➤ ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಜಾನಪದ ಜೀವನವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತಿಕವಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನ (World Tourism Day) ವನ್ನು ಆಚರಿಸಲಾಗುತ್ತದೆ.
➤ ವಿಶ್ವ ಪ್ರವಾಸೋದ್ಯಮ ದಿನ 2026: ಧೈಯವಾಕ್ಯ (Theme): "ಡಿಜಿಟಲ್ ಅಜೆಂಡಾ ಮತ್ತು ಕೃತಕ ಬುದ್ಧಿಮತ್ತೆ ಪ್ರವಾಸೋದ್ಯಮದ ಪುನರುಜೀವನಕ್ಕೆ" (Digital Agenda and Artificial Intelligence to Redesign Tourism)
➤ ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದ ಪ್ರಮುಖ ಕ್ರಮಗಳು: ಭಾರತ ಸರ್ಕಾರವು ದೇಶದ ಪ್ರವಾಸಿ ತಾಣಗಳ ಸುಧಾರಣೆ ಹಾಗೂ ಪ್ರವಾಸಿಗರ ಆಕರ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ:   
1. ಪ್ರಸಾದ್ ಯೋಜನೆ (PRASHAD Scheme): Pilgrimage Rejuvenation And Spiritual Heritage Augmentation Drive   
- ಉದ್ದೇಶ: ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು.   
2. ಸ್ವದೇಶಿ ದರ್ಶನ್ 2.0 (Swadesh Darshan 2.0):   
- ತೀಮ್ ಆಧಾರಿತ (Thematic Circuits) ಪ್ರವಾಸಿ ಸರ್ಕ್ಯೂಟ್‌ಗಳ ಅಭಿವೃದ್ಧಿಪಡಿಸುವ ಯೋಜನೆಯಾಗಿದ್ದು, ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತದೆ.   
- ಇದರ ಅಡಿಯಲ್ಲಿ CBDD (Challenge-Based Destination Development) ಉಪ-ಯೋಜನೆಯನ್ನು ಜಾರಿಗೆ ತರಲಾಗಿದೆ.   
3. ದೇಖೋ ಅಪ್ನಾ ದೇಶ್ (Dekho Apna Desh):
- ಭಾರತೀಯ ನಾಗರಿಕರು ವಿದೇಶಗಳಿಗೆ ತೆರಳುವ ಮೊದಲು ತಮ್ಮ ಸ್ವದೇಶದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವಂತೆ ಉತ್ತೇಜಿಸುವ ಅಭಿಯಾನ.   
4. ಡಿಜಿಟಲ್ ತಂತ್ರಜ್ಞಾನ ಮತ್ತು ಇ-ವೀಸಾ (e-Visa):   
- ಪ್ರವಾಸಿಗರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ Incredible India Digital Platform, NIDHI+ ಹಾಗೂ ಡಿಜಿಟಲ್ ಮಾರ್ಗದರ್ಶಿಗಳನ್ನು ತರಲಾಗಿದೆ.   
- 170ಕ್ಕೂ ಹೆಚ್ಚು ದೇಶಗಳ ಪ್ರಜೆಗಳಿಗೆ ಇ-ವೀಸಾ (e-Visa) ಸೌಲಭ್ಯ ಒದಗಿಸಲಾಗಿದೆ.
- ಗೂಗಲ್ ಇಂಡಿಯಾ (Google India) ಜೊತೆಗೂಡಿ AI ತಂತ್ರಜ್ಞಾನದ ಮೂಲಕ ಭಾರತದ ಪ್ರವಾಸೋದ್ಯಮಕ್ಕೆ ಪ್ರಚಾರ ನೀಡಲಾಗುತ್ತಿದೆ.   
➤ ವಿಶ್ವದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುವ ವಿಶ್ವ ಪ್ರವಾಸೋದ್ಯಮ ದಿನವನ್ನು ಜಾಗತಿಕವಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಮೌಲ್ಯಗಳ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯು (UN Tourism) ಮೊಟ್ಟಮೊದಲ ಬಾರಿಗೆ 1980 ರಲ್ಲಿ ಜಾರಿಗೆ ತಂದಿತು.
➤ ಭಾರತದಲ್ಲಿ ಪ್ರವಾಸೋದ್ಯಮದ ಆರ್ಥಿಕ ಮಹತ್ವ ಮತ್ತು ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.