➤ ಬೆಂಗಳೂರು: ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಐತಿಹಾಸಿಕ ಬದಲಾವಣೆಯೊಂದು ಕಂಡುಬಂದಿದೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (Special Summary Revision) ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ಬೆನ್ನಲ್ಲೇ ಈ ಕುರಿತ ತಾತ್ಕಾಲಿಕ ಅಂಕಿ-ಅಂಶಗಳು ಹೊರಬಿದ್ದಿದೆ.
➤ ಮತದಾರರ ವಿವರವಾದ ಅಂಕಿ-ಅಂಶಗಳು (ಅಕ್ಟೋಬರ್ 16ರ ತಾತ್ಕಾಲಿಕ ಮಾಹಿತಿ): ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಪ್ರಸ್ತುತ ರಾಜ್ಯದ ಒಟ್ಟು ಮತದಾರರ ವಿವರ ಹೀಗಿದೆ:
- ಮಹಿಳಾ ಮತದಾರರು: 2.28 ಕೋಟಿ (ಸುಮಾರು)
- ಪುರುಷ ಮತದಾರರು: 2.25 ಕೋಟಿ (ಸುಮಾರು)
- ತೃತೀಯ ಲಿಂಗಿ ಮತದಾರರು: 2,860
- ಒಟ್ಟು ಮತದಾರರು: ಸುಮಾರು 4.53 ಕೋಟಿ
- ಮಹಿಳೆಯರ ಹೆಚ್ಚಳ: ಪುರುಷರಿಗಿಂತ ಸುಮಾರು 3.7 ಲಕ್ಷ ಹೆಚ್ಚು ಮಹಿಳಾ ಮತದಾರರಿದ್ದಾರೆ.
➤ ಈ ಬದಲಾವಣೆಗೆ ಕಾರಣ ತಜ್ಞರ ಅಭಿಪ್ರಾಯ: ಜನಸಂಖ್ಯಾ ಸಂಶೋಧನಾ ಕೇಂದ್ರದ ಪ್ರೊಫೆಸರ್ ಸಿ.ಎಂ. ಲಕ್ಷ್ಮಣ್ ಅವರ ಪ್ರಕಾರ, ಇತ್ತೀಚಿನ ಜನಗಣತಿಗಳ ಡೇಟಾ ಗಮನಿಸಿದರೆ ವಯಸ್ಕ ಪುರುಷರು ಮತ್ತು ಮಹಿಳೆಯರ ಅನುಪಾತ ಬಹುತೇಕ ಸಮನಾಗಿದ್ದರೂ, ಪುರುಷರ ಸಂಖ್ಯೆಯೇ ತುಸು ಹೆಚ್ಚಿರುತ್ತದೆ. ಆದರೆ ಮತದಾರರ ಪಟ್ಟಿಯಲ್ಲಿ ಮಹಿಳೆಯರು ಮುನ್ನಡೆ ಸಾಧಿಸಿರುವುದು ಕುತೂಹಲ ಮೂಡಿಸಿದೆ.
- ಜಿಲ್ಲಾವಾರು ಮತ್ತು ಮತಗಟ್ಟೆ ಮಟ್ಟದ ಸಂಪೂರ್ಣ ಅಂಕಿ-ಅಂಶಗಳು ಲಭ್ಯವಾದ ಬಳಿಕವಷ್ಟೇ ಈ ಬದಲಾವಣೆಗೆ ನಿಖರವಾದ ಕಾರಣ ತಿಳಿಯಲಿದೆ.
- ಮತದಾರರ ಜಾಗೃತಿ ಕಾರ್ಯಕ್ರಮಗಳು (SVEEP) ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಮತದಾರರ ಪಟ್ಟಿ: ಇತಿಹಾಸದಲ್ಲೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು!
Published by Akshata Halli
2 hours ago