➤ ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ಜಾಗತಿಕವಾಗಿ 'ವಿಶ್ವ ಶ್ವಾಸಕೋಶ ದಿನ'ವನ್ನು ಆಚರಿಸಲಾಗುತ್ತದೆ. ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ವಾಯು ಮಾಲಿನ್ಯ (Air Pollution), ಧೂಮಪಾನ, ಮತ್ತು ಸಾಂಕ್ರಾಮಿಕ ರೋಗಗಳಿಂದಾಗಿ ಶ್ವಾಸಕೋಶದ ಕಾಯಿಲೆಗಳು ಜಗತ್ತಿನಾದ್ಯಂತ ತೀವ್ರವಾಗಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, FIRS ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಶ್ವಾಸಕೋಶದ ಆರೈಕೆಯ ಮಹತ್ವವನ್ನು ಸಾರಲು ಈ ದಿನವನ್ನು ಆಚರಣೆಗೆ ತಂದವು.

➤ 2026 ರ ಥೀಮ್ ಮತ್ತು 4 ಪ್ರಮುಖ ಆದ್ಯತೆಗಳು: 
➤ 2026 ರ ಥೀಮ್ "A Lifetime of Lung Health" (ಜೀವಿತಾವಧಿಯ ಶ್ವಾಸಕೋಶದ ಆರೋಗ್ಯ)

  1. ಆರಂಭಿಕ ಬೆಳವಣಿಗೆ (Lung Development): ಗರ್ಭಾವಸ್ಥೆ ಮತ್ತು ಬಾಲ್ಯದ ಆರಂಭಿಕ ದಿನಗಳಲ್ಲಿ ಶ್ವಾಸಕೋಶದ ಸರಿಯಾದ ವಿಕಸನ.
  2. ಸಂಪೂರ್ಣ ಬೆಳವಣಿಗೆ (Lung Growth): ಕೌಮಾರ್ಯ ಮತ್ತು ಯೌವನದಲ್ಲಿ ಶ್ವಾಸಕೋಶದ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೇರಿಸುವುದು.
  3. ಆರೋಗ್ಯ ರಕ್ಷಣೆ (Preserving Lung Health): ವಯಸ್ಕರಲ್ಲಿ ಉಸಿರಾಟದ ಅಂಗಗಳ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮತ್ತು ಧೂಮಪಾನ ಹಾಗೂ ಮಾಲಿನ್ಯದಿಂದ ದೂರವಿರುವುದು.
  4. ನಿರಂತರ ಆರೋಗ್ಯ (Healthy Lungs for Life): ವೃದ್ಧಾಪ್ಯದಲ್ಲೂ ಉತ್ತಮ ಜೀವನಶೈಲಿಯ ಮೂಲಕ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವುದು.

➤ ಶ್ವಾಸಕೋಶ ಸಂಬಂಧಿತ ಮುಖ್ಯ ರೋಗಗಳು:

  • ಆಸ್ತಮಾ (Asthma): ಉಸಿರಾಟದ ನಾಳಗಳ ಉರಿಯೂತ ಮತ್ತು ಕಿರಿದಾಗುವಿಕೆಯಿಂದ ಉಂಟಾಗುವ ಸಮಸ್ಯೆ.
  • COPD (Chronic Obstructive Pulmonary Disease): ಧೀರ್ಘಕಾಲದ ಶ್ವಾಸಕೋಶದ ತಡೆಗೋಡೆ ರೋಗ, ಇದು ಹೆಚ್ಚಾಗಿ ಧೂಮಪಾನ ಮತ್ತು ಮಾಲಿನ್ಯದಿಂದ ಬರುತ್ತದೆ.
  • ಕ್ಷಯರೋಗ (Tuberculosis - TB): Mycobacterium tuberculosis ಬ್ಯಾಕ್ಟೀರಿಯಾದಿಂದ ಬರುವ ಸಾಂಕ್ರಾಮಿಕ ರೋಗ.
  • ನ್ಯುಮೋನಿಯಾ (Pneumonia): ಶ್ವಾಸಕೋಶದ ಗಾಳಿಚೀಲಗಳಲ್ಲಿ (Alveoli) ನೀರು ಅಥವಾ ಕೀವು ತುಂಬಿಕೊಳ್ಳುವ ಸೋಂಕು.
  • ಶ್ವಾಸಕೋಶದ ಕ್ಯಾನ್ಸರ್ (Lung Cancer): ಶ್ವಾಸಕೋಶದ ಕೋಶಗಳ ಅಸಹಜ ಬೆಳವಣಿಗೆ.