* ವಿಶ್ವದ ದಾರಿದ್ರ್ಯ ಸೂಚ್ಯಂಕ (HAMI) ಪಟ್ಟಿಯನ್ನ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಜಿಂಬಾಬ್ವೆ ಮೊದಲ ಸ್ಥಾನದಲ್ಲಿದ್ದು, ಸ್ವಿಟ್ಜರ್ ಲ್ಯಾಂಡ್ 157ನೇ ಸ್ಥಾನದಲ್ಲಿದೆ
* ಈ ಸಂಸ್ಥೆ ವಿಶ್ವಾದ್ಯಂತ ಒಟ್ಟು 157 ದೇಶಗಳ ಆರ್ಥಿಕ ಸ್ಥಿತಿಗತಿಯ ವಿಶ್ಲೇಷಣೆ ನಡೆಸಿ ರ‍್ಯಾಂಕಿಂಗ್ ನೀಡಿದ್ದು, ಇದನ್ನ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
* ವಿಶ್ವದ ದಾರಿದ್ರ್ಯ ಸೂಚ್ಯಂಕ (HAMI) ಪಟ್ಟಿಯನ್ನ ಬಿಡುಗಡೆ ಮಾಡಲಾಗಿದ್ದು, ಪ್ರಸಿದ್ಧ ಆರ್ಥಿಕ ತಜ್ಞ ಸ್ಟೀವ್ ಹಾಂಕೆ ಅವರ ಸಂಸ್ಥೆ ಈ ಆರ್ಥಿಕ ಸ್ಥಿತಿಗತಿಯ ವಿಶ್ಲೇಷಣೆ ನಡೆಸಿದೆ.
* ಇನ್ನು ಅತೀ ದರಿದ್ರ ದೇಶಗಳ ಮೊದಲ 15 ಸ್ಥಾನಗಳಲ್ಲಿ ವೆನಿಜುವೆಲಾ, ಸಿರಿಯಾ, ಲೆಬನಾನ್, ಸುಡಾನ್, ಅರ್ಜೈಂಟೀನಾ, ಯೆಮೆನ್, ಉಕ್ರೈನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ, ಅಂಗೋಲಾ, ಟೋಂಗಾ ಮತ್ತು ಘಾನಾ ಸೇರಿವೆ.
* ಸೂಚ್ಯಂಕಗಳ ಪಟ್ಟಿಯ ಪ್ರಕಾರ, ಭಾರತ 103ನೇ ಸ್ಥಾನದಲ್ಲಿದ್ದು, ಇದಕ್ಕೆ ಮುಖ್ಯ ಕಾರಣ ನಿರುದ್ಯೋಗ ಎಂದಿದೆ. ಇನ್ನು ವಿಶ್ವದ ದೊಡ್ಡಣ್ಣ ಅಮೆರಿಕ 134ನೇ ಸ್ಥಾನಲ್ಲಿದೆ.
ವಿಶ್ವದ 'ದರಿದ್ರ ದೇಶ'ಗಳ ಪಟ್ಟಿ ಬಿಡುಗಡೆ ; 'ಜಿಂಬಾಬ್ವೆ'ಗೆ ಮೊದಲ ಸ್ಥಾನ
Published by Yallamma G
26 ಮೇ 2023