* ಹೊಚ್ಚಹೊಸ ವಂದೇ ಸಾಧಾರಣ ಪುಶ್-ಪುಲ್ ರೈಲು ಅಕ್ಟೋಬರ್ 29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್ ಅನ್ನು ತಲುಪಿದೆ. ಇದು ಮುಂಬರುವ ವಾರದಲ್ಲಿ ಪ್ರಯೋಗಗಳಿಗೆ ಒಳಗಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
* ಈ ರೈಲಿನಲ್ಲಿ 22-ಬೋಗಿಗಳಿದ್ದು, 8 ಜನರಲ್ ಕೋಚ್, 2 ಲಗ್ಗೇಜ್ ಕೋಚ್ ಗಳಿದ್ದು, ಹಾಗೂ ನಾನ್-ಎಸಿ 3-ಟೈಯರ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ಕೈಗೆಟುಕುವ ದರವನ್ನು ಒದಗಿಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
* ರೈಲು 1,800 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡು WAP5 ಇಂಜಿನ್‌ಗಳಿಂದ ಎಳೆಯಲಾಗುತ್ತದೆ, ಇದು 130 kmph ಅನ್ನು ತಲುಪುವ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
* ಅಕ್ಟೋಬರ್ 12 ರಂದು ಮಾಡಿದ ಪ್ರಕಟಣೆಯಲ್ಲಿ ರೈಲ್ವೆ ಮಂಡಳಿಯ ಕಾರ್ಯದರ್ಶಿ ಮಿಲಿಂದ್ ದೇವುಸ್ಕರ್, ಭಾರತೀಯ ರೈಲ್ವೇಯು ವಂದೇ ಭಾರತ್ ಸ್ಲೀಪರ್ ಕೋಚ್ ಮತ್ತು ವಂದೇ ಭಾರತ್ ಮೆಟ್ರೋಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ವರದಿ ಮಾಡಿದೆ.
* ಚನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟಿಗ್ರಾಲ್ ಕೋಚ್ ಪ್ಯಾಕ್ಟರಿ (ಐಸಿ ಎಫ್) ನಲ್ಲಿ ವಂದೇ ಸಾಧಾರಣ ರೈಲು ತಯಾರಿಸಲಾಗಿದ್ದು, 65 ಕೋಟಿ ರೂ ರೈಲಿನ ಉತ್ಪಾದನಾ ವೆಚ್ಚ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಸಾಧಾರಣ ರೈಲು ಮುಂಬೈ ಗೆ ಆಗಮನ
Published by Bhagya R K
01 ನವೆಂಬರ್ 2023