➤ ಮಾನವೀಯತೆಯ ಸೇವೆ, ಸಂಕಷ್ಟದಲ್ಲಿರುವವರಿಗೆ ನೆರವು ಮತ್ತು ಶಾಂತಿಯ ಸಂದೇಶವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಮೇ 8 ರಂದು ವಿಶ್ವದಾದ್ಯಂತ 'ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ'ವನ್ನು (World Red Cross and Red Crescent Day) ಆಚರಿಸಲಾಗುತ್ತದೆ. ಈ ದಿನವು ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ (ICRC) ಸಂಸ್ಥಾಪಕರಾದ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವೂ ಆಗಿದೆ.
2026 ರ ಅಧಿಕೃತ ಥೀಮ್ (Theme): “ಮಾನವೀಯತೆಯನ್ನು ಜೀವಂತವಾಗಿರಿಸುವುದು” (Keeping Humanity Alive)
➤ ಹೆನ್ರಿ ಡ್ಯೂನಾಂಟ್ ಅವರ ಕೊಡುಗೆ: 1859ರಲ್ಲಿ ನಡೆದ 'ಸೊಲ್ಫೆರಿನೊ ಕದನ'ದ ಭೀಕರತೆಯನ್ನು ಕಂಡ ಹೆನ್ರಿ ಡ್ಯೂನಾಂಟ್, ಗಾಯಗೊಂಡ ಸೈನಿಕರಿಗೆ ನೆರವಾಗಲು ಒಂದು ತಟಸ್ಥ ಸಂಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇದರ ಫಲವಾಗಿ 1863ರಲ್ಲಿ ಜಿನೀವಾದಲ್ಲಿ 'ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ' (ICRC) ಸ್ಥಾಪನೆಯಾಯಿತು. ಮೊದಲ ಬಾರಿಗೆ 1948ರಲ್ಲಿ ಅಧಿಕೃತವಾಗಿ 'ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ'ವನ್ನು ಆಚರಿಸಲಾಯಿತು. ನಂತರ 1984ರಲ್ಲಿ ಇದನ್ನು 'ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ' ಎಂದು ಮರುನಾಮಕರಣ ಮಾಡಲಾಯಿತು.
➤ ಯುದ್ಧ, ನೈಸರ್ಗಿಕ ವಿಕೋಪ ಹಾಗೂ ಸಾಂಕ್ರಾಮಿಕ ರೋಗಗಳ ಸಂಕಷ್ಟದ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಸ್ವಯಂಸೇವಕರನ್ನು ಗೌರವಿಸುವುದು, ರಕ್ತದಾನ ಮತ್ತು ಪ್ರಥಮ ಚಿಕಿತ್ಸೆಯಂತಹ ಜೀವ ಉಳಿಸುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜಗತ್ತಿನಾದ್ಯಂತ ಹಿಂಸೆಯನ್ನು ತಡೆದು ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶವನ್ನು ಈ ದಿನವು ಹೊಂದಿದೆ.
➤ ರೆಡ್ ಕ್ರಾಸ್ ಸಂಸ್ಥೆಯ 7 ಮೂಲಭೂತ ತತ್ವಗಳು:
1.ಮಾನವೀಯತೆ (Humanity)
2.ನಿಷ್ಪಕ್ಷಪಾತ (Impartiality)
3.ತಟಸ್ಥತೆ (Neutrality)
4.ಸ್ವತಂತ್ರತೆ (Independence)
5.ಸ್ವಯಂಪ್ರೇರಿತ ಸೇವೆ (Voluntary Service)
6.ಏಕತೆ (Unity)
7.ಸಾರ್ವತ್ರಿಕತೆ (Universality)
➤ ರೆಡ್ ಕ್ರಾಸ್ ಸಂಸ್ಥೆಯು ಇದುವರೆಗೆ ಮೂರು ಬಾರಿ (1917, 1944, 1963) ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.