* ಕರ್ನಾಟಕ ರಾಜ್ಯ ಸರಕಾರ 'ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇದ ವಿದೇಯಕ-2023' ಅನ್ನು ಮಂಡಿಸಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
* ಈ ವಿದೇಯಕದಡಿ ವಕೀಲರ ಮೇಲೆ ಹಲ್ಲೆ ಅಥವಾ ಹಿಂಸಾಚಾರ ನಡೆಸುವವರಿಗೆ 6 ತಿಂಗಳಿಂದ 3 ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವುದಕ್ಕೆ ಅವಕಾಶವಿದೆ.
* 'ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇದ ವಿದೇಯಕ-2023' ಪ್ರಮುಖ ಅಂಶಗಳು :
1. ಬಾಕಿ ವ್ಯಾಜ್ಯಗಳಿಗೆ ಸಂಬಂಧಿಸಿ ವಕೀಲರ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯುವ ಮತ್ತು ವಕೀಲರ ವಿರುದ್ಧದ ಹಿಂಸಾಚಾರದ ಕೃತ್ಯಗಳನ್ನು ಮಸೂದೆ ನಿಷೇಧಿಸುತ್ತದೆ.
2. ಜೀವಕ್ಕೆ ಅಪಾಯವನ್ನುಂಟು ಮಾಡುವ, ದೈಹಿಕ ಹಾನಿಯಂಟು ಮಾಡುವ ಅಥವಾ ವಕೀಲರನ್ನು ಬೆದರಿಸುವ ಯಾವುದೇ ಚಟುವಟಿಕೆ ಹಿಂಸಾಚಾರ ಎಂದು ಪರಿಗಣಿಸಲ್ಪಡುತ್ತದೆ.
3. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನಡಿ ಕಾನೂನು ವೃತ್ತಿಪರರು ಈ ವಿಧೇಯಕದ ರಕ್ಷಣೆ ಪಡೆಯುತ್ತಾರೆ. ಕಾನೂನು ಜಾರಿ ಸಂಸ್ಥೆಯ ಕರ್ತವ್ಯ ನಿರ್ವಹಿಸಲು ವಕೀಲರ ವಿರುದ್ಧ ಯಾವುದೇ ಕಾನೂನುಬದ್ದ ನಿರ್ಬಂಧ ಅಥವಾ ಕ್ರಮಕೈಗೊಂಡರೆ ಅದು ಹಿಂಸಾಚಾರಕ್ಕೆ ಸಮನಾಗುವುದಿಲ್ಲವೆಂದು ವಿಧೇಯಕ ವಿವರಿಸಿದೆ.
4. ವಕೀಲರ ಬಂಧನ ಸನ್ನಿವೇಶದಲ್ಲಿ ಪೊಲೀಸರು ಈ ವಿಚಾರವನ್ನು ಆ ವಕೀಲರು ನೋಂದಾಯಿಸಿಕೊಂಡಿರುವ ಅಡ್ವಕೇಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ 24 ಗಂಟೆಯೊಳಗೆ ತಿಳಿಸುವುದು ಕಡ್ಡಾಯವಾಗಿದೆ.
5. ವಕೀಲರ ವಿರುದ್ಧದ ಹಿಂಸಾಚಾರಕ್ಕೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ, 1 ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಗುರುವಾರ, 14 ಡಿಸೆಂಬರ್ 2023
5:27 ಅಪರಾಹ್ನ
Daily PDF
ವಕೀಲರ ಮೇಲಿನ ಹಿಂಸಾಚಾರ ನಿಷೇದ ವಿದೇಯಕ ಮಂಡನೆ
Authored by:
Yallamma G