Job Description: ➤ ಪ್ರತಿ ವರ್ಷ ಸೆಪ್ಟೆಂಬರ್ 2 ರಂದು ಜಗತ್ತಿನಾದ್ಯಂತ ‘ವಿಶ್ವ ತೆಂಗಿನಕಾಯಿ ದಿನ’ (World Coconut Day) ವನ್ನು ಆಚರಿಸಲಾಗುತ್ತದೆ. ಕೃಷಿ, ಗ್ರಾಮೀಣ ಆರ್ಥಿಕತೆ, ಆಹಾರ ಭದ್ರತೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತೆಂಗಿನಮರದ ಕೊಡುಗೆ ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.➤ ವಿಶ್ವ ತೆಂಗಿನಕಾಯಿ ದಿನ 2026 ರ ಥೀಮ್ (Theme): ಚಕ್ರಿಯ ಆರ್ಥಿಕತೆಗಾಗಿ ತೆಂಗು: ಗರಿಷ್ಠ ಮೌಲ್ಯವರ್ಧನೆಗಾಗಿ ಸಹಭಾಗಿತ್ವ ನಿರ್ಮಾಣ(Coconut for a Circular Economy: Building Partnership for Maximum Value)➤ ವಿಶ್ವ ತೆಂಗಿನಕಾಯಿ ದಿನವನ್ನು ಮೊದಲ ಬಾರಿಗೆ 2009 ರಲ್ಲಿ ಆಚರಿಸಲಾಯಿತು.1969 ರ ಸೆಪ್ಟೆಂಬರ್ 2 ರಂದು 'ಏಷ್ಯನ್ ಅಂಡ್ ಪೆಸಿಫಿಕ್ ಕೊಕೊನಟ್ ಕಮ್ಯುನಿಟಿ' (APCC) ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ ಸ್ಥಾಪನೆಯ ಸವಿನೆನಪಿಗಾಗಿ ಸೆಪ್ಟೆಂಬರ್ 2 ಅನ್ನು ವಿಶ್ವ ತೆಂಗಿನಕಾಯಿ ದಿನವೆಂದು ಆಯ್ಕೆ ಮಾಡಲಾಯಿತು. ಪ್ರಸ್ತುತ APCC ಅನ್ನು ಇಂಟರ್ನ್ಯಾಷನಲ್ ಕೊಕೊನಟ್ ಕಮ್ಯುನಿಟಿ (ICC) ಎಂದು ಕರೆಯಲಾಗುತ್ತದೆ. ಇದರ ಪ್ರಧಾನ ಕಚೇರಿ ಜಕಾರ್ತಾ (ಇಂಡೋನೇಷ್ಯಾ) ದಲ್ಲಿದೆ.➤ ಭಾರತದಲ್ಲಿ ಪ್ರಥಮ ಸ್ಥಾನ: ಭಾರತದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ಮುಂಚೂಣಿಯಲ್ಲಿವೆ. (ಕರ್ನಾಟಕವು ಉತ್ಪಾದನೆ ಮತ್ತು ವಿಸ್ತೀರ್ಣದಲ್ಲಿ ಪ್ರಮುಖ ಸ್ಥಾನದಲ್ಲಿದೆ).➤ ಕೊಕೊನಟ್ ಡೆವಲಪ್‌ಮೆಂಟ್ ಬೋರ್ಡ್ (CDB): ಭಾರತ ಸರ್ಕಾರವು ತೆಂಗಿನ ಕೃಷಿ ಪ್ರೋತ್ಸಾಹಿಸಲು 1981 ರಲ್ಲಿ ತೆಂಗು ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿತು. ಇದರ ಪ್ರಧಾನ ಕಚೇರಿ ಕೊಚ್ಚಿ (ಕೇರಳ) ದಲ್ಲಿದೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ