ನೇಮಕಾತಿ ಪ್ರಕ್ರಿಯೆಯನ್ನು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸಲು ಸರ್ಕಾರದ 400 ಬಿಂದುಗಳ ನೇರ ನೇಮಕಾತಿ ರೋಸ್ಟರ್ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ಒಳ ಮೀಸಲಾತಿಯನ್ನು ಅಳವಡಿಸಲು ಪೂರಕವಾಗಿ 60 ಬಿಂದುಗಳ ರೋಸ್ಟರ್ ಅನ್ನು ನಿಗದಿಪಡಿಸಲಾಗಿದೆ. ಎಲ್ಲಾ ಘಟಕಗಳು ತಮ್ಮ ಹುದ್ದೆಗಳ ಹಂಚಿಕೆ ವಿವರವನ್ನು ಸಿದ್ಧಪಡಿಸಿ ನೇಮಕಾತಿ ವಿಭಾಗಕ್ಕೆ ಕಳುಹಿಸುತ್ತಿದ್ದಂತೆ, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ (Official Notification) ಹೊರಬೀಳಲಿದೆ.
KPSCVaani ಓದುಗರಿಗಾಗಿ ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆಗಳಿವೆ? ವಯೋಮಿತಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಗಳ ಸಂಪೂರ್ಣ ವಿವರ (Vacancy Details)
ಈ ಬಾರಿಯ ನೇಮಕಾತಿಯಲ್ಲಿ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್, ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಮತ್ತು ಮಿಕ್ಕ ಜಿಲ್ಲೆಗಳ (ಹೈ-ಕ ಹೊರತುಪಡಿಸಿ) ಹುದ್ದೆಗಳ ವಿವರ ಈ ಕೆಳಗಿನಂತಿದೆ:
.png)
ಈಗಾಗಲೇ ಅಧಿಸೂಚಿದ PC ಮತ್ತು PSI ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
ವಯೋಮಿತಿ ಸಡಿಲಿಕೆ: ಅಭ್ಯರ್ಥಿಗಳಿಗೆ ಸಿಕ್ಕ ದೊಡ್ಡ ವರ! (Age Relaxation)
ಕಳೆದ ಮೂರು-ನಾಲ್ಕು ವರ್ಷಗಳಿಂದ ಪೊಲೀಸ್ ನೇಮಕಾತಿ ಸರಿಯಾಗಿ ನಡೆಯದ ಕಾರಣ, ಲಕ್ಷಾಂತರ ಅಭ್ಯರ್ಥಿಗಳು ವಯೋಮಿತಿ ಮೀರುವ ಆತಂಕದಲ್ಲಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ನೆರೆ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕದಲ್ಲೂ 5 ವರ್ಷಗಳ ವಯೋಮಿತಿ ಹೆಚ್ಚಳವನ್ನು ಶಾಶ್ವತವಾಗಿ ಮಾಡಿದೆ!
ಇದರ ಅನ್ವಯ ಪರಿಷ್ಕೃತ ವಯೋಮಿತಿ ವಿವರ ಹೀಗಿದೆ:
- ಸಾಮಾನ್ಯ ವರ್ಗ (General Merit): ಈ ಹಿಂದೆ ಇದ್ದ 25 ವರ್ಷಗಳ ವಯೋಮಿತಿಯನ್ನು ಇದೀಗ 30 ವರ್ಷಕ್ಕೆ ಹೆಚ್ಚಿಸಲಾಗಿದೆ.
- SC / ST / OBC ಅಭ್ಯರ್ಥಿಗಳಿಗೆ: ಈ ಹಿಂದೆ ಇದ್ದ 27 ವರ್ಷಗಳ ವಯೋಮಿತಿಯನ್ನು ಇದೀಗ 32 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಸಿವಿಲ್ ಪಿಎಸ್‌ಐ (Civil PSI) ನೇಮಕಾತಿ ಯಾವಾಗ? ಗೊಂದಲಕ್ಕಿದೆ ಹೊಸ ಸೂತ್ರ!
ರಾಜ್ಯದಲ್ಲಿ ಸಿವಿಲ್ ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗಳ ನೇಮಕಾತಿಗಾಗಿ ಉದ್ಯೋಗಾಕಾಂಕ್ಷಿಗಳಿಂದ ದೊಡ್ಡ ಮಟ್ಟದ ಒತ್ತಾಯ ಕೇಳಿಬರುತ್ತಿದೆ. ಕೆಲವು ವರ್ಷಗಳ ಹಿಂದೆ ಹೈಕೋರ್ಟ್ ನೀಡಿದ ತೀರ್ಪಿನ ಅನ್ವಯ ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮದ (ಕೆಸಿಎಸ್‌ಆರ್) 32ರ ಪ್ರಕಾರ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಿಗೆ (ASI) ಷರತ್ತು ವಿಧಿಸಿ ಎಸ್‌ಐ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು.
ಆದರೆ, "ಯಾವ ಸಮಯದಲ್ಲಿ ಬೇಕಾದರೂ ಹಿಂಬಡ್ತಿ ಪಡೆಯುತ್ತೇವೆ" ಎಂಬ ಷರತ್ತಿನಿಂದಾಗಿ ಇಲಾಖೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇತ್ತು. ಇದರಿಂದಾಗಿ ನೇರ ನೇಮಕಾತಿಗೂ ಅಡ್ಡಿಯಾಗಿ ಸುಮಾರು 600 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡಿದ್ದರೂ ಪ್ರಕ್ರಿಯೆ ಆರಂಭಿಸಲು ಇಲಾಖೆ ಹಿಂದೇಟು ಹಾಕಿತ್ತು. ಇದೀಗ ಒಳಮೀಸಲಾತಿಗೆ ಹೊಸ ಸೂತ್ರ ಸಿದ್ಧವಾಗುತ್ತಿದ್ದು, ಈ ಗೊಂದಲಗಳು ಮುಗಿದು ತಕ್ಷಣವೇ ಪಿಎಸ್‌ಐ ಹೊಸ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.
ಈಗಾಗಲೇ ಅಧಿಸೂಚಿದ KSP PC ಮತ್ತು PSI ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
KPSCVaani ಅಭ್ಯರ್ಥಿಗಳಿಗೆ ನೀಡುವ ಮಹತ್ವದ ಟಿಪ್ಸ್:
- ರೋಸ್ಟರ್ ಸಿದ್ಧತೆ ಅಂತಿಮ ಹಂತದಲ್ಲಿದೆ: ಡಿಜಿ-ಐಜಿಪಿ ಅವರ ಆದೇಶದಂತೆ ಎಲ್ಲಾ ಘಟಕಗಳು ಶೀಘ್ರದಲ್ಲೇ ಹುದ್ದೆಗಳ ಹಂಚಿಕೆ ಪಟ್ಟಿ ನೀಡಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ನೋಟಿಫಿಕೇಶನ್ ಪ್ರಕಟವಾಗಲಿದೆ.
- ದೈಹಿಕ ಮತ್ತು ಲಿಖಿತ ಪರೀಕ್ಷೆ ತಯಾರಿ ಇಂದೇ ಆರಂಭಿಸಿ: 8,176 ಹುದ್ದೆಗಳು ಅತಿ ದೊಡ್ಡ ಸಂಖ್ಯೆಯಾಗಿರುವುದರಿಂದ ಪೈಪೋಟಿ ಕೂಡ ತೀವ್ರವಾಗಿರುತ್ತದೆ. ಲಿಖಿತ ಪರೀಕ್ಷೆಯ ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆಗೂ (Physical Test) ತಯಾರಿ ನಡೆಸಿ.
- ದಾಖಲೆಗಳನ್ನು ಇಟ್ಟುಕೊಳ್ಳಿ: ಒಳ ಮೀಸಲಾತಿ ಮತ್ತು ಹೊಸ ರೋಸ್ಟರ್ ಅನ್ವಯ ನೇಮಕಾತಿ ನಡೆಯುವುದರಿಂದ ನಿಮ್ಮ ಜಾತಿ, ಆದಾಯ ಮತ್ತು ಇತರೆ ಮೀಸಲಾತಿ ಪ್ರಮಾಣಪತ್ರಗಳನ್ನು ಅಪ್-ಟು-ಡೇಟ್ ಮಾಡಿಸಿಟ್ಟುಕೊಳ್ಳಿ.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
Comments