* ಪ್ರಪಂಚದಲ್ಲೇ ಅತ್ಯಂತ ಕಡಿಮೆ ಜನನ ದರವನ್ನು ಹೊಂದಿದ ಜಪಾನ್ ಇದೀಗ ವಿಶ್ವದಲ್ಲೇ ಅತಿಹೆಚ್ಚು ವೃದ್ಧರನ್ನು ಹೊಂದಿದ ರಾಷ್ಟ್ರವಾಗಿಯೂ ಹೊರಹೊಮ್ಮಿದೆ.
* ಇದು ದೇಶದ ಎಲ್ಲಾ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರುತ್ತದೆ. ಉದ್ಯೋಗ ದರ ಕಡಿಮೆಯಾಗಿ ದೇಶದ ಆರ್ಥಿಕತೆಯೂ ಕುಸಿಯಲಿದೆ.
* ಜಪಾನ್‌ನಲ್ಲಿ ಪ್ರತಿ 10 ಜನರಲ್ಲಿ ಒಬ್ಬರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವೃದ್ಧರ ಸಂಖ್ಯೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.
* ವಿಶ್ವದಲ್ಲೇ ಅತಿಹೆಚ್ಚು ವೃದ್ಧರನ್ನು ಹೊಂದಿದ ಎರಡನೇ ರಾಷ್ಟ್ರ ಇಟಲಿ ಹಾಗೂ ಮೂರನೇ ದೇಶ ಫಿನ್‌ಲ್ಯಾಂಡ್ ಆಗಿದೆ. ಇಟಲಿಯ ಜನಸಂಖ್ಯೆಯ ಶೇ. 24.5 ರಷ್ಟು ಹಾಗೂ ಫಿನ್‌ಲ್ಯಾಂಡ್ ಜನಸಂಖ್ಯೆಯ ಶೇ.23.6 ರಷ್ಟು ಜನರು 66ಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದಾರೆ.
ವಿಶ್ವದಲ್ಲೇ ಅತಿಹೆಚ್ಚು ವೃದ್ಧರನ್ನು ಹೊಂದಿದ ರಾಷ್ಟ್ರವಾಯ್ತು ಜಪಾನ್
Published by Tajabi Pathan
23 ಸೆಪ್ಟೆಂಬರ್ 2023