* ಬಿ. ವೀರಪ್ಪ ಅವರು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಿಎಸ್ಐ ನೇಮಕಾತಿ ಹಗರಣದ ತನಿಖಾ ವರದಿ ಸಿದ್ದಗೊಳಿಸಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಸಿದ್ದರು. ಇದೀಗ ವೀರಪ್ಪ ಅವರನ್ನೇ ರಾಜ್ಯ ಸರ್ಕಾರ, ಕರ್ನಾಟಕ ಉಪ ಲೋಕಾಯುಕ್ತರನ್ನಾಗಿ ನೇಮಿಸಿದೆ.
* ಕರ್ನಾಟಕ ರಾಜ್ಯ ಪ್ರಸ್ತುತ ಲೋಕಾಯುಕ್ತರು ಭೀಮನಗೌಡ ಸಂಗನಗೌಡ ಪಾಟೀಲ್.
* ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 1961ರ ಜೂನ್ 1ರಂದು ಜನಿಸಿದ್ದ ವೀರಪ್ಪ, ರೇಣುಕಾಚಾರ್ಯ ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು 1988ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 1995 ರಿಂದ 2015 ವಕೀಲರಾಗಿ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
* 2015 ಜನವರಿಯಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯ ಮೂರ್ತಿಯಾಗಿ ನೇಮಕಗೊಂಡಿದ್ದ ವೀರಪ್ಪ, 2016 ರಿಂದ 2023 ರ ವರೆಗೆ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.
* 2021ರಲ್ಲಿ ಪೊಲೀಸ್ ಸಬ್ - ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಗಳ ಕುರಿತ ತನಿಖೆಗೆ ನೇಮಿಸಿದ್ದ ಆಯೋಗದ ಅಧ್ಯಕ್ಷರೂ ಆಗಿದ್ದರು.