* ವಿಶ್ವದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ 10 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೇಶದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ಬೆಂಗಳೂರು ವಿಮಾನ ನಿಲ್ದಾಣವು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ.
* 2023ರಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿರುವ ವಿಮಾನ ನಿಲ್ದಾಣಗಳ ಪಟ್ಟಿಯನ್ನು ವಿಮಾನಯಾನ ವಿಶ್ಲೇಷಣಾ ಸಂಸ್ಥೆಯಾದ ಸಿರಿಯಮ್ ಜನವರಿ 02 ರಂದು ಬಿಡುಗಡೆಗೊಳಿಸಿದೆ.
* ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2023 ರಲ್ಲಿ ವಾರ್ಷಿಕ ಆನ್-ಟೈಮ್ ಪರ್ಫಾರ್ಮೆನ್ಸ್ (OTP) ಗಾಗಿ ವಿಶ್ವದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
* ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆ ಸರ್ಕಮ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಹೈದರಾಬಾದ್ ವಿಮಾನ ನಿಲ್ದಾಣವು ವಿಶ್ವದ ಎರಡನೇ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣವಾಗಿದೆ ಮತ್ತು ಬೆಂಗಳೂರು ವಿಮಾನ ನಿಲ್ದಾಣ ಮುಂದಿನ ಸ್ಥಾನದಲ್ಲಿದೆ.
* "ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಮಯೋಚಿತ ನಿರ್ಗಮನದ ಅನುಭವವನ್ನು ಉಳಿಸಿಕೊಂಡಿದೆ, ಜುಲೈನಲ್ಲಿ 87.51 ಶೇಕಡಾ ಸಮಯಪಾಲನೆ, ಆಗಸ್ಟ್ ನಲ್ಲಿ 89.66 ಶೇಕಡಾ ಮತ್ತು ಸೆಪ್ಟೆಂಬರ್ ನಲ್ಲಿ 88.51 ಶೇಕಡಾ" ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವದ ಅತ್ಯತ್ತಮ ಕಾರ್ಯಕ್ಷಮತೆ ಪಟ್ಟಿ : ಬೆಂಗಳೂರು ಏರ ಪೋರ್ಟ್ ಗೆ 3 ನೇ ಸ್ಥಾನ
Published by Bhagya R K
03 ಜನವರಿ 2024