* ಪಾಕಿಸ್ತಾನ ಮೂಲದ ಜಾಗತಿಕ ಭಯೋತ್ಪಾದಕರ ಪಟ್ಟಿ ಘೋಷಿಸುವಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೆಲ ಸದಸ್ಯರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಭಾರತ ಕಿಡಿಕಾರಿದೆ.
* ಪರೋಕ್ಷವಾಗಿ ಚೀನಾ ಧೋರಣೆಯನ್ನು ಟೀಕಿಸಿರುವ ಭಾರತ 'ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೆಲ ಸದಸ್ಯ ರಾಷ್ಟ್ರಗಳು ತಮ್ಮ ವಿಟೊ ಅಧಿಕಾರವನ್ನು ಪ್ರಸ್ತಾವನೆಗಳಿಗೆ ತಡೆವೊಡ್ಡುವುದು ಅಥವಾ ನಿರ್ಬಂಧಿಸುವುದಕ್ಕೆ ಸೀಮಿತವಾಗಿರಿಸಿ ಕೊಂಡಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.
* ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಾತನಾಡಿ, ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, 'ಸವಾಲು ನಿಭಾಯಿಸುವಲ್ಲಿ ಭದ್ರತಾ ಮಂಡಳಿಯ ಕಾರ್ಯವೈಖರಿ ಹೀನಾಯವಾಗಿದೆ' ಎಂದಿದ್ದಾರೆ.
ವೀಟೊ ತಡೆ ನಿರ್ಬಂಧ ದುರ್ಬಳಕೆ : ಚೀನಾ ವಿರುದ್ಧ ಭಾರತ ಕಿಡಿ
Published by Yallamma G
26 ಏಪ್ರಿಲ್ 2024