*  ಆಸ್ಟ್ರೇಲಿಯಾದ ಹಿರಿಯ ಆಲ್​ರೌಂಡರ್​ ಶಾನ್ ಮಾರ್ಷ್(Shaun Marsh) ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ತಮ್ಮ 23 ವರ್ಷಗಳ ಸುದೀರ್ಘ ಕ್ರಿಕೆಟ್​ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ
* ಸದ್ಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಈ ಎಡಗೈ ಬ್ಯಾಟರ್‌, ಬುಧವಾರ (ಜ.17) ಸಿಡ್ನಿ ಥಂಡರ್ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
* 40 ವರ್ಷದ ಶಾನ್ ಮಾರ್ಷ್ ಅವರು ಮಿಚೆಲ್​ ಮಾರ್ಷ್​ ಅವರ ಸಹೋದರನಾಗಿದ್ದಾರೆ. “ನಾನು ರೆನೆಗೇಡ್ಸ್‌ ತಂಡದ ಪರ ಕಳೆದ ಐದು ವರ್ಷ ಆಡಿ ಹಲವರ ಸ್ನೇಹ ಸಂಪಾದಿಸಿದ್ದೇನೆ. ಈ ಪ್ರೀತಿ ಜೀವಿತಾವಧಿಯಲ್ಲಿ ಉಳಿಯಲಿದೆ” ಎಂದು ಮಾರ್ಷ್ ತಮ್ಮ ನಿವೃತ್ತಿ ನಿರ್ಧಾರದ ವೇಳೆ ತಿಳಿಸಿದ್ದಾರೆ.
* 2008 ರಲ್ಲಿ ನಡೆದ ಚೊಚ್ಚಲ ಐಪಿಎಲ್​ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದ್ದ ಶಾನ್​ ಮಾರ್ಷ್​ ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆದಿದ್ದರು. ಈ ಆವೃತ್ತಿಯಲ್ಲಿ ಗರಿಷ್ಠ ರನ್​ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದು ಐಪಿಎಲ್​ ಇತಿಹಾಸದಲ್ಲಿ ಮೊದಲ ಆರಂಜ್​ ಕ್ಯಾಪ್​ ಗೆದ್ದ ಆಟಗಾರ ಎನ್ನುವ ಹಿರಿಮೆ ಹೊಂದಿದ್ದಾರೆ. 
* ಚೊಚ್ಚಲ ಆವೃತ್ತಿಯಲ್ಲಿ 11 ಪಂದ್ಯಗಳನ್ನಾಡಿದ್ದ ಮಾರ್ಷ್ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 616 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್ ಸೀಸನ್​ವೊಂದರಲ್ಲಿ 600 ಪ್ಲಸ್​ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
* ಆಸ್ಟ್ರೇಲಿಯಾ ಪರ 38 ಟೆಸ್ಟ್‌ಗಳು, 73 ಏಕದಿನ ಮತ್ತು 15 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್​ನಲ್ಲಿ 2265, ಏಕದಿನ 2773, ಮತ್ತು ಟಿ20ಯಲ್ಲಿ 255 ರನ್ ಗಳಿಸಿದ್ದಾರೆ. ಒಟ್ಟು 13 ಶತಕಗಳು ಮತ್ತು 25 ಅರ್ಧಶತಕಗಳು ಬಾರಿಸಿದ್ದಾರೆ. 17ನೇ ವಯಸ್ಸಿನಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ್ದರು.