ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಹಾಗೂ ಕಟ್‌ಆಫ್ ಅಂಕಗಳು ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಹಾಗೂ ಕಟ್‌ಆಫ್ ಅಂಕಗಳು ಪ್ರಕಟ
Published by Savita Halli
22 ಆಗಸ್ಟ್ 2022 KPSC

ರಾಜ್ಯದ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸುವ ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಹಾಗೂ ಕಟ್‌ಆಫ್ ಅಂಕಗಳುನ್ನು ಪ್ರಕಟಿಸಿದೆ.
*ಪ್ರಥಮ ದರ್ಜೆ ಸಹಾಯಕ ಹುದ್ದೆ: ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ  ದಿನಾಂಕ : 01-09-2017 ಮತ್ತು ಸೇರ್ಪಡೆ ಅಧಿಸೂಚನೆ ದಿನಾಂಕ 24-11-2017ರಲ್ಲಿ ಅಧಿಸೂಚಿಸಲಾದ ಪ್ರಥಮ ದರ್ಜೆ ಸಹಾಯಕರ ಒಟ್ಟು 960 ( 810 + 150ಹೈಕ ) ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಪ್ರಥಮ ದರ್ಜೆ ಸಹಾಯಕರು, 960 (810+150) ಹುದ್ದೆಗಳ ಕಟ್ ಆಫ್ ಅಂಕಗಳನ್ನು ಇಲಾಖೆಯು ಇದೀಗ ಪ್ರಕಟಿಸಲಾಗಿದೆ.
* ವಿವಿಧ ನ್ಯಾಯಾಂಗದ ಹುದ್ದೆ: ವಿವಿಧ ನ್ಯಾಯಾಂಗ ಘಟಕಗಳಲ್ಲಿನ ಉಳಿಕೆ ಮೂಲ ವೃಂದದ ಪ್ರಥಮ ದರ್ಜೆ ಸಹಾಯಕರ ಒಟ್ಟು 219 ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು 01 / 12 / 2020 ರಂದು ಪ್ರಕಟಿಸಲಾಗಿತ್ತು. ಈಗ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
* ವಸತಿ ನಿಲಯ ಮೇಲ್ವಿಚಾರಕ ಹುದ್ದೆ: ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಮೆಟ್ರಿಕ್ ಪೂರ್ವ ವಸತಿ ನಿಲಯ ಮೇಲ್ವಿಚಾರಕರ ( ಪುರುಷ ) 4 ಹುದ್ದೆಗಳನ್ನು ಹೊರತುಪಡಿಸಿ ಈಗ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
* ಸಹಾಯಕ ತೋಟಗಾರಿಕೆ ಅಧಿಕಾರಿ: ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿ 221 ಹುದ್ದೆಗಳಿಗೆ 2021 ರ ಜನವರಿ .19 ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಈಗ 20 ಸ್ಥಾನಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ ಲೋಡ್ ಮಾಡಿಕೊಂಡು ಕಟ್ ಆಫ್ ಅಂಕಗಳನ್ನು ನೋಡಬಹುದು.
https://kpsc.kar.nic.in/

Useful Links
To Visit Official Announcement
Official notification attachment
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.