* ಹವಾಮಾನ ಬದಲಾವಣೆ ಮತ್ತು ಮಾನವರ ಅತಿಕ್ರಮಣವು ವಲಸೆ ಜೀವಿಗಳ ಮೇಲೆ ಅಗಾಧ ಪರಿಣಾಮ ಬೀರಿದ್ದು, ಜಗತ್ತಿನಲ್ಲಿ ವಲಸೆ ಹೋದ ಒಟ್ಟು ಜೀವಿಗಳಲ್ಲಿ ಐದನೇ ಒಂದರಷ್ಟು ಅಳಿವಿನ ಅಂಚಿಗೆ ಜಾರುವ ಅಪಾಯಕ್ಕೆ ಸಿಲುಕಿವೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
* 1979ರ ವಲಸೆ ಪ್ರಾಣಿಗಳ ಸಂರಕ್ಷಣೆಗೆ ವಿಶ್ವಸಂಸ್ಥೆಯ ನಿರ್ಣಯದ ಅಡಿಯಲ್ಲಿ 1,189 ಪ್ರಬೇಧಗಳಲ್ಲಿ ಶೇ 44ರಷ್ಟು ಅಳವಿನಂಚಿಗೆ ಜಾರಿವೆ, ಶೇ 22ರಷ್ಟು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
* ಸಂತಾನೋತ್ಪತ್ತಿ ಮತ್ತು ಆಹಾರಕ್ಕಾಗಿ ಪ್ರತಿವರ್ಷ ಸಾವಿರಾರು ಜೀವಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದ್ದು, ಮಾನವ ಚಟುವಟಿಕೆಗಳು, ಹವಾಮಾನದಂತಹ ಅಂಶಗಳು ವಲಸೆ ಜೀವಿಗಳ ಸಂತಾನೋತ್ಪತ್ತಿ ಆಹಾರದ ಮೇಲೆ ಪರಿಣಾಮ ಬೀರಿದಲ್ಲದೇ ಅವುಗಳ ವಾಸಸ್ಥಾನಕ್ಕೂ ಇವು ಬೆದರಿಕೆ ತಂದೊಡ್ಡಿದೆ ಎಂದು ವರದಿ ತಿಳಿಸಿದೆ.
ಗುರುವಾರ, 15 ಫೆಬ್ರುವರಿ 2024
12:48 ಅಪರಾಹ್ನ
Daily PDF
ವಿಶ್ವಸಂಸ್ಥೆ ವರದಿ : ಅಳಿವಿನಂಚಿಗೆ ಜಾರುತ್ತಿವೆ ವಲಸೆ ಜೀವಿಗಳು
Authored by:
Yallamma G