ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Yallamma G
23 ಮೇ 2025 Others

ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ 5  ಆಡಿಯೋಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಾಜಿಸ್ಟ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ. ಜನ್ಮ ದಿನಾಂಕ, ಕಾರ್ಯಾನುಭವ, ವಿದ್ಯಾರ್ಹತೆ ದಾಖಲೆಗಳ ಜೆರಾಕ್ಸ್‌ ಪ್ರತಿಗಳನ್ನು ಧೃಡೀಕರಿಸಿ, ಅರ್ಜಿಯೊಂದಿಗೆ ಲಗತ್ತಿಸಿ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ : 
Audiologist : 3
Speech Language Pathologist : 2

ವಿದ್ಯಾರ್ಹತೆ :  B.Sc

ವಯೋಮಿತಿ : 45 ವರ್ಷ, ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ : 
ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳು: ಇಲ್ಲ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ.48/-
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ.118/-
ಪಾವತಿ ವಿಧಾನ: ಆನ್‌ಲೈನ್/ಡಿಮಾಂಡ್ ಡ್ರಾಫ್ಟ್

ಆಯ್ಕೆ ಪ್ರಕ್ರಿಯೆ : 
ಶಾರ್ಟ್‌ಲಿಸ್ಟ್, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

  ಅರ್ಜಿ ಸಲ್ಲಿಸುವ ವಿಧಾನ : 
- ಮೊದಲನೆಯದಾಗಿ AIISH ಮೈಸೂರು ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ - ನೇಮಕಾತಿ ಲಿಂಕ್ ಕೆಳಗೆ ನೀಡಲಾಗಿದೆ.
- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ಮೇಲಿನ ಲಿಂಕ್‌ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ).
- ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.

ಅರ್ಜಿ ಸಲ್ಲಿಸುವ ವಿಳಾಸ : 
Office of the Chief Administrative Officer, All India Institute of Speech & Hearing, Manasagangothri, Mysore-570006 

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-05-2025
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-05-2025

Discussion & Comments (1)

Have a query or feedback about this update?

L
Lakshman Kamble
23 ಮೇ 2025, 01:13 ಅಪರಾಹ್ನ

What is this

Stay Updated with KPSC Vaani

Get instant notifications for exam alerts, question papers, syllabus, and results directly on your phone.