➤ 2026 ರ ಜಾಗತಿಕ ಘೋಷವಾಕ್ಯ (Theme & Slogan)
- ಮುಖ್ಯ ಥೀಮ್ (Theme): "ಕಳಂಕದಿಂದ ಸಾಮರ್ಥ್ಯದತ್ತ" (From Stigma to Strength)
- ಘೋಷವಾಕ್ಯ (Slogan): "ಹಲವು ಬಣ್ಣಗಳು, ಒಂದೇ ಧ್ವನಿ" (Many Shades, One Voice)
➤ ತೊನ್ನು ಯಾವುದೇ ವಯಸ್ಸು, ಲಿಂಗ ಅಥವಾ ಜನಾಂಗದವರಿಗೂ ಬರಬಹುದು. ಮುಖ್ಯವಾಗಿ ಇದು ಸಾಂಕ್ರಾಮಿಕ ರೋಗವಲ್ಲ (Not Contagious). ಅಂದರೆ ಇದು ಸ್ಪರ್ಶದಿಂದ ಅಥವಾ ಜೊತೆಯಾಗಿ ಕೂತು ಉಣ್ಣುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
➤ ಪ್ರಮುಖ ಕಾರಣಗಳು:
- ಆಟೋಇಮ್ಯೂನ್ ಪ್ರತಿಕ್ರಿಯೆ (Autoimmune Response): ದೇಹದ ರೋಗನಿರೋಧಕ ಶಕ್ತಿಯೇ ಸ್ವಂತ ಜೀವಕೋಶಗಳ ಮೇಲೆ ದಾಳಿ ಮಾಡುವುದು.
- ಆನುವಂಶಿಕ ಅಂಶಗಳು (Genetic Factors): ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಬರುವ ಸಾಧ್ಯತೆ.
- ಮಾನಸಿಕ ಒತ್ತಡ (Emotional Stress): ಅತಿಯಾದ ತಲ್ಲಣ ಮತ್ತು ಒತ್ತಡ ಕೂಡ ಇದಕ್ಕೆ ಕಾರಣವಾಗಬಹುದು.
➤ ಸಾಂಪ್ರದಾಯಿಕ ಆಯುರ್ವೇದ ಮೂಲಿಕೆಗಳು:
- ಬಾಕುಚಿ (Bakuchi): ಶ್ವಿತ್ರದ ಚಿಕಿತ್ಸೆಯಲ್ಲಿ ಅತ್ಯಂತ ಪ್ರಸಿದ್ಧ ಮೂಲಿಕೆ.
- ಬೇವು (Neem): ಚರ್ಮದ ಕಾಯಿಲೆಗಳನ್ನು ನಿವಾರಿಸಲು ಉತ್ತಮ ರೋಗನಿರೋಧಕ.
- ಅರಿಶಿನ (Turmeric): ಇದರಲ್ಲಿರುವ ಕರ್ಕ್ಯುಮಿನ್ ಅಂಶವು ಚರ್ಮದ ಕಾಂತಿಯನ್ನು ಮರುಕಳಿಸಲು ಸಹಕಾರಿ.
- ಮಂಜಿಷ್ಠಾ (Manjistha) ಮತ್ತು ಅಲೋವೆರಾ (ಲೋಳೆಸರ)
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ