* ಕೆ.ವಿ.ನಾರಾಯಣ ಅವರ 'ನುಡಿಗಳ ಅಳಿವು' ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ₹1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.
* ನವದೆಹಲಿಯಲ್ಲಿ ಮಾರ್ಚ್ 8ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೆ.ವಿ.ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
* ಉರ್ದು, ಡೋಗ್ರಿ ಹಾಗೂ ಬಂಗಾಳಿ ಭಾಷೆಯ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
* ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಹಳೆಮನಿ ರಾಜಶೇಖರ್ ಮತ್ತು ಡಾ.ಸರೂಜ್ ಕಾಟ್ಕರ್ ಇದ್ದರು.
* ಒಟ್ಟಾರೆ 8 ಕವನ ಸಂಕಲನಗಳು, 3 ಕಾದಂಬರಿಗಳು, 2 ಸಣ್ಣ ಕಥೆಗಳು, 3 ಪ್ರಬಂಧಗಳು, 3 ಸಾಹಿತ್ಯ ವಿಮರ್ಶೆ, 1 ನಾಟಕ ಮತ್ತು 1 ಸಂಶೋಧನೆಗೆ ಪ್ರಶಸ್ತಿಗಳು ಲಭ್ಯವಾಗಿವೆ.
* ಪ್ರಶಸ್ತಿಗೆ ಭಾಜನರಾದವರಲ್ಲಿ ಹಿಂದಿ ಕವಿ ಗಗನ್ ಗಿಲ್, ಇಂಗ್ಲಿಷ್ ಲೇಖಕ ಈಸ್ಟರಿನ್ ಕೈರ್, ಮಲಯಾಳಂನ ಕೆ. ಜಯಕುಮಾರ್, ದೀಪಕ್ ಕುಮಾರ್ ಶರ್ಮಾ(ಸಂಸ್ಕೃತ), ಮುಕೇಶ್ ಥಾಲಿ(ಕೊಂಕಣಿ), ಎ.ಆರ್. ವೆಂಕಟಾಚಲಪತಿ(ತಮಿಳು) ಪ್ರಮುಖರು.
ವಿಮರ್ಶಕ ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Published by Jyoti Angadi
19 ಡಿಸೆಂಬರ್ 2024