* ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಆಯ್ಕೆಯಾಗಿದ್ದಾರೆ.
* ಈ ಪುರಸ್ಕಾರ ₹5 ಲಕ್ಷ ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದ್ದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ.
* ಗುಜರಾತ್‌ನ ಸೂರತ್‌ನ ಹಿಮಾಂಶಿ ಶೆಲತ್ ಅವರು ಹೊಸತನದ ಬರವಣಿಗೆ ಶೈಲಿಯಿಂದ ಗುಜರಾತಿ ಹಾಗೂ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
* ಕಥೆ, ಕಾದಂಬರಿ, ಪ್ರಬಂಧ, ಸಾಹಿತ್ಯ ವಿಮರ್ಶೆ ಹಾಗೂ ಅನುವಾದ ಪ್ರಕಾರಗಳಲ್ಲಿ ಅವರ 20 ಪುಸ್ತಕಗಳು ಪ್ರಕಟವಾಗಿವೆ.
* ಕೇಂದ್ರ ಸಾಹಿತ್ಯ ಅಕಾಡೆಮಿ (1996) ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಕೂಡ ಅವರಿಗೆ ಲಭಿಸಿದೆ.
* ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ 2025ರ ಜನವರಿ ತಿಂಗಳಲ್ಲಿ ನಡೆಸಲು ಸಮಿತಿಯು ತೀರ್ಮಾನಿಸಿದೆ.
* ಹಿಮಾಂಶಿ ಅವರು 8.1.1947ರಂದು ಗುಜಾರತ್‌ನ ಸೂರತ್‌ನಲ್ಲಿ ಜನಿಸಿದರು. 1966ರಲ್ಲಿ ಬಿ.ಎ ಮತ್ತು 1968ರಲ್ಲಿ ಎಂ.ಎ ಪದವಿ ಪಡೆದಿದ್ದಾರೆ.
* 1981-82ರಲ್ಲಿ ವಿ.ಎಸ್ ನೈಪಾಲ್ ಅವರ ಕಾದಂಬರಿಗಳ ಕುರಿತ ಅಧ್ಯಯನಕ್ಕಾಗಿ ಪಿಹೆಚ್‌ಡಿ ಪದವಿಯನ್ನೂ ಪಡೆದಿದ್ದಾರೆ. 1968 ರಿಂದ 1994ರಲ್ಲಿ ಅವರು ಸ್ವಯಂ ನಿವೃತ್ತಿ ಹೊಂದುವವರೆಗೂ ಸೂರತ್‌ನ ಎಂಟಿಬಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಅವರಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ
Published by Siddaram Halli
19 ಡಿಸೆಂಬರ್ 2024