* ವಿಶ್ವಸಂಸ್ಥೆಯ ಕಾಂಬ್ಯಾಟ್ ಡಿಸರ್ಟಿಫಿಕೇಷನ್ ಸಮಾವೇಶದ (UNCCD) ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಡಾ. ರಿಕಿ ಕೇಜ್ ಅವರು ನೇಮಕಗೊಂಡಿದ್ದಾರೆ. ಯುಎನ್‌ಸಿಸಿಡಿಯ ಮುಖ್ಯಸ್ಥ ಇಬ್ರಾಹಿಂ ಥಿಯಾವ್ ಅವರು ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಇವರ ನೇಮಕವನ್ನು ಪ್ರಕಟಿಸಿದರು.
* ಜೂನ್ 15 ರಂದು ನ್ಯೂಯಾರ್ಕ್‌ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಉನ್ನತ ಮಟ್ಟದ ಕಾರ್ಯಕ್ರಮದೊಂದಿಗೆ ಮರುಭೂಮಿ ಮತ್ತು ಬರಗಾಲದ ದಿನವನ್ನು ಜಾಗತಿಕವಾಗಿ ಆಚರಿಸುವ ಎರಡು ವಾರಗಳ ಮೊದಲು ಈ ನೇಮಕವನ್ನು ಮಾಡಲಾಗಿದೆ.
* ರಿಕಿ ಕೇಜ್ ಅವರು,ಯುಎನ್‌ಸಿಸಿಡಿ ಸದ್ಭಾವನಾ ರಾಯಭಾರಿಗಳು, ಸಂಗೀತಗಾರರಾದ ಬಾಬಾ ಮಾಲ್ ಮತ್ತು ಇನ್ನಾ ಮೊಟ್ಟಾ ಅವರೊಂದಿಗೆ ಪ್ರದರ್ಶನ ನೀಡಲಿದ್ದಾರೆ. ಈ ವರ್ಷದ ಮರುಭೂಮಿ ಮತ್ತು ಬರಗಾಲದ ದಿನವು “ಅವಳ ಭೂಮಿ” ಎಂಬ ಘೋಷಣೆಯಡಿಯಲ್ಲಿ ಮಹಿಳೆಯರ ಭೂಮಿಯ ಹಕ್ಕುಗಳ ಮೇಲೆ ಜಾಗತಿಕ ಗಮನವನ್ನು ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯ ಯುಎನ್‌ಸಿಸಿಡಿ ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಡಾ.ರಿಕಿಕೇಜ್ ನೇಮಕ
Published by Yallamma G
17 ಜೂನ್ 2023