➤ ಪ್ರತಿ ವರ್ಷ ಅಕ್ಟೋಬರ್ 9 ರಂದು ಜಾಗತಿಕವಾಗಿ ವಿಶ್ವ ಅಂಚೆ ದಿನವನ್ನು (World Post Day) ಆಚರಿಸಲಾಗುತ್ತದೆ. ಆಧುನಿಕ ಡಿಜಿಟಲ್ ಯುಗದಲ್ಲೂ ಜನರ ಸಂಪರ್ಕ, ಆರ್ಥಿಕ ಸೇವೆಗಳು ಮತ್ತು ಜಾಗತಿಕ ವಾಣಿಜ್ಯಕ್ಕೆ ಅಂಚೆ ಕ್ಷೇತ್ರ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಗಿದೆ.
➤ ವಿಶ್ವ ಅಂಚೆ ದಿನ 2026 ರ ಥೀಮ್ (ವಿಷಯ): "One postal network, infinite possibilities" ಒಂದು ಅಂಚೆ ಜಾಲ, ಅನಂತ ಸಾಧ್ಯತೆಗಳು
➤ ಇತಿಹಾಸ
- ವರ್ಷ 1874: 1874 ರ ಅಕ್ಟೋಬರ್ 9 ರಂದು ಸ್ವಿಟ್ಜರ್ಲ್ಯಾಂಡ್‌ನ ಬರ್ನ್ ನಗರದಲ್ಲಿ 'ಬರ್ನ್ ಒಪ್ಪಂದ' (Treaty of Bern) ಗೆ ಸಹಿ ಹಾಕುವ ಮೂಲಕ ಜನರಲ್ ಪೋಸ್ಟಲ್ ಯೂನಿಯನ್ ಅನ್ನು ಸ್ಥಾಪಿಸಲಾಯಿತು.
- ಹೆಸರು ಬದಲಾವಣೆ: 1878 ರಲ್ಲಿ ಇದರ ಸದಸ್ಯ ದೇಶಗಳ ಸಂಖ್ಯೆ ಹೆಚ್ಚಾದ ಕಾರಣ, ಇದನ್ನು ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಎಂದು ಮರುನಾಮಕರಣ ಮಾಡಲಾಯಿತು.
- ಘೋಷಣೆ: 1969 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ UPU ಕಾಂಗ್ರೆಸ್ ಸಮ್ಮೇಳನದಲ್ಲಿ ಅಕ್ಟೋಬರ್ 9 ಅನ್ನು ಅಧಿಕೃತವಾಗಿ 'ವಿಶ್ವ ಅಂಚೆ ದಿನ' ಎಂದು ಘೋಷಿಸಲಾಯಿತು. 1984 ರ ಹ್ಯಾಂಬರ್ಗ್ ಸಮ್ಮೇಳನದಲ್ಲಿ ಇದಕ್ಕೆ ಅಧಿಕೃತ ಮುದ್ರೆ ಬಿತ್ತು.
➤ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU):

ವಿವರಗಳು ಪ್ರಮುಖ ಮಾಹಿತಿ
ಸ್ಥಾಪನೆ 9 ಅಕ್ಟೋಬರ್ 1874
ಕೇಂದ್ರ ಕಚೇರಿ (HQ) ಬರ್ನ್, ಸ್ವಿಟ್ಜರ್ಲ್ಯಾಂಡ್ (Bern, Switzerland)
ಸದಸ್ಯತ್ವ 192 ದೇಶಗಳು
ವಿಶ್ವಸಂಸ್ಥೆಯ ಏಜೆನ್ಸಿ 1 ಜುಲೈ 1948 ರಂದು ವಿಶ್ವಸಂಸ್ಥೆಯ (UN) ವಿಶೇಷ ಸಂಸ್ಥೆಯಾಯಿತು
ಸ್ಥಾನಮಾನ ಅಂತರರಾಷ್ಟ್ರೀಯ ಟೆಲಿಕಮ್ಯುನಿಕೇಷನ್ ಯೂನಿಯನ್ (ITU) ನಂತರ ವಿಶ್ವದ 2ನೇ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆ

➤ UPU ಮತ್ತು ಭಾರತ (India and UPU):
- ಸದಸ್ಯತ್ವ: ಭಾರತವು 1 ಜುಲೈ 1876 ರಂದು UPU ನ ಅಧಿಕೃತ ಸದಸ್ಯ ರಾಷ್ಟ್ರವಾಯಿತು.
- ಇಂಡಿಯಾ ಪೋಸ್ಟ್ (India Post): ಭಾರತೀಯ ಅಂಚೆ ಇಲಾಖೆಯು ವಿಶ್ವದಲ್ಲೇ ಅತಿ ದೊಡ್ಡ ಅಂಚೆ ಜಾಲವನ್ನು ಹೊಂದಿದ್ದು, ಗಡಿಭಾಗ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆ (Financial Inclusion) ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB): ಅಂಚೆ ಕಛೇರಿಗಳ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲು ಭಾರತ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.