➤ ಅಕ್ಟೋಬರ್ 15, 2026 ರಂದು ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (AIIA) ನಡೆದ ಮೂರನೇ ಆವೃತ್ತಿಯ ಕೌಮಾರಭೃತ್ಯ ಅಂತರರಾಷ್ಟ್ರೀಯ ಸಮ್ಮೇಳನ ‘ಕೌಮಾರಕಾನ್-2026’ (KAUMARACON-2026) ಅನ್ನು ಅಧಿಕೃತವಾಗಿ ಉದ್ಘಾಟಿಸಿದರು.
➤ ಸಮ್ಮೇಳನದ ಮುಖ್ಯ ಥೀಮ್ (Theme): "ಶೇಪಿಂಗ್ ದಿ ಫ್ಯೂಚರ್ ಆಫ್ ಚೈಲ್ಡ್ ಹೆಲ್ತ್: ಗ್ಲೋಬಲ್ ಪರ್ಸ್ಪೆಕ್ಟಿವ್ಸ್, ರಿಸರ್ಚ್ ಇನ್ನೋವೇಷನ್ಸ್, ಅಂಡ್ ಕ್ಲಿನಿಕಲ್ ಫ್ರಾಂಟಿಯರ್ಸ್ ಇನ್ ಕೌಮಾರಭೃತ್ಯ" (Shaping the Future of Child Health: Global Perspectives, Research Innovations, and Clinical Frontiers in Kaumarabhritya).
➤ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಪ್ರಮುಖ ಡಿಜಿಟಲ್ ಉಪಕ್ರಮಗಳು ಮತ್ತು ತಂತ್ರಜ್ಞಾನಗಳು: ಆಯುರ್ವೇದ ರಂಗದಲ್ಲಿ ಡಿಜಿಟಲೀಕರಣ ಮತ್ತು ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಉಪರಾಷ್ಟ್ರಪತಿಗಳು ಹಲವು ಪ್ರಮುಖ ಪೋರ್ಟಲ್‌ಗಳು ಮತ್ತು ಅಪ್ಲಿಕೇಷನ್‌ಗಳಿಗೆ ಚಾಲನೆ ನೀಡಿದರು:
1. ಆಯುಷ್ ಸ್ಟಾರ್ಟ್-ಅಪ್ ಪೋರ್ಟಲ್ (AYUSH Start-up Portal)
2. AIIA–iCAINE ವೆಬ್‌ಸೈಟ್
3. ಆಯುರ್ವೇದ ಡಿಜಿಟಲ್ ಇನ್ನೋವೇಷನ್ ಅಂಡ್ ವೆಂಚರ್ ಆಕ್ಸಿಲರೇಷನ್ ಫೆಸಿಲಿಟಿ (AyuDIVA)
4. ವಾಮನ ಆಪ್ (Vamana App)
5. ಪಂಚಕರ್ಮ ಅಸೆಸ್‌ಮೆಂಟ್ ಆಪ್ (Panchakarma Assessment App)
ಹಾಗೆಯೇ, ಅಮೆರಿಕದ ಮಹರ್ಷಿ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ (MIU) ಮತ್ತು ನವದೆಹಲಿಯ AIIA ನಡುವೆ ಅಂತರರಾಷ್ಟ್ರೀಯ ಮಟ್ಟದ ತಿಳಿವಳಿಕೆ ಒಪ್ಪಂದ (MoU) ವಿನಿಮಯ ಮಾಡಿಕೊಳ್ಳಲಾಯಿತು.
➤ ಪ್ರಮುಖ ಭಾಷಣದ ಮುಖ್ಯಾಂಶಗಳು:
- ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ವೈಜ್ಞಾನಿಕ ಆಧಾರ: ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಲು ಮತ್ತು ಜನರ ವಿಶ್ವಾಸಾರ್ಹತೆ ಹೆಚ್ಚಿಸಲು ಹೆಚ್ಚಿನ ವೈಜ್ಞಾನಿಕ ಸಂಶೋಧನೆಗಳು ಅತ್ಯಗತ್ಯ ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯಪಟ್ಟಿದ್ದಾರೆ.
- AIIMS ಮಟ್ಟಕ್ಕೆ AIIA ಅಭಿವೃದ್ಧಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು (AIIA) ಏಮ್ಸ್ (AIIMS) ಸಂಸ್ಥೆಗೆ ಸಮಾನವಾಗಿ ಬೆಳೆಸುವ ಕನಸು ನನಸಾಗುತ್ತಿದೆ ಎಂದು ಅವರು ತಿಳಿಸಿದರು.
- ಮಕ್ಕಳ ಆರೋಗ್ಯಕ್ಕೆ ಅಗ್ರಸ್ಥಾನ: ದೇಶದ ಮಾನವ ಸಂಪನ್ಮೂಲದ ಗುಣಮಟ್ಟವನ್ನು ಸುಧಾರಿಸಲು ಮತ್ತು 2047ರ ವೇಳೆಗೆ 'ವಿಕಸಿತ ಭಾರತ' (Viksit Bharat) ನಿರ್ಮಾಣ ಮಾಡಲು ಮಕ್ಕಳ ಆರೋಗ್ಯ, ಪೋಷಣೆ, ರೋಗ ತಡೆಗಟ್ಟುವಿಕೆ ಮತ್ತು ಭಾವನಾತ್ಮಕ ಸದೃಢತೆಗೆ ವಿಶೇಷ ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದರು.
- ಆಯುಷ್ ಸಚಿವಾಲಯದ ಪಾತ್ರ: 2014ರಲ್ಲಿ ಪ್ರತ್ಯೇಕ ಆಯುಷ್ ಸಚಿವಾಲಯದ (Ministry of AYUSH) ಸ್ಥಾಪನೆಯ ನಂತರ, ಭಾರತದ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರವು ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಐಸಿಎಂಆರ್ (ICMR), ಸಿಎಸ್‌ಐಆರ್ (CSIR), ಡಿಬಿಟಿ (DBT), ಡಿಎಸ್‌ಟಿ (DST) ಮತ್ತು ಏಮ್ಸ್ ಸಂಸ್ಥೆಗಳ ಜೊತೆ ಆಯುಷ್ ಸಚಿವಾಲಯವು ಅಂತರಶಿಸ್ತೀಯ ಸಹಯೋಗವನ್ನು ಹೊಂದಿದೆ.

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ