ಬಹುಜನ ವಿದ್ಯಾರ್ಥಿ ಸಂಘ(BVS)ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ವಿದ್ಯಾರ್ಥಿಗಳಿಗೆ ಒಂದು ಲಕ್ಷದವರೆಗೂ ಬಹುಮಾನ..!
02 ಜನವರಿ 2020
Others
ಬಹುಜನ ವಿದ್ಯಾರ್ಥಿ ಸಂಘ ಕರ್ನಾಟಕವು ನವೆಂಬರ್ 26 ರಿಂದ ಜನವರಿ 26 ರವರೆಗೆ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ರಾಜ್ಯದ ಪ್ರೌಢಶಾಲಾ, ಪದವಿ ಪೂರ್ವ/ತತ್ಸಮಾನ ಮತ್ತು ಪದವಿ/ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ವಿಭಾಗವಾರು ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಇಪ್ಪತ್ತೈದು ಸಾವಿರ ದಿಂದ 1 ಲಕ್ಷ ರೂಪಾಯಿವರೆಗೂ ನಿಗದಿಪಡಿಸಲಾಗಿದೆ.
ಪ್ರಬಂಧದ ವಿಷಯಗಳು ಈ ಕೆಳಗಿನಂತೆ ಇರುತ್ತದೆ:
* ಪ್ರೌಢಶಾಲಾ ವಿಭಾಗದ ಪ್ರಬಂಧದ ವಿಷಯ - "ಭಾರತದ ಸಂವಿಧಾನದ ರಚನೆಯಲ್ಲಿ ಭಾರತ ಸಂವಿಧಾನ ಪಿತಾಮಹರಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪಾತ್ರ"
* ಪದವಿ ಪೂರ್ವ ಅಥವಾ ತತ್ಸಮಾನ ಕೋರ್ಸಗಳ ಪ್ರಬಂಧದ ವಿಷಯ- "ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ"
* ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಪ್ರಬಂಧದ ವಿಷಯ - "ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ"
ಸೂಚನೆಗಳು:
- ಪ್ರಬಂಧದ ಮೊದಲ ಪುಟದಲ್ಲಿ ಹೆಸರು, ತರಗತಿ, ಕಾಲೇಜು, ವಿಳಾಸ, ಮೊಬೈಲ್ ನಂಬರನ್ನು ಸ್ಪಷ್ಟವಾಗಿ ಬರೆದಿರಬೇಕು
- ಪ್ರಬಂಧವು ವಿದ್ಯಾರ್ಥಿಯ ಸ್ವಹಸ್ತಾಕ್ಷರದಲ್ಲಿರಬೇಕು
- A4 ಹಾಳೆಯಲ್ಲಿ ನೀಲಿ ಅಥವಾ ಕಪ್ಪು ಶಾಹಿಯಿಂದ ಬರೆದಿರಬೇಕು
- ಪ್ರಬಂಧವು 2500 ಪದಗಳಿಗೆ ಮೀರದಂತೆ ಬರೆದಿರಬೇಕು(ಪ್ರೌಢ ಶಾಲಾ ವಿಭಾಗಕ್ಕೆ 1000 ಪದಗಳು)
- ಪ್ರಬಂಧವನ್ನು ಕಾಲೇಜು/ಸಂಸ್ಥೆಯ ಪ್ರಾಂಶುಪಾಲರು / ಮುಖ್ಯಸ್ಥರ ಸಹಿ ಮತ್ತು ಮೊಹರನ್ನು ಪಡೆದು ಕೊನೆಯ ದಿನವಾದ 10 ಜನವರಿ 2020 ಸಂಜೆ 05:00 ಗಂಟೆಯೊಳಗಾಗಿ ಕಳುಹಿಸಿಕೊಡಬೇಕು.
ಪ್ರಬಂಧವನ್ನು ಕಲಿಸಿಕೊಡಬೇಕಾದ ವಿಳಾಸ:
ನಂಬರ್ 01, 16ನೇ ಅಡ್ಡರಸ್ತೆ, ಗಣಪತಿ ದೇವಾಲಯದ ಎದುರು, ಒಂದನೇ ಮಹಡಿ, ಲಕ್ಕಸಂದ್ರ, ಬೆಂಗಳೂರು-560030
ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ
9060486094
8660621596
9986839074
8105041538
ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪ್ರಕಟನೆಯನ್ನು ಡೌನ್ಲೋಡ್ ಮಾಡಿಕೊಂಡು ಇನ್ನು ಹೆಚ್ಚಿನ ವಿವರಗಳನ್ನು ಪಡೆಯಿರಿ