೇಳವನ್ನು ವಿದ್ಯಾನಗರದ ಐಬಿಎಂಆರ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಗತಿ-2019 ಉದ್ಯೋಗ ಮೇಳವನ್ನು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ಸಹಕಾರವಾಗಲಿ ಎಂದು ಆಯೋಜಿಸಲಾಗಿದ್ದು ಸುಮಾರು ಎರಡರಿಂದ ಮೂರು ಸಾವಿರ ಉದ್ಯೋಗ ಖಾಲಿ ಇದ್ದು ಮೇಳದಲ್ಲಿ ಪ್ಲೇಸ್ಮೆಂಟ್ ನಡೆಯಲಿದೆ. ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವೀಧರರು ಭಾಗವಹಿಸಬಹುದಾಗಿದೆ. ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಸ್ವವಿವರ ಪತ್ರ(Biodata / Resume),ಪಾಸ್ಪೋರ್ಟ್ ಸೈಜ್ ಪೋಟೋ, ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಮೇಳದಲ್ಲಿ ಆನ್ಲೈನ್ ನೋಂದಣಿ ಹಾಗೂ ಸ್ಮಾರ್ಟ್ ನೋಂದಣಿಯ ನೂತನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಆಸಕ್ತರು 9015777101 ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ. ಈ ಮೇಳದಲ್ಲಿ ಸುಮಾರು ಐವತ್ತು ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಇನ್ಫೋಸಿಸ್, ವೈಟ್ ಹಾರ್ಸ್, ಐಬಿಎಂ, ಮುತ್ತೂಟ್ ಫೈನಾನ್ಸ್, ದಿಯಾ ಸಿಸ್ಟಂ, ಎನ್ ಎಸ್ ಇನ್ಫೊಟೆಕ್ ಸೇರಿ ಮುಂತಾದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಅಭ್ಯರ್ಥಿಗಳು ಈ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಆಯೋಜಕರು ತಿಳಿಸಿದ್ದಾರೆ ಉದ್ಯೋಗ ಮೇಳ ನಡೆಯುವ ಸ್ಥಳ : IBMR Business School MBA College Vidyanagar, 567, Akshay Colony, Hubli, Karnataka 580021
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments