ತೋಟಗಾರಿಕೆ ಸಹಾಯಕ ನಿರ್ದೇಶಕರ ಪರೀಕ್ಷೆ ಬರೆದಿದ್ದೀರಾ? KEA ಕೀ-ಉತ್ತರ ಪ್ರಕಟ; ನಿಮ್ಮ Expected Score ತಿಳಿಯಿರಿ

ತೋಟಗಾರಿಕೆ ಸಹಾಯಕ ನಿರ್ದೇಶಕರ ಪರೀಕ್ಷೆ ಬರೆದಿದ್ದೀರಾ? KEA ಕೀ-ಉತ್ತರ ಪ್ರಕಟ; ನಿಮ್ಮ Expected Score ತಿಳಿಯಿರಿ
Published by Yallamma G
35 minutes ago Karnataka Examination Authority

KEA ತೋಟಗಾರಿಕೆ ಸಹಾಯಕ ನಿರ್ದೇಶಕರ ಕೀ-ಉತ್ತರ 2026 ಪ್ರಕಟ: Paper-1, Paper-2 Answer Key ಬಿಡುಗಡೆ, ಆಕ್ಷೇಪಣೆಗೆ ಅಕ್ಟೋಬರ್ 8 ಕೊನೆಯ ಅವಕಾಶ

 

KEA Assistant Horticulture Director Key Answer 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ತೋಟಗಾರಿಕೆ ನಿರ್ದೇಶಕರ (Assistant Horticulture Director) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2026ರ ಅಕ್ಟೋಬರ್ 6ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಕೃತ ಕೀ-ಉತ್ತರಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಇದೀಗ ತಮ್ಮ ಪ್ರಶ್ನೆಪತ್ರಿಕೆಯ Booklet Seriesಗೆ ಅನುಗುಣವಾಗಿ ಉತ್ತರಗಳನ್ನು ಪರಿಶೀಲಿಸಿ, ಅಂದಾಜು ಅಂಕಗಳನ್ನು ಲೆಕ್ಕ ಹಾಕಬಹುದು. ಕೀ-ಉತ್ತರದಲ್ಲಿ ತಪ್ಪು ಕಂಡುಬಂದಲ್ಲಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಲು KEA ಅವಕಾಶ ನೀಡಿದೆ.     

 

ಅಭ್ಯರ್ಥಿಗಳ ಅನುಕೂಲಕ್ಕಾಗಿ KEA Paper-1 ಮತ್ತು Paper-2 ಎರಡರ 100 ಪ್ರಶ್ನೆಗಳಿಗೂ A1, B1, C1, D1 Booklet Seriesಗಳಿಗೆ ಅನುಗುಣವಾಗಿ ಉತ್ತರಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ. ಈ ಕಾರಣದಿಂದ ಅಭ್ಯರ್ಥಿಗಳು ತಮ್ಮ ಪ್ರಶ್ನೆಪತ್ರಿಕೆಯ Series ಅನ್ನು ಸರಿಯಾಗಿ ಗುರುತಿಸಿಕೊಂಡು ಮಾತ್ರ ಕೀ-ಉತ್ತರ ಪರಿಶೀಲಿಸುವುದು ಅತ್ಯಂತ ಮುಖ್ಯ.

 

 ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.. 

 

KEA Assistant Horticulture Director Key Answer 2026 – ಪ್ರಮುಖ ಮಾಹಿತಿ

  • ನೇಮಕಾತಿ ಹುದ್ದೆ : ಸಹಾಯಕ ತೋಟಗಾರಿಕೆ ನಿರ್ದೇಶಕರು
  • ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಪರೀಕ್ಷೆ ನಡೆದ ದಿನಾಂಕ : 06-10-2026
  • ಕೀ-ಉತ್ತರ ಪ್ರಕಟಣೆ : 06-10-2026
  • Paper-1 : General Knowledge (KK)\
  • Paper-2 : Paper-2 – (KK)
  • ಆಕ್ಷೇಪಣೆಯ ಕೊನೆಯ ಸಮಯ : 08-10-2026 ರಾತ್ರಿ 10:30
  • ಅಧಿಕೃತ ಪೋರ್ಟಲ್ : KEA Online Portal

 

KEA ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 6ರಂದು ನಡೆದ ಸಹಾಯಕ ತೋಟಗಾರಿಕೆ ನಿರ್ದೇಶಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ Paper-1 ಮತ್ತು Paper-2 ಕೀ-ಉತ್ತರಗಳನ್ನು ಅಭ್ಯರ್ಥಿಗಳ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ.     

 

ಪ್ರಮುಖ ದಿನಾಂಕಗಳ ವಿವರ:

  • ಸ್ಪರ್ಧಾತ್ಮಕ ಪರೀಕ್ಷೆ ನಡೆದ ದಿನಾಂಕ: 06-10-2026.  
  • ಕೀ ಉತ್ತರ ಪ್ರಕಟವಾದ ದಿನಾಂಕ: 06-10-2026.  
  • ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: 08-10-2026 ರ ಬೆಳಿಗ್ಗೆ 10:30 ಗಂಟೆಯೊಳಗೆ. 

 

ಅಭ್ಯರ್ಥಿಗಳು ಕೀ-ಉತ್ತರ ಪರಿಶೀಲಿಸುವುದು ಹೇಗೆ?
KEA ಪ್ರಕಟಿಸಿರುವ PDFನಲ್ಲಿ ನಾಲ್ಕು Booklet Series(A1 B1 C1 D1)ಗಳನ್ನು ಪ್ರತ್ಯೇಕ ಕಾಲಮ್‌ಗಳಲ್ಲಿ ನೀಡಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ಮೊದಲು ತಮ್ಮ ಪ್ರಶ್ನೆಪತ್ರಿಕೆಯ ಮೇಲ್ಭಾಗದಲ್ಲಿರುವ Booklet Series ಅನ್ನು ಪರಿಶೀಲಿಸಬೇಕು. 
ನಂತರ ಈ ಹಂತಗಳನ್ನು ಅನುಸರಿಸಿ:

ಹಂತ 1: ನಿಮ್ಮ ಪ್ರಶ್ನೆಪತ್ರಿಕೆಯ Series ಗುರುತಿಸಿ.
ಹಂತ 2: KEA ಪ್ರಕಟಿಸಿರುವ ಅಧಿಕೃತ Key Answer PDF ತೆರೆಯಿರಿ.
ಹಂತ 3: ನಿಮ್ಮ Seriesಗೆ ಸಂಬಂಧಿಸಿದ Column ಆಯ್ಕೆ ಮಾಡಿ.
ಹಂತ 4: ಪ್ರಶ್ನೆ ಸಂಖ್ಯೆ 1ರಿಂದ 100ರವರೆಗೆ ಉತ್ತರಗಳನ್ನು ಹೋಲಿಕೆ ಮಾಡಿ.
ಹಂತ 5: ನಿಮ್ಮ OMRನಲ್ಲಿ ಗುರುತಿಸಿದ ಉತ್ತರ ಮತ್ತು KEA Key Answer ಅನ್ನು ಹೋಲಿಸಿ.
ಹಂತ 6: ಸರಿಯಾದ ಉತ್ತರಗಳ ಸಂಖ್ಯೆಯನ್ನು ಲೆಕ್ಕ ಹಾಕಿ ನಿಮ್ಮ Expected Score ಅನ್ನು ಅಂದಾಜಿಸಿ.

 

ಕೀ ಉತ್ತರಗಳ ಆಕ್ಷೇಪಣೆ ಸಲ್ಲಿಕೆ ಹೇಗೆ? (How to Raise Objections)
ಪ್ರಕಟಿತ ಕೀ ಉತ್ತರಗಳ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಆನ್‌ಲೈನ್ ಮೂಲಕ ದೂರು ಸಲ್ಲಿಸಲು KEA ಅವಕಾಶ ಕಲ್ಪಿಸಿದೆ. ಆಕ್ಷೇಪಣೆ ಸಲ್ಲಿಕೆಯ ಸಂಪೂರ್ಣ ನಿಯಮಗಳು ಈ ಕೆಳಗಿನಂತಿವೆ:

  1. ಆಕ್ಷೇಪಣೆ ಇರುವ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌‌ಸೈಟ್ https://cetonline.karnataka.gov.in/kea/ ಮೂಲಕ ದಿನಾಂಕ 08.10.2026 ರ ಬೆಳಿಗ್ಗೆ 10:30 ಗಂಟೆಯೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.  
  2. ಆಕ್ಷೇಪಣೆಗಳನ್ನು ಸಲ್ಲಿಸುವಾಗ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್ (Version Code), ಹಾಗೂ ಪ್ರಶ್ನೆ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.  
  3. ಆಕ್ಷೇಪಣೆಗೆ ಪುಷ್ಟಿ ನೀಡುವ ನಿಖರವಾದ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ PDF ರೂಪದಲ್ಲಿಯೇ ಸಲ್ಲಿಸಬೇಕು.  
  4. ಸಲ್ಲಿಸಲಾಗುವ ಪ್ರತಿಯೊಂದು ಆಕ್ಷೇಪಣೆಗೆ ರೂ. 25/- ಶುಲ್ಕವನ್ನು ಪಾವತಿಸತಕ್ಕದ್ದು. ಪಾವತಿಸಿದ ಈ ಆಕ್ಷೇಪಣಾ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ (Non-refundable).

 

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

 

ಅಭ್ಯರ್ಥಿಗಳು ಗಮನಿಸಲೇಬೇಕಾದ ಕಟ್ಟುನಿಟ್ಟಿನ ನಿಯಮಗಳು:

  • ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೇ ಇರುವ ಆಕ್ಷೇಪಣೆಗಳನ್ನು ಪ್ರಾಧಿಕಾರವು ಪರಿಗಣಿಸಲಾಗುವುದಿಲ್ಲ.  
  • ಅಪೂರ್ಣವಾಗಿರುವ, ಸೂಕ್ತ ಆಧಾರರಹಿತವಾಗಿರುವ (ದಾಖಲೆಗಳಿಲ್ಲದ) ಹಾಗೂ ನಿಗದಿತ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.  
  • ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ, ವಿಷಯ ತಜ್ಞರ ಸಮಿತಿಯು (Subject Expert Committee) ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ.  
  • ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸುವ ಕೀ ಉತ್ತರಗಳೇ ಅಂತಿಮವಾಗಿರುತ್ತದೆ.   

 

ಸೂಚನೆ : ಯಾವುದೇ ಪ್ರಶ್ನೆಯ ಉತ್ತರದಲ್ಲಿ ದೋಷ ಕಂಡುಬಂದರೆ, ಸೂಕ್ತ ದಾಖಲೆ ಅಥವಾ ಅಧಿಕೃತ ಆಧಾರದೊಂದಿಗೆ ಮಾತ್ರ ಆಕ್ಷೇಪಣೆ ಸಲ್ಲಿಸಿ. ಆಕ್ಷೇಪಣೆ ಸಲ್ಲಿಸುವ ಕೊನೆಯ ಸಮಯ ಅಕ್ಟೋಬರ್ 8, 2026 ರಾತ್ರಿ 10:30 ಆಗಿರುವುದರಿಂದ ಸಮಯ ಮೀರದಂತೆ ಎಚ್ಚರಿಕೆ ವಹಿಸಿ.

 

ಕೀ-ಉತ್ತರ ಪ್ರಕಟವಾಗಿದೆ ಎಂದರೆ ಫಲಿತಾಂಶವೂ ಪ್ರಕಟವಾಗಿದೆ ಎಂದಲ್ಲ
ಇದನ್ನು ಆಧಾರ ಮಾಡಿಕೊಂಡು ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಬಹುದು ಮತ್ತು ಅಂದಾಜು ಅಂಕಗಳನ್ನು ಲೆಕ್ಕ ಹಾಕಬಹುದು.

ಆದರೆ ಕೀ-ಉತ್ತರದ ಕುರಿತು ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಕೀ-ಉತ್ತರ ಹಾಗೂ ನಂತರದ ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತಗಳ ಕುರಿತು KEA ಅಧಿಕೃತವಾಗಿ ಮಾಹಿತಿ ನೀಡಲಿದೆ.

ಆದ್ದರಿಂದ ಈಗಿನ ಕೀ-ಉತ್ತರದ ಆಧಾರದ ಮೇಲೆ ಅಂತಿಮ ಆಯ್ಕೆ ಆಗಿದೆ ಅಥವಾ ಆಗಿಲ್ಲ ಎಂದು ನಿರ್ಧರಿಸುವುದು ಸರಿಯಲ್ಲ.

 

ಪತ್ರಿಕೆ 1 (ಸಾಮಾನ್ಯ ಜ್ಞಾನ) ಮತ್ತು ಪತ್ರಿಕೆ 2 (ನಿರ್ದಿಷ್ಟ ಪತ್ರಿಕೆ) ರ ಎಲ್ಲಾ ವರ್ಷನ್ ಕೋಡ್‌ಗಳ (A1 ನಿಂದ D1 ವರೆಗೆ) ಅಧಿಕೃತ ಮತ್ತು ಸಂಪೂರ್ಣ ಕೀ ಉತ್ತರಗಳನ್ನು ಪ್ರಾಧಿಕಾರವು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಕ್ಷಣವೇ ತಮ್ಮ OMR ಪ್ರತಿಗಳೊಂದಿಗೆ ಉತ್ತರಗಳನ್ನು ತಾಳೆ ನೋಡಿ, ಅಗತ್ಯವಿದ್ದರೆ ನಿಗದಿತ ಸಮಯದೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ.   

 

ಕರ್ನಾಟಕದ ಸಮಸ್ತ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಇಂತಹ ಕ್ಷಿಪ್ರ ಹಾಗೂ ನಿಖರವಾದ ಉದ್ಯೋಗ ಮಾಹಿತಿ, ಸ್ಟಡಿ ಮೆಟೀರಿಯಲ್ಸ್ ಮತ್ತು ಅಪ್ಡೇಟ್‌ಗಳನ್ನು ಒದಗಿಸುವ KPSCVaani ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರಿ.

 

Advertisement
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.