Loading..!

KSP ಬಿಗ್ ಅಪ್‌ಡೇಟ್: 3991 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ PST & ET ಪರೀಕ್ಷೆಗೆ ಹೊಸ ದಿನಾಂಕ ಫಿಕ್ಸ್. ಡೀಟೈಲ್ಸ್ ಇಲ್ಲಿದೆ.
Published by: Yallamma G | Date:5 ಸೆಪ್ಟೆಂಬರ್ 2026
KSP ಬಿಗ್ ಅಪ್‌ಡೇಟ್: 3991 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ PST & ET ಪರೀಕ್ಷೆಗೆ ಹೊಸ ದಿನಾಂಕ ಫಿಕ್ಸ್. ಡೀಟೈಲ್ಸ್ ಇಲ್ಲಿದೆ.

ಕರ್ನಾಟಕ ಪೊಲೀಸ್ ಇಲಾಖೆಯ 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ದೈಹಿಕ ಪರೀಕ್ಷೆಯ (PST & ET) ಪರಿಷ್ಕೃತ ಹೊಸ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (KSP) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಅಂತಿಮ ಹಂತ ತಲುಪಿದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ಹಂತದ ದೈಹಿಕ ಪರೀಕ್ಷೆಗಾಗಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆಯು ಮಹತ್ವದ ಅಪ್‌ಡೇಟ್ ನೀಡಿದೆ.

ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ (ಆರ್‌ಪಿಸಿ - 3395 ಮತ್ತು ಕಲ್ಯಾಣ ಕರ್ನಾಟಕ - 596) ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ (PST & ET) ಈ ಹಿಂದೆ ನಿಗದಿಯಾಗಿದ್ದ ದಿನಾಂಕಗಳನ್ನು ಬದಲಾಯಿಸಿ, ಈಗ ಪರಿಷ್ಕೃತ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಈ ದೈಹಿಕ ಪರೀಕ್ಷೆಗಳ ನಿಖರ ದಿನಾಂಕಗಳು ಮತ್ತು ಘಟಕವಾರು ಅರ್ಹ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.

CPC ದೈಹಿಕ ಪರೀಕ್ಷೆ (PST & ET) ಪರಿಷ್ಕೃತ ಹೊಸ ದಿನಾಂಕಗಳು

ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರ ಕಚೇರಿಯಿಂದ ಬಿಡುಗಡೆಯಾದ ಅಧಿಕೃತ ಮಾಹಿತಿಯಂತೆ, ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ದೈಹಿಕ ಪರೀಕ್ಷೆಯು ಈ ಕೆಳಗಿನಂತೆ ಹೊಸ ದಿನಾಂಕಗಳಲ್ಲಿ ನಡೆಯಲಿದೆ:

ಮಿಕ್ಕುಳಿದ ಮೂಲ ವೃಂದ (RPC - 3395 ಹುದ್ದೆಗಳು): ಸೆಪ್ಟೆಂಬರ್ 28, 2026 ರಿಂದ ಅಕ್ಟೋಬರ್ 06, 2026 ರವರೆಗೆ (ಭಾನುವಾರ ಹಾಗೂ ರಜಾ ದಿನಗಳನ್ನು ಹೊರತುಪಡಿಸಿ) ಪರೀಕ್ಷೆಗಳು ಜರುಗಲಿವೆ.

ಕಲ್ಯಾಣ-ಕರ್ನಾಟಕ ವೃಂದ (KK - 596 ಹುದ್ದೆಗಳು): ಅಕ್ಟೋಬರ್ 08, 2026 ರಿಂದ ಅಕ್ಟೋಬರ್ 15, 2026 ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ದೈಹಿಕ ಪರೀಕ್ಷೆಗಳು ನಡೆಯಲಿವೆ.

ವಿಶೇಷ ಸೂಚನೆ: ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ದೃಷ್ಟಿಯಿಂದ, ಒಂದು ದಿನಕ್ಕೆ ಕೇವಲ 600 ಅಭ್ಯರ್ಥಿಗಳಿಗೆ ಮಾತ್ರ ದೈಹಿಕ ಪರೀಕ್ಷೆಯನ್ನು ನಡೆಸಲು ಇಲಾಖೆ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದೆ.

ಘಟಕವಾರು ದೈಹಿಕ ಪರೀಕ್ಷೆಗೆ (PST & ET) ಅರ್ಹರಾದ ಅಭ್ಯರ್ಥಿಗಳ ಸಂಖ್ಯೆ

ಇಲಾಖೆಯು ಪ್ರಕಟಿಸಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ದೈಹಿಕ ಪರೀಕ್ಷೆಗೆ ರಾಜ್ಯಾದ್ಯಂತ ಸಾವಿರಾರು ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಮಿಕ್ಕುಳಿದ ಮೂಲ ವೃಂದ (RPC) ವೃಂದದಲ್ಲಿ ಒಟ್ಟಾರೆ 16,453 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಪ್ರಮುಖ ಘಟಕಗಳ ವಿವರ ಗಮನಿಸುವುದಾದರೆ, ಬೆಂಗಳೂರು ನಗರ ಘಟಕದಲ್ಲಿ ಅತಿ ಹೆಚ್ಚು 9,887 ಅಭ್ಯರ್ಥಿಗಳು, ಮಂಗಳೂರು ನಗರದಲ್ಲಿ 573, ಶಿವಮೊಗ್ಗದಲ್ಲಿ 500, ಮಂಡ್ಯದಲ್ಲಿ 484 ಹಾಗೂ ಉಡುಪಿಯಲ್ಲಿ 473 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಕಲ್ಯಾಣ-ಕರ್ನಾಟಕ (KK) ವೃಂದದಲ್ಲಿ ಒಟ್ಟಾರೆ 2,942 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 595, ಬೀದರ್‌ನಲ್ಲಿ 400 ಹಾಗೂ ರಾಯಚೂರಿನಲ್ಲಿ 381 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

KPSCVaani ಸಲಹೆ:
ದೈಹಿಕ ಪರೀಕ್ಷೆಯ (PST & ET) ಪರಿಷ್ಕೃತ ದಿನಾಂಕಗಳು ಸೆಪ್ಟೆಂಬರ್ 28 ರಿಂದಲೇ ಆರಂಭವಾಗುತ್ತಿರುವುದರಿಂದ, ಅರ್ಹ ಅಭ್ಯರ್ಥಿಗಳು ತಮ್ಮ ದೈಹಿಕ ಸಿದ್ಧತೆಯನ್ನು (ಓಟ, ಎತ್ತರ, ಎದೆ ಸುತ್ತಳತೆ ಇತ್ಯಾದಿ) ಮತ್ತಷ್ಟು ಚುರುಕುಗೊಳಿಸುವುದು ಒಳಿತು. ಶೀಘ್ರದಲ್ಲೇ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಕರೆಪತ್ರ (Call Letter / Hall Ticket) ಬಿಡುಗಡೆಯಾಗಲಿದ್ದು, ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸುತ್ತಿರಿ.

Comments