* ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಜಪಾನ್‌ನ ಕೊಬೆಯಲ್ಲಿ ನಡೆದ ಐದನೇ ದಿನವಾದ ಮೇ 21 ರಂದು (ಮಂಗಳವಾರ) ಭಾರತವು 3 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಜಯಿಸಿದೆ.
* ಜಪಾನ್‌ನ ಕೋಬ್‌ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸುಮಿತ್ ಆಂಟಿಲ್ ಪುರುಷರ ಎಫ್64 ಜಾವೆಲಿನ್ ಸ್ಪರ್ಧೆಯಲ್ಲಿ 69.50 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಜಯಿಸಿದ್ದಾರೆ.
* ಟೋಕಿಯೊ ಪ್ಯಾರಾಲಿಂಪಿಕ್ಸ್ ಮತ್ತು 2023ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಆಂಟಿಲ್, ಮುಡಿಗೆ ಇದೀಗ ಮತ್ತೊಂದು ಚಿನ್ನದ ಪದಕ ಏರಿದಂತಾಗಿದೆ.
* ಸಂದೀಪ್ 60.41 ಮೀಟರ್ ಎಸೆತದೊಂದಿಗೆ ಕಂಚಿನ ಪದಕ ಪಡೆದರೆ, ಶ್ರೀಲಂಕಾದ ದುಲಾನ್ ಕೊಡಿತುವಕ್ಕು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
* 2023 ರ ಅಕ್ಟೋಬರ್‌ನಲ್ಲಿ ನಡೆದ ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ಜಾವೆಲಿನ್ ಥ್ರೋ F64 ಈವೆಂಟ್‌ನಲ್ಲಿ 73.29 ಮೀ ವಿಶ್ವ ದಾಖಲೆಯ ಪ್ರಯತ್ನದೊಂದಿಗೆ ಚಿನ್ನದ ಪದಕವನ್ನು ಗೆದ್ದ ನಂತರ ಆಂಟಿಲ್ ಪುರುಷರ ಜಾವೆಲಿನ್ (F64) ನಲ್ಲಿ ಪ್ರಸ್ತುತ ವಿಶ್ವ ದಾಖಲೆ ಹೊಂದಿರುವವರು.
* ಟಿ63 ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತಂಗವೇಲು ಮರಿಯಪ್ಪನ್ ಅವರು 1.88 ಮೀ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಮಹಿಳೆಯರ ಎಫ್51 ವಿಭಾಗದ ಕ್ಲಬ್ ಥೋನಲ್ಲಿ ಎಕ್ತಾ ಬಯಾನ್ (20.12 ಮೀ), ಕಾಶೀಶ್ ಲಾಕ್ರಾ (14.56 ಮೀ) ಕ್ರಮವಾಗಿ ಚಿನ್ನ, ರಜತ ಪದಕ ಗಳಿಸಿದ್ದಾರೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಸುಮಿತ್ ಆಂಟಿಲ್ ಗೆ ಚಿನ್ನ
Published by Bhagya R K
22 ಮೇ 2024