KEA ಕೃಷಿ ಮಾರಾಟ ಇಲಾಖೆ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆ: ತಾತ್ಕಾಲಿಕ ಆಯ್ಕೆ ಮತ್ತು 54 ಅಭ್ಯರ್ಥಿಗಳ ತಿರಸ್ಕೃತ ಪಟ್ಟಿ ಪ್ರಕಟ! ಆಕ್ಷೇಪಣೆಗೆ ಕೊನೆಯ ದಿನಾಂಕ ಇಲ್ಲಿದೆ.

KEA ಕೃಷಿ ಮಾರಾಟ ಇಲಾಖೆ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆ: ತಾತ್ಕಾಲಿಕ ಆಯ್ಕೆ ಮತ್ತು 54 ಅಭ್ಯರ್ಥಿಗಳ ತಿರಸ್ಕೃತ ಪಟ್ಟಿ ಪ್ರಕಟ! ಆಕ್ಷೇಪಣೆಗೆ ಕೊನೆಯ ದಿನಾಂಕ ಇಲ್ಲಿದೆ.
Published by Yallamma G
16 ಏಪ್ರಿಲ್ 2026 Others
ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಅರ್ಹತೆ ಇಲ್ಲದವರ ತಿರಸ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

ಕೃಷಿ ಮಾರಾಟ ಇಲಾಖೆಯಲ್ಲಿನ ಮಾರುಕಟ್ಟೆ ಮೇಲ್ವಿಚಾರಕ (Market Supervisor) ಹುದ್ದೆಗಳ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಮಹತ್ವದ ಅಪ್‌ಡೇಟ್ ಇಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಯ ಆಧಾರದ ಮೇಲೆ ಇದೀಗ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ (Provisional Select List) ಹಾಗೂ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯನ್ನು (Rejected List) ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಈ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರ, ಆಕ್ಷೇಪಣೆ ಸಲ್ಲಿಸುವ ವಿಧಾನ ಹಾಗೂ ತಿರಸ್ಕೃತಗೊಳ್ಳಲು ಪ್ರಮುಖ ಕಾರಣಗಳೇನು ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಕ್ರಿಯೆಯ ಹಿನ್ನೆಲೆ
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ 08-10-2025 ರಂದು ಕೃಷಿ ಮಾರಾಟ ಇಲಾಖೆಯ ರಾಜ್ಯ ಮಟ್ಟದ ಉಳಿಕೆ ಮೂಲ ವೃಂದದ 'ಮಾರುಕಟ್ಟೆ ಮೇಲ್ವಿಚಾರಕ' ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಿತ್ತು.
  • ನಡೆಸಲಾದ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ದಿನಾಂಕ 05-03-2026 ರಿಂದ 25-03-2026 ರವರೆಗೆ ಹಾಗೂ ದಿನಾಂಕ 09-04-2026 ರಂದು ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ (Document Verification) ನಡೆಸಲಾಗಿತ್ತು.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ. 

ತಾತ್ಕಾಲಿಕ ಆಯ್ಕೆ ಪಟ್ಟಿ (Provisional Selection List) ವಿವರ

08-10-2025 ರಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ವಯ ಕೃಷಿ ಮಾರಾಟ ಇಲಾಖೆಯ ರಾಜ್ಯ ಮಟ್ಟದ ಉಳಿಕೆ ಮೂಲ ವೃಂದದ 'ಮಾರುಕಟ್ಟೆ ಮೇಲ್ವಿಚಾರಕ' ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ಫಲಿತಾಂಶದ ನಂತರ ದಿನಾಂಕ: 05-03-2026 ರಿಂದ 25-03-2026 ರವರೆಗೆ ಹಾಗೂ 09-04-2026 ರಂದು ಅರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ (Document Verification) ನಡೆಸಲಾಗಿತ್ತು.
  • ಈ ಪಟ್ಟಿಯಲ್ಲಿ ಒಟ್ಟು 29 ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ.
  • ಗಮನಿಸಿ: ಇದು ಕೇವಲ ತಾತ್ಕಾಲಿಕ ಆಯ್ಕೆ ಪಟ್ಟಿಯಾಗಿದ್ದು, ಇದನ್ನು ಅಂತಿಮ ನೇಮಕಾತಿ ಎಂದು ಪರಿಗಣಿಸುವಂತಿಲ್ಲ.
  • ಪಟ್ಟಿಯಲ್ಲಿ ಹೆಸರು ಇದೆ ಎಂಬ ಮಾತ್ರಕ್ಕೆ ಅಭ್ಯರ್ಥಿಯು ನೇಮಕಾತಿಯ ಯಾವುದೇ ಹಕ್ಕನ್ನು ಹೊಂದಿದಂತಾಗುವುದಿಲ್ಲ.
  • ಈ ಪಟ್ಟಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಮೇಲ್ಮನವಿ ಸಂಖ್ಯೆ: 200448/2025 ರ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
ಅಭ್ಯರ್ಥಿಗಳ ಅರ್ಜಿ ತಿರಸ್ಕೃತ ಪಟ್ಟಿ (Rejection List)
ಒಂದು ಕಡೆ ಆಯ್ಕೆ ಪಟ್ಟಿ ಪ್ರಕಟವಾದರೆ, ಮತ್ತೊಂದು ಕಡೆ ಹಲವು ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ.
  • ದಾಖಲೆಗಳ ಪರಿಶೀಲನೆಯ ನಂತರ, ಪ್ರಕಟಿತ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ 'ಪದವಿ ಅರ್ಹತೆ' ಹೊಂದಿರದ ಅಭ್ಯರ್ಥಿಗಳ ಅರ್ಜಿಗಳನ್ನು ಇಲಾಖೆ ತಿರಸ್ಕರಿಸಿದೆ.
  • ಅಭ್ಯರ್ಥಿಗಳ ಅರ್ಹತೆಗಳು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳೊಂದಿಗೆ ಹೊಂದಿಕೆಯಾಗದ ಕಾರಣ, ಅರ್ಹತೆಯ ಕೊರತೆಯ ಆಧಾರದ ಮೇಲೆ ಅವರ ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗಿದೆ.
  • ಪಟ್ಟಿಯ ಪ್ರಕಾರ, ಒಟ್ಟು 54 ಅಭ್ಯರ್ಥಿಗಳನ್ನು "ಪದವಿ ಅರ್ಹತೆ ಇಲ್ಲ" ಎಂಬ ಸ್ಪಷ್ಟ ಕಾರಣ ನೀಡಿ ತಿರಸ್ಕರಿಸಲಾಗಿದೆ. (ಈ ಪಟ್ಟಿಯ ಕುರಿತು ಯಾವುದೇ ಪತ್ರ ವ್ಯವಹಾರವನ್ನು ಇಲಾಖೆ ಪರಿಗಣಿಸುವುದಿಲ್ಲ ).
ಆಕ್ಷೇಪಣೆ ಸಲ್ಲಿಸಲು ಅವಕಾಶ (How to File Objections?)
ಪ್ರಕಟವಾಗಿರುವ ತಾತ್ಕಾಲಿಕ ಆಯ್ಕೆಪಟ್ಟಿಯ ಕುರಿತು ಅಭ್ಯರ್ಥಿಗಳಿಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  • ಏನು ಸಲ್ಲಿಸಬೇಕು?: ಆಕ್ಷೇಪಣೆಯನ್ನು ಪುಷ್ಟಿ ನೀಡುವ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು.
  • ಕೊನೆಯ ದಿನಾಂಕ: ಆಯ್ಕೆ ಪಟ್ಟಿ ಪ್ರಕಟಗೊಂಡ ದಿನಾಂಕದಿಂದ 07 ದಿನಗಳೊಳಗಾಗಿ (ರಜೆ ದಿನ ಹೊರತುಪಡಿಸಿ), ಅಂದರೆ ದಿನಾಂಕ 23-04-2026 ರ ಸಂಜೆ 5:30 ರೊಳಗಾಗಿ ತಲುಪುವಂತೆ ಸಲ್ಲಿಸಬೇಕು. ತದನಂತರ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
  • ಸಲ್ಲಿಸಬೇಕಾದ ವಿಳಾಸ: ನಿರ್ದೇಶಕರು ಹಾಗೂ ನೇಮಕಾತಿ ಪ್ರಾಧಿಕಾರ, ಕೃಷಿ ಮಾರಾಟ ಇಲಾಖೆ, ನಂ 16, 2ನೇ ರಾಜಭವನ ರಸ್ತೆ, ಪಿ.ಬಿ.ನಂ 5309, ಬೆಂಗಳೂರು-560001.
KEA ಇಂದ ನಡೆದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು practice ಮಾಡಲು ಇಲ್ಲಿ ಕ್ಲಿಕ್ ಮಾಡಿ (To Practice Old KEA Question Papers)

ಅಭ್ಯರ್ಥಿಗಳು ಗಮನಿಸಬೇಕಾದ ಇತರ ಪ್ರಮುಖ ಷರತ್ತುಗಳು

  • ದಾಖಲೆಗಳ ನೈಜತೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ದಾಖಲೆ ಅಥವಾ ಮೀಸಲಾತಿ ದಾಖಲೆಗಳಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದಲ್ಲಿ ಅವರ ಅಭ್ಯರ್ಥಿತನವು ತಂತಾನೇ ರದ್ದಾಗುತ್ತದೆ.
  • ದೃಢೀಕರಣ ಕಡ್ಡಾಯ: ಎಲ್ಲಾ ಅಭ್ಯರ್ಥಿಗಳ ಮೀಸಲಾತಿ, ಜಾತಿ ಮತ್ತು ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು ಸಿಂಧುವಾಗಿವೆ (Valid) ಎಂದು ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರವು ದೃಢೀಕರಿಸಬೇಕು.
  • ಯಾವುದೇ ಹಂತದಲ್ಲಿ ಅರ್ಹತೆಯ ಕೊರತೆ ಕಂಡುಬಂದರೆ ಅಥವಾ ತಪ್ಪು ಮಾಹಿತಿ ನೀಡಿದ್ದರೆ ಆಯ್ಕೆಯನ್ನು ತಕ್ಷಣ ರದ್ದುಪಡಿಸಲಾಗುವುದು.
  • ಶಿಫಾರಸ್ಸು ಮಾಡಲು, ಪ್ರಭಾವ ಬೀರಲು ಅಥವಾ ಆಮಿಷವೊಡ್ಡಲು ಪ್ರಯತ್ನಿಸಿದಲ್ಲಿ ಅಭ್ಯರ್ಥಿತನ ರದ್ದಾಗುತ್ತದೆ. ಅಭ್ಯರ್ಥಿತನ ಮತ್ತು ಆಯ್ಕೆಗೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಗಳ ಪಿಡಿಎಫ್ ಪ್ರತಿಗಳಿಗಾಗಿ ಕೃಷಿ ಮಾರಾಟ ಇಲಾಖೆಯ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ:
ವೆಬ್‌ಸೈಟ್ ಲಿಂಕ್: https://krishimaratavahini.karnataka.gov.in
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.