* ವಿಜ್ಞಾನಿ ವಿಭವ್ ಕುಮಾರ್ ತಾಲುಕ್ ದಾರ್ ಅವರಿಗೆ ''ದ ಹ್ಯಾರಿ ಮೆಸೆಲ್' ಅಂತಾರಾಷ್ಟ್ರೀಯ ಗೌರವ ಲಭಿಸಿದೆ. ಘಂಡಾಮೃಗಗಳ ಸಂರಕ್ಷಣೆಗಾಗಿ ವಿಭವ್ ಕುಮಾರ್ ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
* ಅಬುಧಾಬಿಯಲ್ಲಿ ನಡೆಯುತ್ತಿರುವ ಪರಿಸರ ಸಂರಕ್ಷಣಾ ಅಂತಾರಾಷ್ಟ್ರೀಯ ಒಕ್ಕೂಟದ (ಐಯುಸಿಎನ್) ಸಭೆಯಲ್ಲಿ ತಾಲೂಕ್‌ದಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
* 2020ರಲ್ಲಿ ಅಸ್ಸಾಂ ಸರಕಾರ ರೂಪಿಸಿದ್ದ ಭಾರತದಲ್ಲಿನ ಫೇಂಡಾಮೃಗಗಳ ಸಂರಕ್ಷಣಾ ಯೋಜನೆಗೆ ತಾಲೂಕ್‌ದಾರ್ ಸಹಕಾರ ನೀಡಿದ್ದರು. ಇವರು ಈಶಾನ್ಯ ಭಾರತದಲ್ಲಿನ ಜೀವವೈವಿಧ್ಯ ಸಂರಕ್ಷಣೆಗಾಗಿ ಸ್ಥಾಪಿಸಿದ್ದ ಅರಣ್ಯಕ್ ಎಂಬ ಸರಕಾರೇತರ ಸಂಸ್ಥೆಯ ಸಿಇಒ ಕೂಡ ಆಗಿದ್ದಾರೆ.
* ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ಕಳೆದ 25 ವರ್ಷಗಳಲ್ಲಿ ಸುಮಾರು 60 ಯೋಜನೆಗಳನ್ನು ಕೈಗೊಂಡಿದ್ದಾರೆ ಮತ್ತು 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
* ಅಸ್ಸಾಂ ಫೇಂಡಾಮೃಗಗಳ ಆವಾಸಸ್ಥಾನವಾಗಿದೆ. ಜಗತ್ತಿನಲ್ಲಿರುವ ಒಟ್ಟು ಘಂಡಾಮೃಗಗಳ ಪೈಕಿ ಶೇ.80ರಷ್ಟು ಅಸ್ಸಾಂನಲ್ಲಿವೆ. ಇಲ್ಲಿ ಪ್ರಸ್ತುತ 4014 ಫೇಂಡಾಮೃಗಗಳು ಇವೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಅಸ್ಸಾಂನ ಕಾಝಿರಂಗ, ಮನಾಸ್ ರಾಷ್ಟ್ರೀಯ ಉದ್ಯಾನವನ ಹಾಗೂ ಪ್ರೊಬಿತೋರಾ ನಲ್ಲಿ ಫೇಂಡಾಮೃಗಗಳು ವಾಸಿಸುತ್ತವೆ.
ವಿಜ್ಞಾನಿ ತಾಲುಕ್ ದಾರ್ ಗೆ ' ದಿ ಹ್ಯಾರಿ ಮೆಸೆಲ್ ' ಅಂತಾರಾಷ್ಟ್ರೀಯ ಗೌರವ
Published by Yallamma G
28 ಅಕ್ಟೋಬರ್ 2024