➤ ಭಾರತ ಮತ್ತು ರಷ್ಯಾ ದೇಶಗಳ ನಡುವಿನ ದ್ವಿಪಕ್ಷೀಯ ಹಾಗೂ ಪ್ರಮುಖ ಮಿಲಿಟರಿ ಸಹಕಾರದ ಸಂಕೇತವಾಗಿರುವ 'ಇಂದ್ರ-2026' (INDRA-2026) ಜಂಟಿ ಸಮರಾಭ್ಯಾಸಕ್ಕೆ ರಷ್ಯಾದ ಜಲಪ್ರದೇಶದಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ.
➤ ಸಮರಾಭ್ಯಾಸದ ಪ್ರಮುಖ ಮುಖ್ಯಾಂಶಗಳು:   
1. ಸ್ಥಳ ಮತ್ತು ಅವಧಿ: ಈ ಬಾರಿಯ ಜಂಟಿ ನೌಕಾ ಸಮರಾಭ್ಯಾಸವು ರಷ್ಯಾದ ವ್ಲಾಡಿವೋಸ್ಟಾಕ್ (Vladivostok) ಬಂದರಿನಲ್ಲಿ ಅಕ್ಟೋಬರ್ 13 ರಿಂದ 18, 2026 ರವರೆಗೆ ಏರ್ಪಡಿಸಲಾಗಿದೆ.   
2. ಭಾರತೀಯ ನೌಕಾಪಡೆಯ ಭಾಗಿತ್ವ: ಭಾರತದ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲ್ಪಟ್ಟ ಅತ್ಯಾಧುನಿಕ ಗೈಡೆಡ್-ಮಿಸೈಲ್ ಸ್ಟೆಲ್ತ್ ಫ್ರಿಗೇಟ್ (Stealth Frigate) ಯುದ್ಧನೌಕೆ 'ಐಎನ್‌ಎಸ್ ಸಹ್ಯಾದ್ರಿ' (INS Sahyadri) ಈ ಸಮರಾಭ್ಯಾಸದಲ್ಲಿ ಭಾರತದ ಪರವಾಗಿ ನಿರತವಾಗಿದೆ.   
3. ರಷ್ಯಾ ನೌಕಾಪಡೆ: ರಷ್ಯಾದ ನೌಕಾಪಡೆಯ 'ಅಲ್ದಾರ್‌ಟೈಡೆನ್‌ಝಾಪೋವ್' ಯುದ್ಧನೌಕೆ ಹಾಗೂ ರಷ್ಯಾದ ಪೆಸಿಫಿಕ್ ಫೀಟ್‌ನ ಉನ್ನತ ಅಧಿಕಾರಿಗಳು ಈ ಯೋಜನಾ ಸಭೆ ಮತ್ತು ತರಬೇತಿಗಳಲ್ಲಿ ಪಾಲ್ಗೊಂಡಿದ್ದಾರೆ.   
4. ಸಮಗ್ರ ಮಿಲಿಟರಿ ತರಬೇತಿ: ಕೇವಲ ನೌಕಾಪಡೆಯಷ್ಟೇ ಅಲ್ಲದೆ, ಉಭಯ ದೇಶಗಳ ಭೂಸೇನೆ ಮತ್ತು ವಾಯುಪಡೆಯ ಪ್ರಮುಖ ತುಕಡಿಗಳು, ಯುದ್ಧವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ರಷ್ಯಾದ ವಿವಿಧ ಪ್ರದೇಶಗಳಲ್ಲಿ ಸಮನ್ವಯತೆಯೊಂದಿಗೆ ಜಂಟಿ ಸಮರ ತಂತ್ರಗಳ ಅಭ್ಯಾಸ ನಡೆಸುತ್ತಿವೆ.   
➤ ಉದ್ದೇಶ ಮತ್ತು ಮಹತ್ವ:
- ಕಾರ್ಯಾಚರಣಾ ಸಮನ್ವಯತೆ (Interoperability): ಎರಡೂ ದೇಶಗಳ ನೌಕಾಪಡೆಗಳ ನಡುವೆ ಪರಸ್ಪರ ತಿಳುವಳಿಕೆ, ಸಮುದ್ರಯಾನ ಕಾರ್ಯವಿಧಾನಗಳು ಮತ್ತು ಸಂವಹನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
- ಮಹಾಸಾಗರ (MAHASAGAR) ದೃಷ್ಟಿಕೋನ: ಭಾರತದ ಮಹಾಸಾಗರ (Mutual and Holistic Advancement for Security and Growth Across Regions) ಪರಿಕಲ್ಪನೆಗೆ ಅನುಗುಣವಾಗಿ, ಹಿಂದೂ ಮಹಾಸಾಗರ ಮತ್ತು ಇತರೆ ಕಡಲ ಪ್ರದೇಶಗಳಲ್ಲಿ ಭದ್ರತೆ ಹಾಗೂ ಪ್ರಾದೇಶಿಕ ಬೆಳವಣಿಗೆಯನ್ನು ಇದು ಬೆಂಬಲಿಸುತ್ತದೆ.