* ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿಗೆ ನಂದಿನಿ ಡೈರಿ (ಕರ್ನಾಟಕ ಮಿಲ್ಕ್ ಫೆಡರೇಷನ್, ಕೆಎಮ್‌ಎಫ್) ಪ್ರಾಯೋಜಕತ್ವ ನೀಡುತ್ತಿದ್ದು, ಈ ಮೂಲಕ ಕರ್ನಾಟಕದ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಿದೆ.
* ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಜೂನ್ 1ರಿಂದ 29ರವರೆಗೆ ನಡೆಯಲಿದ್ದು, 'ನಂದಿನಿ ಡೈರಿ' ಲೋಗೋ ತಂಡಗಳ ಸಮವಸ್ತ್ರಗಳ ಮೇಲೆ ರಾರಾಜಿಸಲಿದೆ.
* ಕರ್ನಾಟಕದ ದೇಶೀಯ ಬ್ರಾಂಡ್ ಆಗಿರುವ ನಂದಿನಿಯು ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳ ಪ್ರಾಯೋಜನಕಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ಹಾಗೂ ಜಿಂಬಾಬ್ವೆ ತಂಡಕ್ಕೆ ನಂದಿನಿ ಬ್ರಾಂಡ್ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಕೆ ಎಮ್ಎಫ್ ನ ವ್ಯವಸ್ಥಾಪಕ ಮತ್ತು ನಿರ್ದೇಶಕರಾದ ಕೆ.ಎಂ.ಜಗದೀಶ್ ಅವರು ತಿಳಿಸಿದ್ದಾರೆ.
* ಕರ್ನಾಟಕದ ರಾಜ್ಯ ಸರ್ಕಾರ ಸ್ವಾಮ್ಯದ ಹೆಮ್ಮೆಯ ಡೈರಿ ನಂದಿನಿ ಬ್ರಾಂಡ್ ಎಂದು ಈ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳೆಗೆ ಅಂತಾರಾಷ್ಟ್ರೀಯ ನಂದಿನಿ ಬ್ರಾಂಡ್ ಆಗಿ ಗುರುತಿಸಿಕೊಳ್ಳಲು ಸಜ್ಜಾಗಿದೆ.
ಸೋಮವಾರ, 22 ಎಪ್ರಿಲ್ 2024
3:45 ಅಪರಾಹ್ನ
Daily PDF
ಕರ್ನಾಟಕದ ಹೆಮ್ಮೆ ಟಿ20 ವಿಶ್ವಕಪ್ ತಂಡಗಳಿಗೆ ನಂದಿನಿ ಡೈರಿ ಪ್ರಾಯೋಜಕತ್ವ
Authored by:
Bhagya R K