* ಲಂಡನ್​ನ ಸೆಂಟರ್ ಕೋರ್ಟ್​ ಅಂಗಳದಲ್ಲಿ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್​ ಪಂದ್ಯದಲ್ಲಿ ಸರ್ಬಿಯಾದ ಟೆನಿಸ್ ದೈತ್ಯ ನೊವಾಕ್ ಜೊಕೊವಿಚ್​ರನ್ನು ಮಣಿಸಿದ ಸ್ಪೇನ್ ದೇಶದ ಯುವ ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಜ್ ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 
* ಕಳೆದ ಬಾರಿಯೂ ಇದೇ ಜೋಡಿ ನೊವಾಕ್ ಜೊಕೊವಿಚ್ ಮತ್ತು ಕಾರ್ಲೋಸ್ ಅಲ್ಕರಾಜ್ ವಿಂಬಲ್ಡನ್ ಫೈನಲ್​ಗೆ ಲಗ್ಗೆ ಇಟ್ಟಿದ್ದರು. 
* 21ರ ಹರೆಯದ ಹಾಲಿ ಚಾಂಪಿಯನ್ ಅಲ್ಕರಾಜ್ 6-2 6-2, 7-6, (7/4) ನೇರ ಸೆಟ್‌ಗಳಿಂದ 7 ಬಾರಿಯ ಚಾಂಪಿಯನ್ ಸರ್ಬಿಯಾದ ಅನುಭವಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
* ಚಾಂಪಿಯನ್ ಆದ ಅಲ್ಕಾರಾಜ್ ಅವರು 2700000 ಪೌಂಡ್ (ರೂ. 28.6 ಕೋಟಿ) ಗಳಿಸಿದರು. ಜೊಕೊವಿಕ್ £1400000 ಅಂದರೆ ಸರಿಸುಮಾರು 14 ಕೋಟಿ ರೂ.
* ವಿಂಬಲ್ಡನ್ 2024 ರ ಪುರುಷರ ಡಬಲ್ಸ್ ಫೈನಲ್ ನಲ್ಲಿ ಬ್ರಿಟನ್‌ನ ಹೆನ್ರಿ ಪ್ಯಾಟನ್ ಮತ್ತು ಫಿನ್ಲ ಲ್ಯಾಂಡ್ ಹ್ಯಾರಿ ಹೆಲಿಯೊವಾರಾ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಮತ್ತು ಜೋರ್ಡಾನ್ ಥಾಂಪ್ಸೊ ಅವರನ್ನು 6-7 (7), 7-6 (8), 7-6 (11-9) ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದರು.
* 2024ರ ಆಗಸ್ಟ್ 26-ಸೆಪ್ಟೆಂಬರ್ 8 ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಯುಎಸ್ ಓಪನ್ ನಲ್ಲಿ ಗ್ರಾಂಡ್ ಸ್ಲಾಂ ನಲ್ಲಿ ಅಲ್ಕರಾಜ್ ಅವರು ಭಾಗವಹಿಸಲಿದ್ದಾರೆ.   
* ಅಲ್ಕರಾಜ್ ಒಂದೇ ವರ್ಷದಲ್ಲಿ ಓಪನ್ ಹಾಗೂ ವಿಂಬಲ್ಡನ್ ಟ್ರೋಫಿ ಗೆದ್ದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. 
-  ಒಂದೇ ವರ್ಷದಲ್ಲಿ ಓಪನ್ ಹಾಗೂ ವಿಂಬಲ್ಡನ್ ಟ್ರೋಫಿ ಗೆದ್ದಆಟಗಾರರು :
1 ರಾಡ್ ಲೇವರ್ (1969) 
2 ಬೊರ್ನ್ ಬೋರ್ಗ್ (1978-80)
3 ರಾಫೆಲ್ ನಡಾಲ್ (2008, 2010) 
4 ರೋಜರ್ ಫೆಡರರ್ (2009)
5 ಜೋಕೊವಿಕ್ (2021) 
6 ಅಲ್ಕರಾಜ್ (2024)
* ಅಲ್ಕರಾಜ್ ವೃತ್ತಿಜೀವನದ ಮೊದಲ 4 ಗ್ರಾಂಡ್ ಸ್ಲಾಂ ಫೈನಲ್ ಗೆದ್ದ 2ನೇ ಆಟಗಾರರಾಗಿದ್ದಾರೆ. ರೋಜರ್ ಫೆಡರರ್ ಮೊದಲಿಗರು.
* ಅಲ್ಕರಾಜ್ ಅವರು ಒಂದೇ ವರ್ಷದಲ್ಲಿ ವಿಂಬಲ್ಡನ್‌- ಫ್ರೆಂಚ್ ಓಪನ್ ಗೆದ್ದ ಕಿರಿಯ ಆಟಗಾರ. ಬೋರ್ನ್ ಬೋರ್ಗ್ 1978ರಲ್ಲಿ ಈ ಸಾಧನೆ ಮಾಡಿದ್ದರು.
* ಅಲ್ಕರಾಜ್ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸ್ಪೇನ್‌ನ 4ನೇ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.  ರಾಫೆಲ್ ನಡಾಲ್, ಗಾರ್ಬಿನ್ ಮುಗುರುಜಾ, ಕೊಂಚಿಟಾ ಮಾರ್ಟಿನೆಜ್ ಹಿಂದಿನ ಮೂವರು ಆಟಗಾರರಾಗಿದ್ದಾರೆ.
* ಮುಕ್ತ ಟೆನಿಸ್ ಯುಗದಲ್ಲಿ ಆಡಿದ ಮೊದಲ 20 ವಿಂಬಲ್ಡನ್ ಪಂದ್ಯಗಳಲ್ಲಿ ಎರಡನೇ ಗರಿಷ್ಠ ಗೆಲುವು ದಾಖಲಿಸಿದ ಆಟಗಾರ ಕಾರ್ಲೋಸ್ ಅಲ್ಕರಾಜ್ (18) ಆಗಿದ್ದರೆ. ರಾಡ್ ಲೇವರ್ (19) ಅಗ್ರಸ್ಥಾನದಲ್ಲಿದ್ದಾರೆ.