* ವಿಶ್ವಂಸಂಸ್ಥೆಯ ಭದ್ರತಾ ಮಂಡಳಿಯನ್ನು (ಯುಎನ್‌ಎಸ್‌ಸಿ) ಪ್ರಸ್ತುತ ಕಾಲಘಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಸುಧಾರಣೆ ಮಾಡಬೇಕು ಎಂಬ ಭಾರತದ ಆಗ್ರಹಕ್ಕೆ ಅಮೆರಿಕ ಬೆಂಬಲ ಸೂಚಿಸಿದೆ.
* 21ನೇ ಶತಮಾನದಲ್ಲಿ ಜಗತ್ತಿನ ಭೌಗೋಳಿಕ ಹಾಗೂ ರಾಜಕೀಯ ವಾಸ್ತವಿಕತೆಯ ಅನುಗುಣವಾಗಿ ಭದ್ರತಾ ಮಂಡಳಿ ಸುಧಾರಣೆ ಮಾಡಬೇಕು ಎಂದು ಭಾರತ ಒತ್ತಾಯಿಸಿದೆ.
* ''70 ವರ್ಷಗಳ ಹಿಂದೆ ರಚನೆಯಾಗಿದ್ದ ಭದ್ರತಾ ಮಂಡಳಿಯ ಸ್ವರೂಪ, ಕಾರ್ಯವಿಧಾನ, ಪ್ರಾತಿನಿಧ್ಯತೆ ಇಂದಿನ ಸಂದರ್ಭಕ್ಕೆ ಅನುಗುಣವಾಗಿ ನೈಜ ಪ್ರತಿಬಿಂಬವಾಗಿ ಉಳಿದಿಲ್ಲ,'' ಎಂದು ಹೇಳಿರುವ ವಿಶ್ವಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್, ''ಭದ್ರತಾ ಮಂಡಳಿಯಲ್ಲಿ ಜಿ4 ಶೃಂಗದ ಸದಸ್ಯ ರಾಷ್ಟ್ರಗಳಾದ ಜಪಾನ್, ಜರ್ಮನಿ, ಭಾರತ, ಬ್ರೆಜಿಲ್ ಜೊತೆಗಿನ ಚರ್ಚೆಯಲ್ಲೂ ಇವು ಯುಎನ್ಎಸ್‌ಸಿ ಶಾಶ್ವತ ಸದಸ್ಯರಾಗಬೇಕು ಎಂಬ ಬಹು ದಿನದ ಬೇಡಿಕೆಗೆ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಆಡಳಿತ ಬೆಂಬಲವನ್ನು ನೀಡಲಿದೆ,'' ಎಂದು ಹೇಳಿದರು.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ: ಭಾರತಕ್ಕೆ ಅಮೆರಿಕದ ಬೆಂಬಲ
Published by Akshata Halli
22 ಏಪ್ರಿಲ್ 2024