* ಆಸ್ಟ್ರೇಲಿಯಾದ ಸ್ಪಿನರ್ ನಾಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳಿಸುವ ಮೂಲಕ ವಿಶ್ವದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 36 ವರ್ಷದ ಲ್ಯಾನ್ 500 ವಿಕೆಟ್ ಪಡೆದ ಆಸ್ಟ್ರೇಲಿಯಾದ 3ನೇ ಬೌಲರ್ ಕೂಡಾ ಆಗಿದ್ದಾರೆ. ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತು ವೇಗಿ ಗ್ಲೆನ್ ಮೆಕ್ ಗ್ರಾತ್ ಮೊದಲಿಬ್ಬರು.
* ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ನ 2ನೇ ಇನಿಂಗ್ಸ್ ನಲ್ಲಿ ಫಹೀಮ್ ಅಕ್ಷಫ್ ರನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ ನಾಥನ್ ಲ್ಯಾನ್ ಈ ಸಾಧನೆ ಮಾಡಿದರು. ವೃತ್ತಿಜೀವನದ 123ನೇ ಟೆಸ್ಟ್ ನಲ್ಲಿ ಲ್ಯಾನ್ ಈ ಸಾಧನೆಯನ್ನು ಮಾಡಿದ್ದಾರೆ.
* ಲ್ಯಾನ್ ವಿಶ್ವದ 4ನೇ ಸ್ಪಿನ್ನರ್ ಮತ್ತು ಮುತ್ತಯ್ಯ ಮುರಳೀಧರನ್ ಬಳಿಕ ಈ ಸಾಧನೆ ಮಾಡಿದ 2ನೇ ಆಫ್ ಸ್ಪಿನ್ನರ್ ಆಗಿದ್ದಾರೆ. ಭಾರತದ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿರುವ ಮತ್ತೋರ್ವ ಸ್ಪಿನ್ನರ್ ಆಗಿದ್ದರೆ.
* ಆಸ್ಟ್ರೇಲಿಯಾದ ಶೇನ್ ವಾರ್ನ್ 2006ರಲ್ಲಿ ನಿವೃತ್ತಿ ಹೊಂದಿದ ಬಳಿಕ ಸಮರ್ಥ ಸ್ಪಿನ್ನರ್ ಸಿಗದೆ ಚಡಪಡಿಸುತ್ತಿದ್ದ ಆಸ್ಟ್ರೇಲಿಯಾಗೆ 2011ರಲ್ಲಿ ನಾಥನ್ ಲ್ಯಾನ್ ಟೆಸ್ಟ್ ಪದಾರ್ಪಣೆ ಮಾಡಿದ ಬಳಿಕ ಆ ಕೊರತೆ ನೀಗಿಸಿದ್ದರು.
ಸೋಮವಾರ, 18 ಡಿಸೆಂಬರ್ 2023
4:26 ಅಪರಾಹ್ನ
Daily PDF
ವಿಶ್ವದ 8ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾದ ನಾಥಲ್ ಲ್ಯಾನ್
Authored by:
Yallamma G