* ಉತ್ತರಪ್ರದೇಶದ ಮಥುರಾದ ಬೃಂದಾವನದಲ್ಲಿ ಬಾಲಕಿಯರ ಮೊದಲ ಸೈನಿಕ ಶಾಲೆಯಾದ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ (ಜನವರಿ 8) ಉದ್ಘಾಟಿಸಿದರು.
* ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಸಲುವಾಗಿ ಸರಕಾರವು ಬಾಲಕಿಯರ ಸೈನಿಕ ಶಾಲೆಗಳನ್ನು ತೆರೆಯುವ ನಿರ್ಧಾರ ತೆಗೆದುಕೊಂಡಿದೆ.
* ಖಾಸಗಿ ವಲಯದ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ ಶಾಲೆಗಳನ್ನು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿದೆ. ಈ ಪೈಕಿ 42 ಶಾಲೆಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ 19 ಶಾಲೆಗಳು ಆರಂಭವಾಗಿವೆ. ಬೃಂದಾವನ ಶಾಲೆಯಲ್ಲಿ 870 ಬಾಲಕಿಯರಿಗೆ ಪ್ರವೇಶ ಅವಕಾಶವಿದೆ.
* "ನಾವು ಸೈನಿಕ ಶಾಲೆಗಳಿಗೆ ಹೆಣ್ಣು ಮಕ್ಕಳ ಪ್ರವೇಶವನ್ನು ಅನುಮೋದಿಸಿದಾಗ ಇದು ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಒಂದು ಸುವರ್ಣ ಕ್ಷಣವಾಗಿದೆ. ಇಂದು, ನಮ್ಮ ಮಹಿಳೆಯರು ಕೇವಲ ಯುದ್ಧ ವಿಮಾನಗಳನ್ನು ಹಾರಿಸುತ್ತಿಲ್ಲ; ಅವರು ಗಡಿಗಳನ್ನು ಭದ್ರವಡಿಸುತ್ತಿದ್ದಾರೆ' ಎಂದು ಸಿಂಗ್ ಅವರು ಹೇಳಿದರು.
* 2021-22ರ ಶೈಕ್ಷಣಿಕ ಅವಧಿಯಿಂದ ಹಂತ ಹಂತವಾಗಿ ಜಾರಿಗೆ ಬರುವಂತೆ 2019 ರಲ್ಲಿ ರಾಜನಾಥ್ ಸಿಂಗ್ ಅವರು ಸೈನಿಕ ಶಾಲೆಗಳಿಗೆ ಹೆಣ್ಣು ಮಕ್ಕಳ ಪ್ರವೇಶವನ್ನು ಅನುಮೋದಿಸಿದ್ದರು.
* ಮಿಜೋರಾಂನ ಸೈನಿಕ್ ಸೊಲ್ ಚಿಂಗ್ ಚಿಮ್ನಲ್ಲಿ ರಕ್ಷಣಾ ಸಚಿವಾಲಯ ಪ್ರಾರಂಭಿಸಿದ ಪ್ರಾಯೋಗಿಕ ಯೋಜನೆಯ ಯಶಸ್ಸಿನ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
* ವೃಂದಾವನದ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳವಾರ, 09 ಜನವರಿ 2024
3:50 ಅಪರಾಹ್ನ
Daily PDF
ಉತ್ತರಪ್ರದೇಶದ ಮಥುರಾದಲ್ಲಿ ದೇಶದ ಮೊದಲ ಬಾಲಕಿಯರ ಸೈನಿಕ ಶಾಲೆ
Authored by:
Yallamma G