➤ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಗುರುವಾರದಂದು ವಿಶ್ವ ಕಡಲ ದಿನವನ್ನು (World Maritime Day) ಜಾಗತಿಕವಾಗಿ ಆಚರಿಸಲಾಗುತ್ತದೆ. 2026ರ ಸೆಪ್ಟೆಂಬರ್ 24 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಕಡಲ ದಿನ 2026–2027ರ ಥೀಮ್ : ನೀತಿಯಿಂದ ಕಾರ್ಯರೂಪಕ್ಕೆ: ಸಾಗರ ಶ್ರೇಷ್ಠತೆಯನ್ನು ಹೆಚ್ಚಿಸುವುದು. "From Policy to Practice: Powering Maritime Excellence"
➤ IMO ಇತಿಹಾಸದಲ್ಲೇ ಮೊದಲ ಬಾರಿಗೆ 2 ವರ್ಷಗಳ ಅವಧಿಗೆ (Biennium) ಒಂದೇ ಥೀಮ್ ಅನ್ನು ನಿಗದಿಪಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ರೂಪಿಸಲಾದ ನಿಯಮಗಳು ಮತ್ತು ನೀತಿಗಳು ಕೇವಲ ಕಾಗದದ ಮೇಲೆ ಉಳಿಯದೆ, ಪ್ರತಿಯೊಂದು ದೇಶದ ಸ್ಥಳೀಯ ಶಾಸನ ಮತ್ತು ದೈನಂದಿನ ನೌಕಾಯಾನ ಕಾರ್ಯಾಚರಣೆಗಳಲ್ಲಿ ಜಾರಿಗೆ ಬರಬೇಕು ಎಂಬುದನ್ನು ಇದು ಎತ್ತಿಹಿಡಿಯುತ್ತದೆ.
➤ 2026-27ರ ಥೀಮ್‌ನ ಮುಖ್ಯ ಉದ್ದೇಶಗಳು:
- ತಾಂತ್ರಿಕ ನೆರವು ಮತ್ತು ತರಬೇತಿ (Technical Assistance & Training): ಸದಸ್ಯ ರಾಷ್ಟ್ರಗಳಿಗೆ IMO ನಿಂದ ಅಗತ್ಯ ತಾಂತ್ರಿಕ ಬೆಂಬಲ ನೀಡಿಕೆ.
- ಸಾಗರ ಸುರಕ್ಷತೆ ಮತ್ತು ಭದ್ರತೆ: ಜಾಗತಿಕ ಹಡಗು ರವಾನೆ ವ್ಯವಸ್ಥೆಯಲ್ಲಿ ಸುರಕ್ಷತೆ ಹಾಗೂ ಹವಾಮಾನ ಬದಲಾವಣೆಗೆ ಅನುಗುಣವಾದ ತಂತ್ರಜ್ಞಾನ ಅಳವಡಿಕೆ.
- ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ: IMO ಸದಸ್ಯ ರಾಷ್ಟ್ರಗಳ ತಪಾಸಣೆ ಯೋಜನೆ (IMSAS) ಗುರುತಿಸಿರುವ ಸವಾಲುಗಳನ್ನು ಪರಿಹರಿಸುವುದು
➤ ಜಾಗತಿಕ ವ್ಯಾಪಾರದಲ್ಲಿ ಸಾಗರ ಕ್ಷೇತ್ರದ ಪಾತ್ರ
- 80% ಗೂ ಹೆಚ್ಚು ಜಾಗತಿಕ ವ್ಯಾಪಾರ: ಜಗತ್ತಿನ ಒಟ್ಟು ಅಂತರರಾಷ್ಟ್ರೀಯ ವ್ಯಾಪಾರದ ಶೇಕಡಾ 80 ಕ್ಕಿಂತ ಹೆಚ್ಚು ಭಾಗವು ಸಮುದ್ರ ಮಾರ್ಗಗಳ (Seaways) ಮೂಲಕವೇ ನಡೆಯುತ್ತದೆ.
- ಆರ್ಥಿಕತೆ ಮತ್ತು ಭದ್ರತೆ: ಆಹಾರ, ಇಂಧನ ಮತ್ತು ರಸಗೊಬ್ಬರಗಳಂತಹ ಅತ್ಯಗತ್ಯ ಸರಕುಗಳ ಪೂರೈಕೆಯಲ್ಲಿ ಹಡಗು ಸಾರಿಗೆಯು ಅಗ್ಗದ ಮತ್ತು ಸುರಕ್ಷಿತ ಮಾರ್ಗವಾಗಿದೆ.
➤ ಭಾರತ ಮತ್ತು ಸಾಗರ ವಲಯ:
- ರಾಷ್ಟ್ರೀಯ ಸಾಗರ ದಿನ (National Maritime Day): ಭಾರತದಲ್ಲಿ ಪ್ರತಿವರ್ಷ ಏಪ್ರಿಲ್ 5 ರಂದು 'ರಾಷ್ಟ್ರೀಯ ಸಾಗರ ದಿನ' ಆಚರಿಸಲಾಗುತ್ತದೆ (1919 ಏಪ್ರಿಲ್ 5 ರಂದು 'SS ಲಾಯಲ್ಟಿ' ಎಂಬ ಮೊದಲ ಭಾರತೀಯ ಹಡಗು ಮುಂಬೈನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ ನೆನಪಿಗಾಗಿ).
- ಮಾರಿಟೈಮ್ ಅಮೃತ್ ಕಾಲ್ ವಿಶನ್ 2047 (Maritime Amrit Kaal Vision 2047): ಭಾರತೀಯ ಬಂದರುಗಳ ಆಧುನೀಕರಣ ಮತ್ತು ಸಾಗರ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಬೃಹತ್ ಯೋಜನೆ.
- ಸಾಗರಮಾಲಾ ಯೋಜನೆ (Sagarmala Project): ಬಂದರು ಆಧಾರಿತ ಅಭಿವೃದ್ಧಿ (Port-led Development) ಮತ್ತು ಕರಾವಳಿ ತೀರದ ಮೂಲಸೌಕರ್ಯ ಹೆಚ್ಚಿಸುವ ಯೋಜನೆ.
ಗುರುವಾರ, 24 ಸೆಪ್ಟೆಂಬರ್ 2026
10:23 ಪೂರ್ವಾಹ್ನ
Daily PDF
ವಿಶ್ವ ಕಡಲ ದಿನ 2026
Authored by:
Heena Sheregar