BMTC/KSRTC 28 ಜುಲೈ 2018 7 years ago

ಬಿಎಂಟಿಸಿಯು ವಿವಿಧ ಹುದ್ದೆಗಳ ನೇಮಕಾತಿಯ ಸಂಭವನೀಯ ಅರ್ಹತಾ ಪಟ್ಟಿ ಮತ್ತು ಕಟ್-ಆಫ್ ಅಂಕಗಳನ್ನು ಪ್ರಕಟಿಸಿದೆ.

ಬಿಎಂಟಿಸಿಯು ವಿವಿಧ ಹುದ್ದೆಗಳ ನೇಮಕಾತಿಯ ಸಂಭವನೀಯ ಅರ್ಹತಾ ಪಟ್ಟಿ ಮತ್ತು ಕಟ್-ಆಫ್ ಅಂಕಗಳನ್ನು ಪ್ರಕಟಿಸಿದೆ.
ಬಿಎಂಟಿಸಿಯು ವಿವಿಧ ಹುದ್ದೆಗಳ ನೇಮಕಾತಿಗಾಗಿ 9-06-2018 ಮತ್ತು 10-06-2018 ರಂದು ಪರೀಕ್ಷೆಗಳನ್ನು ನಡೆಸಿತ್ತು, ಪ್ರಸ್ತುತ ಒಟ್ಟಾರೆ ಶೇಕಡವಾರು ಅಂಕಗಳ ಅರ್ಹತಾನುಸಾರ ಮತ್ತು ಮೀಸಲಾತಿ ನಿಯಮಾನುಸಾರ ಸಂಭವನೀಯ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳ ವಿವರಗಳನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಸೇರ್ಪಡೆಗೊಂಡ ಅಭ್ಯರ್ಥಿಗಳು ಮೂಲ ದಾಖಲಾತಿ ಮತ್ತು ದೇಹದಾರ್ಢ್ಯತೆ ಪರಿಶೀಲನೆಗೆ ನಿಗದಿಪಡಿಸಲಾಗಿರುವ ದಿನಾಂಕಗಳನ್ನಗೊಂಡ ಕರೆ ಪತ್ರವನ್ನು ಸಂಸ್ಥೆಯ ವೆಬ್ ಸೈಟ್ ನಿಂದ ಮುದ್ರಿಸಿಕೊಂಡು ಅಂತರ್ಜಾಲ ಕರೆ ಪತ್ರದಲ್ಲಿ ಸೂಚಿಸಲಾದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ತಪ್ಪದೇ ಪರಿಶೀಲನೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು. ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಅವರು ಪಡೆದಿರುವ ಅಂಕಗಳನ್ನು ಸಂಸ್ಥೆಯ ವೆಬ್ ಸೈಟ್ ನಲ್ಲಿ ಅವರ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ತಿಳಿದುಕೊಳ್ಳಬಹುದಾಗಿದೆ. ಸಂಭವನೀಯ ಅರ್ಹತಾ ಪಟ್ಟಿಯಲ್ಲಿನ ಕೊನೆಯ ಅಭ್ಯರ್ಥಿಯ ಗುಂಪುವಾರು ಹಾಗೂ ಶೇಕಡವಾರು ಅಂಕಗಳಿಗಿಂತ ಹೆಚ್ಚಿನ ಅಂಕ ಗಳಿಸಿದ್ದು ಸಂಭವನೀಯ ಅರ್ಹತಾ ಪಟ್ಟಿಯಲ್ಲಿ ಸೇರ್ಪಡೆಗೊಂಡಲ್ಲವೆಂದು ಆಕ್ಷೇಪಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಸೂಕ್ತ ದಾಖಲಾತಿಗಳೊಂದಿಗೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ನೇಮಕಾತಿ ಶಾಖೆ, ಬಿಎಂಟಿಸಿ ಕೇಂದ್ರ ಕಚೇರಿ ಶಾಂತಿನಗರ, ಬೆಂಗಳೂರು-27 ನಲ್ಲಿ ದಿನಾಂಕ 06-08-2018ರೊಳಗಾಗಿ ಅರ್ಜಿ ಸಲ್ಲಿಸಿರುವ ಹುದ್ದೆ, ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿ ಲಿಖಿತವಾಗಿ ಖುದ್ದು ಹಾಜರಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಆಕ್ಷೇಪಣೆ ಸಲ್ಲಿಸತಕ್ಕದ್ದು ದಿನಾಂಕ 06-08-2018 ರ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ವಿವರಗಳಿಗಾಗಿ ಸಂಸ್ಥೆಯ ವೆಬ್ ಸೈಟ್ ನೋಡುವುದು
Official Notifications & Links
to see the cut-off marks for each post
Official notification attachment
Discussion & Comments (1)

Have a query or feedback about this update?

M
Mahammadpaigambar Jamadar
21 ಜುಲೈ 2021, 03:47 ಅಪರಾಹ್ನ

Provisional list not open

Stay Updated with KPSC Vaani

Get instant notifications for exam alerts, question papers, syllabus, and results directly on your phone.