ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ನೇರ ಸಂದರ್ಶನ

ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ನೇರ ಸಂದರ್ಶನ
Published by Yallamma G
10 ಫೆಬ್ರವರಿ 2025 Others

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ 2025-26 ನೇ ಶೈಕ್ಷಣಿಕ ವರ್ಷಕ್ಕಾಗಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಆಯ್ಕೆ ಪ್ರಕ್ರಿಕೆ : 
ಸಂದರ್ಶನದ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ. ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳನ್ನು ಈ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಸಂದರ್ಶನ ನಡೆಯುವ ದಿನಾಂಕ ಮತ್ತು ಸಮಯ : 
- 04.03.2025 ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ : ಪಿಜಿಟಿ ಸ್ನಾತಕೋತ್ತರ : ಇಂಗ್ಲೀಷ , ಹಿಂದಿ, ಗಣಿತ, ಕಂಪ್ಯೂಟರ್ ವಿಜ್ಞಾನ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ, ಭೌಗೋಳಿಕ, ರಾಜಕೀಯ ವಿಜ್ಞಾನ), ಟಿಜಿಟಿ (ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಸಂಸ್ಕೃತ), ಪಿಆರ್‌ಟಿ. ಪ್ರಾಥಮಿಕ ಶಿಕ್ಷಕ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
- 06.03.2025 ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ : ಯೋಗ ಶಿಕ್ಷಕರು, ಕನ್ನಡ ಶಿಕ್ಷಕ, ಸಂಗೀತ ಶಿಕ್ಷಕ, ನೃತ್ಯ ಶಿಕ್ಷಕರು, ಕ್ರೀಡಾ ತರಬೇತುದಾರರು, ಕಲೆ ಮತ್ತು ಕರ ಕುಶಲ ಶಿಕ್ಷಕರು, ಕಂಪ್ಯೂಟರ ಬೋಧಕರು, ನರ್ಸ್, ವೈದ್ಯರು, ವಿಶೇಷ ಶಿಕ್ಷಣ, ಬ್ಯಾಗ್ ಪೈಪರ್ ಬ್ಯಾಂಡ್ ಶಿಕ್ಷಕರು ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳ:
ಕೇಂದ್ರೀಯ ವಿದ್ಯಾಲಯ ಡಿಆರ್ ಡಿಒ, ಸಿ.ವಿ. ರಾಮನ್ ನಗರ, ಬೆಂಗಳೂರು - 560093.

ಮುಖ್ಯ ಅಂಶಗಳು:
- ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಗಳೊಂದಿಗೆ ಮೌಲ್ಯಮಾಪನ ಮತ್ತು ಸಂದರ್ಶನಕ್ಕೆ ಹಾಜರಾಗಬೇಕು.
- ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೈಜ್ ಫೋಟೋ, ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವ ಪ್ರಮಾಣಪತ್ರಗಳೊಂದಿಗೆ ಹಾಜರಾಗಬೇಕು.
- ವೇತನದ ಬಗ್ಗೆ ನಿರ್ಧಾರವು ಶಾಲಾ ನಿರ್ವಹಣಾ ಸಮಿತಿಯ ನಿಯಮಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುವುದು.

ವಯೋಮಿತಿ : 
ಕನಿಷ್ಠ 18 ವರ್ಷ ಗರಿಷ್ಠ 65 ವರ್ಷಗಳು ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆಯನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು :  www.drdobangalore.kvs.ac.in ಗೆ ಭೇಟಿ ನೀಡಿ ಅಥವಾ 080 25243919 ಗೆ ಕರೆ ಮಾಡಿ.

ಸಂಪರ್ಕ:
ಪ್ರಾಂಶುಪಾಲರು,
ಕೇಂದ್ರೀಯ ವಿದ್ಯಾಲಯ, ಡಿಆರ್ ಡಿಒ, ಬೆಂಗಳೂರು.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.