ವಿಶ್ವ ಯುವ ಕೌಶಲ್ಯ ದಿನ 2026ರ ಧೇಯವಾಕ್ಯ (Theme): "ಹಂಚಿಕೆಯ ಭವಿಷ್ಯಕ್ಕಾಗಿ ಕೌಶಲ್ಯಗಳು" (Skills for a Shared Future)
➤ ಶ್ರೀಲಂಕಾ ದೇಶದ ನೇತೃತ್ವದ ಪ್ರಸ್ತಾವನೆಯೊಂದಿಗೆ ವಿಶ್ವಸಂಸ್ಥೆಯು ಜುಲೈ 15 ಅನ್ನು ವಿಶ್ವ ಯುವ ಕೌಶಲ್ಯ ದಿನವೆಂದು ಘೋಷಿಸಿದ ಹಿನ್ನೆಲೆಯಲ್ಲಿ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಜಾಗತಿಕ ಮನ್ನಣೆ ನೀಡುವ ಉದ್ದೇಶದಿಂದ ಜುಲೈ 15, 2015 ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು.
➤ ಭಾರತ ಮತ್ತು ಕೌಶಲ್ಯ ಭಾರತ ಮಿಷನ್: ಭಾರತದಲ್ಲಿ ಶೇ. 65 ಕ್ಕಿಂತ ಹೆಚ್ಚು ಜನಸಂಖ್ಯೆಯು 35 ವರ್ಷದೊಳಗಿನ ಯುವಕರಾಗಿದ್ದಾರೆ. ಪ್ರತಿ ವರ್ಷ ಸುಮಾರು 1.2 ಕೋಟಿ ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಈ ಜನಸಂಖ್ಯಾ ಲಾಭಾಂಶವನ್ನು (Demographic Dividend) ದೇಶದ ಆಸ್ತಿಯನ್ನಾಗಿ ಪರಿವರ್ತಿಸಲು ಭಾರತ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ:
-
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC): ಕೌಶಲ್ಯ ತರಬೇತಿಯನ್ನು ಉತ್ತೇಜಿಸಲು 2008 ರಲ್ಲಿ ಸ್ಥಾಪಿಸಲಾಯಿತು.
-
ಕೌಶಲ್ಯ ಅಭಿವೃದ್ಧಿ ಸಚಿವಾಲಯ (MSDE): ಕೌಶಲ್ಯಕ್ಕಾಗಿಯೇ ಪ್ರತ್ಯೇಕ ಸಚಿವಾಲಯವನ್ನು 2014 ರಲ್ಲಿ ರಚಿಸಲಾಯಿತು.
-
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY): ಯುವಕರಿಗೆ ಉದ್ಯೋಗಾಧಾರಿತ ಅಲ್ಪಾವಧಿ ತರಬೇತಿ ನೀಡುವ ಪ್ರಮುಖ ಯೋಜನೆ.
-
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020: ಶಾಲಾ ಮತ್ತು ಉನ್ನತ ಶಿಕ್ಷಣ ಹಂತದಲ್ಲೇ ವೃತ್ತಿಪರ ಶಿಕ್ಷಣವನ್ನು (Vocational Education) ಸಂಯೋಜಿಸುವ ಮೂಲಕ ಕೌಶಲ್ಯ ಕಲಿಕೆಯನ್ನು ಕಡ್ಡಾಯಗೊಳಿಸಿದೆ.