➤ ಕೇಂದ್ರ ಲೋಕಸೇವಾ ಆಯೋಗವು (UPSC) ಅಕ್ಟೋಬರ್ 1, 2026 ಕ್ಕೆ ತನ್ನ ಸ್ಥಾಪನೆಯ 100 ವರ್ಷಗಳನ್ನು (ಶತಮಾನೋತ್ಸವ) ಪೂರ್ಣಗೊಳಿಸಿದೆ. 1926 ರಲ್ಲಿ ಬ್ರಿಟಿಷ್ ಆಡಳಿತಾವಧಿಯಲ್ಲಿ ಬರಿ ಸಲಹಾ ಮಂಡಳಿಯಾಗಿ ಪ್ರಾರಂಭವಾದ ಈ ಸಂಸ್ಥೆ, ಇಂದು ಭಾರತದ ಸಂವಿಧಾನಬದ್ಧ ಮತ್ತು ಸ್ವಾಯತ್ತ ಸಂಸ್ಥೆಯಾಗಿ ಬೆಳೆದುಬಂದ ಹಾದಿಯ ಸಮಗ್ರ ಮಾಹಿತಿ ಇಲ್ಲಿದೆ.
➤ ಯುಪಿಎಸ್‌ಸಿ ಐತಿಹಾಸಿಕ ಹಿನ್ನೆಲೆ (1926 - 2026)
- 1855 (ಐಸಿಎಸ್ ಪರೀಕ್ಷೆಯ ಆರಂಭ): ಮೆರಿಟ್ (ಅರ್ಹತೆ) ಆಧಾರದ ಮೇಲೆ ಭಾರತೀಯ ನಾಗರಿಕ ಸೇವೆಗೆ (ICS) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಲಂಡನ್‌ನಲ್ಲಿ ಪ್ರಾರಂಭವಾಯಿತು.
- 1863 (ಮೊದಲ ಭಾರತೀಯ ಐಸಿಎಸ್ ಅಧಿಕಾರಿ): ಸತ್ಯೇಂದ್ರನಾಥ ಟ್ಯಾಗೋರ್ (ರವೀಂದ್ರನಾಥ ಟ್ಯಾಗೋರ್ ಅವರ ಸಹೋದರ) ಐಸಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಭಾರತೀಯರಾದರು.
- 1919 (ಭಾರತ ಸರ್ಕಾರ ಕಾಯ್ದೆ): ಮೊಂಟಾಗು-ಚೆಮ್ಸ್‌ಫರ್ಡ್ ಸುಧಾರಣೆಗಳ ಅಡಿಯಲ್ಲಿ ಭಾರತದಲ್ಲಿ ಲೋಕಸೇವಾ ಆಯೋಗವನ್ನು ಸ್ಥಾಪಿಸಲು ಶಿಫಾರಸು ಮಾಡಲಾಯಿತು.
- 1922 (ಭಾರತದಲ್ಲಿ ಮೊದಲ ಬಾರಿ ಪರೀಕ್ಷೆ): ಐಸಿಎಸ್ ಪರೀಕ್ಷೆಯನ್ನು ಲಂಡನ್ ಜೊತೆಗೆ ಭಾರತದ ಅಲಹಾಬಾದ್‌ನಲ್ಲಿ ಪ್ರಥಮ ಬಾರಿಗೆ ನಡೆಸಲಾಯಿತು.
- 1924 (ಲೀ ಕಮಿಷನ್): ಲಾರ್ಡ್ ಲೀ ನೇತೃತ್ವದ ಕಮಿಷನ್ ತಕ್ಷಣವೇ ಶಾಸನಬದ್ಧ ಲೋಕಸೇವಾ ಆಯೋಗವನ್ನು ಸ್ಥಾಪಿಸಲು ಶಿಫಾರಸು ಮಾಡಿತು.
- 1926 (ಆಯೋಗದ ಸ್ಥಾಪನೆ - ಅಕ್ಟೋಬರ್ 1, 1926): ಸರ್ ರೋಸ್ ಬಾರ್ಕರ್ (Sir Ross Barker) ಅವರ ಅಧ್ಯಕ್ಷತೆಯಲ್ಲಿ ಭಾರತದ ಮೊದಲ ಲೋಕಸೇವಾ ಆಯೋಗ ಸ್ಥಾಪನೆಯಾಯಿತು. ದೆಹಲಿಯ ಮೆಟ್‌ಕಾಫ್ ಹೌಸ್ (Metcalfe House) ಇದರ ಮೊದಲ ಕಚೇರಿಯಾಗಿತ್ತು.  
➤ ಒಕ್ಕೂಟ ವ್ಯವಸ್ಥೆಯಿಂದ ಯುಪಿಎಸ್‌ಸಿವರೆಗೆ:
- 1935: ಭಾರತ ಸರ್ಕಾರ ಕಾಯ್ದೆ 1935 ರ ಪ್ರಕಾರ 'ಫೆಡರಲ್ ಪಬ್ಲಿಕ್ ಸರ್ವಿಸ್ ಕಮಿಷನ್' (FPSC) ಆಗಿ ಮಾರ್ಪಟ್ಟಿತು.
- 1947: ಎಚ್. ಕೆ. ಕೃಪಲಾನಿ ಅವರು ಆಯೋಗದ ಮೊದಲ ಭಾರತೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.26 ಜನವರಿ 
- 1950: ಭಾರತೀಯ ಸಂವಿಧಾನ ಜಾರಿಗೆ ಬಂದಾಗ, ಇದು 'ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್' (UPSC) ಎಂದು ಮರುನಾಮಕರಣಗೊಂಡಿತು.
- 1952 ನವದೆಹಲಿಯ ಧೋಲ್‌ಪುರ್ ಹೌಸ್ (Dholpur House) ಯುಪಿಎಸ್‌ಸಿಯ ಶಾಶ್ವತ ಪ್ರಧಾನ ಕಚೇರಿಯಾಯಿತು.
- 1992: ರೋಸ್ ಮಿಲಿಯನ್ ಬ್ಯಾಥ್ಯೂ ಖಾರ್ಬುಲಿ (Rose Millian Bathew Kharbuli) ಅವರು ಯುಪಿಎಸ್‌ಸಿಯ ಮೊದಲ ಮಹಿಳಾ ಅಧ್ಯಕ್ಷೆಯಾದರು.
➤ ಸಂವಿಧಾನಾತ್ಮಕ ನಿಯಮಗಳು (Articles 315 to 323): ಸಂವಿಧಾನದ ಭಾಗ XIV (Part XIV) ರ ಚಾಪ್ಟರ್ II ರಲ್ಲಿ ವಿಧಿ 315 ರಿಂದ 323 ರವರೆಗೆ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸಲಾಗಿದೆ.
ವಿಧಿ 315: ಕೇಂದ್ರಕ್ಕೆ (UPSC) ಮತ್ತು ರಾಜ್ಯಗಳಿಗೆ (KPSC ಇತ್ಯಾದಿ) ಲೋಕಸೇವಾ ಆಯೋಗಗಳ ಸ್ಥಾಪನೆ.
ವಿಧಿ 316: ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಹಾಗೂ ಅಧಿಕಾರಾವಧಿ.
ವಿಧಿ 317: ಲೋಕಸೇವಾ ಆಯೋಗದ ಸದಸ್ಯರ ವಜಾ ಮತ್ತು ಅಮಾನತು.
ವಿಧಿ 320: ಆಯೋಗದ ಕಾರ್ಯಗಳು ಮತ್ತು ಕರ್ತವ್ಯಗಳು (ಪರೀಕ್ಷೆಗಳ ನಡೆಸುವುದು ಮತ್ತು ಸರ್ಕಾರಕ್ಕೆ ಸಲಹೆ ನೀಡುವುದು).
ವಿಧಿ 322: ಲೋಕಸೇವಾ ಆಯೋಗಗಳ ವೆಚ್ಚಗಳು (ಭಾರತದ ಸಂಚಿತ ನಿಧಿಯಿಂದ ವೆಚ್ಚ ಮಾಡಲಾಗುತ್ತದೆ).
ವಿಧಿ 323: ಆಯೋಗದ ವಾರ್ಷಿಕ ವರದಿಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುವುದು.