Water Resource Department 25 ಜೂನ್ 2019 7 years ago

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗ್ರೂಪ್ ಬಿ ಮತ್ತು ಸಿ ದರ್ಜೆಯ ಬ್ಯಾಕ್ ಲಾಗ್ ಹುದ್ದೆಗಳ ದಾಖಲೆ ಪರಿಶೀಲನೆ ಶುರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗ್ರೂಪ್ ಬಿ ಮತ್ತು ಸಿ ದರ್ಜೆಯ ಬ್ಯಾಕ್ ಲಾಗ್ ಹುದ್ದೆಗಳ ದಾಖಲೆ ಪರಿಶೀಲನೆ ಶುರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗ್ರೂಪ್ ಬಿ ಮತ್ತು ಸಿ ದರ್ಜೆಯ ಬ್ಯಾಕ್ ಲಾಗ್ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅರ್ಹತೆ ಪಡೆದ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆಯನ್ನು ಜುಲೈ 15ರಿಂದ 18ರವರೆಗೆ ನಡೆಸಲಿದೆ. 1 :5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನ ಜಲಮಂಡಳಿಯ ಸಭಾಂಗಣದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ ಅರ್ಹತೆ ಪಡೆದ ಅಭ್ಯರ್ಥಿಗಳ ಹೆಸರನ್ನು ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಬೆಳಗ್ಗೆ 11ಗಂಟೆಯಿಂದ ಮತ್ತು ಮಧ್ಯಾಹ್ನ 2.30 ರಿಂದ ದಾಖಲೆ ಪರಿಶೀಲನೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿ ಸೇರಿದಂತೆ ಮೂಲ ದಾಖಲೆಗಳೊಂದಿಗೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕೆಂದು ಮಂಡಳಿಯು ಸೂಚಿಸಿದೆ. ಸಹಾಯಕ ಅಭಿಯಂತರ, ಕಿರಿಯ ಅಭಿಯಂತರ, ಅಸಿಸ್ಟೆಂಟ್, ಕಿರಿಯ ಸಹಾಯಕ, ಮಾಪನ ಓದುಗ, ಎರಡನೇ ದರ್ಜೆ ಉಗ್ರಾಣ ಪಾಲಕ, ಶೀಘ್ರಲಿಪಿಗಾರರು ಸೇರಿದಂತೆ ಒಟ್ಟು 26 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಕಳೆದ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
Official Notifications & Links
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.