* ರಾಷ್ಟ್ರ ರಾಜಧಾನಿ ದೆಹಲಿಯ ವಾಯುವಿನ ಗುಣಮಟ್ಟ ಮತ್ತಷ್ಟು ಕುಸಿದಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನ್ಯವಿರುವ ನಗರ ಎನಿಸಿದೆ.
* ವಾಯುಮಾಲಿನ್ಯ ಪ್ರಮಾಣ ಇದೇ ಗತಿಯಲ್ಲಿ ಮುಂದುವರಿದಲ್ಲಿ ನಗರ ಜನತೆಯು ತಮ್ಮ ಆಯಸ್ಸಿನಲ್ಲಿ 11.9 ವರ್ಷಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
* ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್‌ಟಿಟ್ಯೂಟ್ (ಇಪಿಐಸಿ) ಬಿಡುಗಡೆ ಮಾಡಿರುವ 'ವಾಯು ಗುಣಮಟ್ಟ ಜೀವನ ಸೂಚ್ಯಂಕ' (ಎಕ್ಯುಎಲ್‌ಐ) ಕುರಿತ ವರದಿಯಲ್ಲಿ ಈ ಅಂಶಗಳಿವೆ.
* ದೇಶದ ಜನಸಂಖ್ಯೆಯಲ್ಲಿ ಶೇ 67.4ರಷ್ಟು ಜನರು ಪ್ರಮಾಣಿತ ರಾಷ್ಟ್ರೀಯ ವಾಯು ಗುಣಮಟ್ಟ 40 ಮೈಕ್ರೊ ಗ್ರಾಮ್/ಘನ ಮೀಟರ್‌ಗಿಂತ ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
* ಮಾಲಿನ್ಯಕಾರಕ 'ಪಿಎಂ 2.5'ನ ಮಟ್ಟವು ಭಾರತೀಯರ ಆಯಸ್ಸನ್ನು 5.3 ವರ್ಷಗಳಷ್ಟು ಕಡಿಮೆ ಮಾಡಲಿದೆ.
ವಿಶ್ವದ ಅತಿ ಹೆಚ್ಚು ಮಾಲಿನ್ಯ ನಗರ ದೆಹಲಿ: ಷಿಕಾಗೊ ವಿವಿ ವರದಿ
Published by Bhagya R K
29 ಆಗಸ್ಟ್ 2023